ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಶತಮಾನ ಸಾಸಲಯ್ಯ ೪೪೧ ಚಾರಸದುಪದೇಶಕೃತಜನೋದ್ಧಾರ ಗೌರೀಪತಿಪಾದಪಂಕೇರುಹಷಟ್ನದೀಕೃತಮಾನಸ ಶ್ರೀಮಚ್ಛೀಲವಂತಕೊಪ್ಪಾಧಿನಾಧ ಶ್ರೀಮದನ್ನದಾನಿಮಲ್ಲಿಕಾರ್ಜುನಾಚಾರ್ಯವರ್ಯ ವಿರಚಿತೇ ತಾತ್ಪರ್ಯಸಂಗ್ರಹಕರ್ಣಾಟಭಾಷಾವಿವರಣೇ.

                            ಸಾಸಲಯ್ಯ 1654 

ಈತನು ಯಳಂದೂರು ತಾಲ್ಲೂಕು 1ನೆಯ ಶಾಸನವನ್ನು ಬರೆದುದಾಗಿ ಆ ಶಾಸನದಲ್ಲಿಯ ಬರೆದಂ ಬೊಮ್ಮಣಪಂಡಿತ | ವರತನಯಂ, ರಸಿಕಪಂಡಿತಂ ವೇಪ್ಪಿನಿದಂ || ಸರಸಕವಿ ಸಾಸಲಯ್ಯಂ | ಬರೆಯಿಸಿದಂ ಮುದ್ಧಭೂಪನೆನೆ ಮೆಚ್ಚದರಾರ್‌ | ಎಂಬ ಪದ್ಯದಿಂದ ತಿಳಿಯುತ್ತದೆ. ಈ ಶಾಸನವು ಶಕ 1576 ಜಯಸಂವತ್ಸರದಲ್ಲಿ-ಎಂದರೆ 1654ರಲ್ಲಿ ಬರೆದುದು.ಇದರಲ್ಲಿ ಹದಿನಾಡ ದೊರೆಯಾದ ಮುದ್ದ ರಾಜನು ಯಳಂದೂರ ಗೌರೀಶ್ವರದೇವರಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ. ಈ ರಾಜನ ಪರಂಪರೆಯನ್ನು ಕವಿ ಈರೀತಿಯಾಗಿ ಹೇಳಿದ್ದಾನೆ: ಪದಿನಾಡದೊರೆ ಸಿ೦ಗೆದೇಪಭೂಪ, ಇವನ ಮಗ ರಾಮನೃಪ, ಇವನ ತಮ್ಮ ಚೆನ್ನನೃಪ; ಇವನ ಮಕ್ಕಳು ತಿರುಮಲರಾಜ, ನಂಜರಾಜ; ತಿರುಮಲರಾಜನ ಮಗ ಮುದ್ದರಾಜ. ಸಾಸಲಯ್ಯನು ವೀರಶೈವಕವಿಯೆಂದು ತೋರುತ್ತದೆ ಈ ಶಾಸನದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:-

                           ಶಿವಸ್ತುತಿ 

ಶ್ರೀಗೌರೀಕುಚಕುಂಕುಮ | ರಾಗಾಂಕಿತವಕ್ಷನೆಸೆವ ಗೌರೀನಾಧಂ | ಈಗೆ ಸುಖೋದಯಮಂ ಕರು | ಣಾಗಾರಂ ಮುದ್ದಭೂಮಿಪಂಗತಿಮುದದಿಂ |

                          ಯಳಂದೂರು 

ನಳಿನಜನಖಿಳಪುರಂಗಳ | ನಳವಡೆ ಸೃಜಿಸಲ್ ಕಳಂಕಮಾದುವೆನುತ್ತುಂ | ಇಳೆಯೊಳ್ ಪೊಸತೀಪುರಮೆ೦ | ದೆಳೆಯಿಂದೂರೆಂಬ ಪೆಸರನಾಗಳ್ ಕರೆದಂ ||

                          ಮುದ್ದ ರಾಜ 

ಎಸೆವಾಭೂಪನ ಸೂನು ಸತ್ಯನಿಧಿ ಸದ್ಧರ್ಮಾನ್ವಿತಂ ಸಂತತಂ | ಕುಸಲಂಬೆತ್ತುರೆಯಾಳುತಿರ್ದು ಪದಿನಾಡಾಖ್ಯಾತಭೂಭಾಗಮಂ | ಕುಸುಮಾಸ್ತ್ರಾರಿಪದಾಂಬುಜಾತನವಭೃಂಗಂ ಯಾಚಕಾಧಾರನೇಂ | ವಸುಧಾಚಕ್ರದೊಳೊಲ್ದು ರಾಜಿಸಿದನೋ ಮುದ್ದೇ೦ದ್ರಭೂಪಾಲಕಂ ||