ಈ ಪುಟವನ್ನು ಪರಿಶೀಲಿಸಲಾಗಿಲ್ಲ.
828 ಕರ್ಣಾಟಕ ಕವಿಚರಿತ
[17 ನೆಯ
ನುಡಿಸಿದರೆ ನುಡಿದೆನಾಂ ಬೆಡಗುಗಳ ಗಡಣದಿಂ ಕಡುಸೊಬಗುವಡೆದ ಕೃತಿಯ || ಮೃಡಶರಣರರಿಗೆಆಗಿ ಸಡಗರದೊಳೊಡರಿಸುವೆ | ಬಿಡದೆ ತಪ್ಪಡಸಿಬಂದೊಡೆ ಕಲಿಸಿ ನಡೆಗೊಳಿಸಿ | ಮೃಡಭಕ್ತಿಗೊಡಲಿತ್ತು ಪಡೆದರ್ಧ ಕೆಡದರ್ಧಕೆಡೆವೆತ್ತ ದೃಢಚಿತ್ತರು || ಶ್ರುತಿಯ ಸೊಬಗುಗಳ ಸಂಗತಿಯ ಸಾರದ ಮಹೋ | ನ್ನ ತಿಯನುಪಮಾನಂದರತಿಯ ರಂಜಕದ ಗಿರಿ | ಸುತೆಯು ನಿಜಪತಿಯ ಘನನುತಿಯ ಚದುರತೆಯ ಪದಗತಿಯ ಸತ್ಕ್ರತಿಯ ಕಥೆಯ || ಕ್ಷಿತಿಯೊಳಗೆ ಮೆಳವಂತುಟತಿಮುದದೊಳೆನ್ನ ಬಡ | ಮತಿಗೆ ತಕ್ಕಂತೆ ನಾಂ ನುತಿಸುವೆನ' ನತಿ ಕೇಳಿ | ಸಿತಗಳನ ಕವಿಗಳಪ್ರತಿಯೆನಿಸುತಿರ್ದ ವಸುಮತಿಯೊಳಗೆ ಗತಿಗೊಳಿಪುದು || __ __ __ __
ದೊಡ್ಡ ಷಡಕ್ಷರಿಸ್ವಾಮಿ ಸು 650 ಈತನು ವಚನಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ; ನಂಜನಗೂಡು ನಂಜುಂಡೇಶ್ವರನನ್ನು ಸ್ತುತಿಸುತ್ತಾನೆ; ಆ ಸ್ಥಳದವನಾಗಿರಬಹುದೋ ಏನೋ ತಿಳಿಯದು. ಇವನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ
ವಚನಗಳು ವಚನಗಳು ಎಂಬ ಹೆಸರಿದ್ದರೂ ಈ ಗ್ರಂಥವು ಹಾಡಿನರೂಪವಾ ಗಿರುವ ಪಟ್ಟದಿಯಲ್ಲಿ ಬರೆದಿದೆ; ಪ್ರಯಿಕವಾಗಿ ನಂಜನಗೂಡು ನಂಜುಂ ಡೇಶ್ವರ, ಪಾರ್ವತಿ ಅವರುಗಳ ಸ್ತುತಿರೂಪವಾಗಿದೆ. ಕೆಲವು ಪದಗಳು ಶಿವಪೂಜಾಪದ್ಧತಿಯನ್ನು ವಿವರಿಸುತ್ತವೆ. ಒಂದೆರಡು ಪದ್ಯಗಳನ್ನು ಉದಾ ಹರಿಸುತ್ತೇವೆ_ _ ವರಗಿರಿಜಾನನಸರಸಿರುಹಾರ್ಕನೆ | ಕರುಣಾರಸಮಯನಿರುಪಮಮಹಿಮನೆ | ನಿರಘಚರಿತ್ರನೆ ಕಪಿಲಾಕ್ಷೇತ್ರದ ಗರಳವುರಾಧಿಪನೆ || ಗರುವನೆ ಘನಗಂಭೀರನೆ ಧೀರನೆ | ಶರಣಾಗತಜನಪಾಲನೆ ಲೋಲನೆ | ನರಸುರವಂದ್ಯನೆ ಪರತರನಂಜುಂಡೇತ ಕೃಪಾಕರನೆ ||