ಶತಮಾನ] ಸಂಪಾದನಯಗುರುಲಿಂಗದೇವ (53 ಮಡಿಸಿದೇಣಾಜಿನದೆ ಬಡಿದುಕೊಳುತಾಗಳಾ | ಗಡಣ ಸಂತಸದಿಂದೆ ಮೃಡಸುತಗೆ ಹರಕೆಯಂ ಕೊಡುತೆ ಕುಣಿಕುಣಿದರೊಸೆದು | ಸೂರ್ಯಾಸ್ತ : ಅನಿತರೊಳೆ ರಾಗದೊಡಗೂಡಿ ಪಶ್ಚಿಮಶರಧಿ | ಗಿನನಿಳೆದ ಭಾವಮದು ಚೆಲ್ವಾದುದೆ೦ತೆನಲ್ | ಮನಮೊಲಿದು ನಭಮೆಂಬ ಗರುಡಿಯೊಳ್ ಕೆಂಧೂಳನನುಗೊಳಿಸಿ ನಲವಿನಿಂದೆ | ಘನಸಾಧನೆಯ ಮಾಡಿದಾಬಳಲ್ಕೆಯ ಕಳೆಯ | ಲನುವಿನಿಂದಂಬರವನುಳಿದು ಮಜ್ಜನಗೈವೆ| ನೆನುತೆ ಪೋದಂತಾದುದಾಸಮಯದೊಳ್ ತವ್ರ೦ ಮುಸುಕಿತ್ತು ದಿಕ್ತಟಗಳಂ || ನಕ್ಷತ್ರ ಆಕಾಶವೆಂಬಾನೆಯಮರಾವತಿಯೊಳಿರ್ದ | ನೇಕಪಮನಂಡಲೆವುದೆಂದು ಮುನಿಸಂ ತಳೆಯು | ತಾಕುಲಿಶಧರನದರ ಮಸ್ತಕಂಬೊಯ್ಯೆ ಕೆದರಿದ ಮುತ್ತುಗಳ ಮೊತ್ತವೋ || ಆಕಾಶಕೇಶ ನಾಟ್ಯಮುಮನೆಸಗಲ್ಕೆ ಗಂ || ಗಾಕಾಂತೆ ಶಿರದೊಳ್ ತುಳುಂಕೆ ಜಲಬಿಂದುಗಳ | ನೇಕವಿಧದಿಂ ನೆಗೆದುವೆನೆ ತಾರಕಾಳಿ ಸೊಗಸಿರ್ದುದಾಗಸದೊಳಿಡಿದು || ಶಿವಸ್ತುತಿ ಕಳೆಯಾಣ್ಮನಂ ಜಡೆಗಳೊಳಗಿಡುತ್ತಲ್ಲಿ ನಿ !ನಿರ್ಮಳಗಂಗೆಯಂ ನಲಿದು ತಳೆಯುತುಂ ನಾಡೆ ಶ್ರೀ | ತಳವಾದ ಗಿರಿವರಂಗಳಿಯನೆನಿಸಾತನ ಮಗಳಮದುವೆಯಾಗುತ್ತಲುಂ || ಜಳದವ ನಿರಾಕರಿಪ ಗಳದಿಂದೆ ನಿಜಭಕ್ತ | ಕುಳಕೀಪ್ಸಿತದ ವರಂಗಳನಿತ್ತು ಹರಿನೇತ್ರ | ಜಳಜಪದನಾಗುತನಿಳಭುಕ್ಖಯಾಭರಣಗಳನಾಂತ ಶಿವನೆ ಶರಣು | ಇವನ ಯಕ್ಷಗಾನವು ನಮಗೆ ದೊರೆತಿಲ್ಲ. ಸಂಪಾದನೆಯ ಗುರುಲಿಂಗದೇವ, ಸು. [670 ಈತನು ಶೀಲವಂತಯ್ಯನ ತ್ರಿವಿಧಿಗೆಗೆ ವ್ಯಾಖ್ಯಾನವನ್ನು ಬರೆದಿದ್ದಾನೆ. 1 Vol. 1,158.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.