ಶತಮಾನ] ನೇಮಿವ್ರತಿ. 439 ಗುರುಲಿಂಗಜಂಗಮಚಾರಿತ್ರ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 5, ಪದ್ಯ 937, ಇದಕ್ಕೆ ಮಹತ್ತಿನಕಾವ್ಯ ಎಂಬ ಹೆಸರೂ ಇರುವಂತೆ ತೋರುತ್ತದೆ. ನೇಮಿವ್ರತಿ ಸು [650 ಈತನು ಸುವಿಚಾರಚರಿತೆಯನ್ನು ಬರೆದಿದ್ದಾನೆ. ಇವನು ಜೈನಕವಿ; ಬ್ರಹ್ಮಚಾರಿಯೆಂದು ಹೇಳಿಕೊಂಡಿದ್ದಾನೆ;ಸುಮಾರು 1650 ರಲ್ಲಿ ಇದ್ದಿರಬಹು ದೆಂದು ಊಹಿಸುತ್ತೇವೆ. ಇವನ ಗ್ರಂಥ ಸುವಿಚಾರಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 10, ಪದ್ಯ 1265. ಇದರಲ್ಲಿ ಚತುರ್ಗತಿಗಳ ದುಃಖಗಳು, ಶ್ರಾವಕರ 11 ನೆಲೆಗಳು, ಮೋಕಸ್ವ ರೂಪ ಈಯಂಶಗಳು ಹೇಳಿವೆ. ಗ್ರಂಥಾವತಾರದಲ್ಲಿ ನೇಮಿಜಿನಸ್ತುತಿ ಇದೆ. ಬಳಕ ಕವಿ ನಿದಾ ದಿಗಳು, ವೃಷಭಸೇನಾದಿ ಗೌತಮಗಣಧರರು, ಕೊಂದ ಕುಂದ, ನೇಮಿಚಂದ್ರ, ಗುಣಭದ್ರ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ... ರವಿಯ ಮಂಡಲಕ ಜಲಾರ್ಥ್ಯ ಸಂಕ್ರಾಂತಿಯೊ | ಳವಿವೇಕಿಗಳೆ ದಾನವನು || ರವಿಶಶಿಗಳ ಗ್ರಹಣದೊಳು ಸ್ನಾನವ ಮಾಡು | ವವಿಚಾರವಿವು ಲೋಕಮೂಢ |ತ್ರಾಸುಗಟ್ಟಳೆಮಕ್ಟಸರಗಳೊಳೊಂದೊಂದು | ವೀಸವೀಸ ಹೆಚ್ಚು ಕುಂದು | ಲೇಸಹುದೆನಗೆಂದು ಮಾಡಿದಡದು ಮುಂದೆ | ಮೋಸ ಒಹುದು ಮೂಲಧನಕೆ || ಅನ್ನಕ್ಕೆ ಬಗೆಯಿಲ್ಲದವನಿಗನ್ನದ ಚಿಂತೆ | ಯನ್ನವಾದದಿ೦ದಮೇಲೆ | ಹೊನ್ನಿನ ಚಿಂತೆ ಹೊನ್ನುಗಳು ತಾನಾದರೆ | ಕನ್ನಿಕೆಯರ ಚಿಂತೆಯಹುದು | ನೆನೆದ ಕನ್ನಿಕೆಯಾದ ಬಳಿಕ ಮಕ್ಕಳ ಚಿಂತೆ | ತನಗವರಾದರವರಿಗೆ | ಮನೆಯ ಚಿಂತೆಯು ಮದುವೆಯ ಚಿಂತೆಮೊದಲಾದ ಘನಚಿಂತೆ ತಾನತಿಕಾಂಕ್ಷ . ವಚನದಿಂದಲೆ ಪುಣ್ಯ ವಚನದಿಂದಲೆ ಪಾಪ | ವಚನದಿಂದಲೆ ಮಿತ್ರ ವೈರಿ! ವಚನದಿಂದಲೆ ಸರ್ವಭೋಗಗಳೆಲ್ಲ ಸು | ವಚನದಿಂದಲೆ ಸ್ವರ್ಗ ತನಗೆ || ಹಣತೆಯೊಳುರಿವ ದೀವಿಗೆಯ ಪ್ರಕಾಶದೊಂ | ದೆಣಿಕೆ ಸಂಸಾರಸುಖಗಳು | ಗಣಿತವಿಲ್ಲದ ಲೋಕಗಳ ಬೆಳಗುವುದೊಂದು | ಮಣಿದೀಪದಂತೆ ಮೋಕ್ಷಗಳು
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.