455 ಶತಮಾನ] ಚಿಕ್ಕದೇವರಾಜ ಭೈರವೇಶ್ವರಕಾವ್ಯದ ಕಥಾಸೂತ್ರರತ್ನಾಕರ ಇದು ಗದ್ಯಗ್ರಂಥ;ಇದರಲ್ಲಿ 81 ಕಥೆಗಳೂ 618ವಾಕ್ಯಗಳೂ ಇವೆ. ಕಿಕ್ಕೇರಿಯಾರಾಧ್ಯನಂಜುಂಡೇಶನೆಂಬ ಶಿವಕವೀಶ್ವರನು ಪೆ ಳಿದ ಭೈರವೇಶ್ವರ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನ್ನು ವಿಶಾಲವಾಗಿ ಬರೆದು ಸಂಗ್ರಹಿಸು ಎಂದು ವಿರಕ್ತನಾಮಶ್ಚಿವಾಯದೇವರು ನಿರೂಪಿಸೆ “ ಅವರ ನಿರೂಪವಿಡಿದು... ಲಕ್ಷಣಶುದ್ಧ ವಾಗಿ ಪೇಳಲ್ಪಟ್ಟ ವೀರಮಾಹೇಶ್ವರಸಿದ್ದಾ೦ತ, ವೀರಮಾಹೇಶ್ವರತಂತ್ರ, ವೀರಮಾಹೇಶ್ವರಾಚಾರಸಂಗ್ರಹ, ಸೋಮನಾದಭಾಷ್ಯ, ವಿವೇಕಚಿಂತಾಮಣಿ, ವೀರಶೈವಸುಧಾರ್ಣವ, ಗಣಭಾಷ್ಯರತ್ನಮಾಲೆ, ಬಸವೇಶ್ವರಪುರಾಣ, ಗಿರಿಜೆಯಕಲ್ಯಾಣ, ವೀರಶೈವಾಮೃತಪುರಾಣ, ಆರಾಧ್ಯಚಾರಿತ್ರ, ನನ್ನಯ್ಯನ ಕಾವ್ಯ, ಬಸವಚಾರಿತ್ರ, ಸಿಂಗಿರಾಜನ ಕೃತಿ, ಸಮಸ್ತಸಾಂಗತ್ಯಚಾರಿತ್ರ ಕಥೆಗಳಿಗೆ ಮಾತೃಸ್ಥಾನವಾಗಿರ್ಪ ಬಸವಾದಿಪುರಾತನರು ನಿರೂಪಿಸಿದ ಶೂನ್ಯ ಸಂಪಾದನೆ ಮೊದಲಾದ ವಚನಾಮೃತಸಾರದಲ್ಲಿ ಪೇಳುತ್ತಿರ್ದ ಕಥೆಗಳಂ ನೋಡಿ ಪುರಾತನರ ವಚನದ ಮೇಲ್ಪ೦ತಿವಿಡಿದು ಕಾವ್ಯದ ಕಧಾಸಂಗ್ರಹಕ್ಕೆ ಬೇಕಾದುವಂ ತೆಗೆದುಕೊಂಡು ಸಂಗ್ರಹಿಸಿದೆನು ” ಎಂದು ಕವಿ ಹೇಳುತ್ತಾನೆ. ಈ ಗ್ರಂಥವು ಯದ್ಯಪಿ ಮುಖ್ಯವಾಗಿ ಭೈರವೇಶ್ವರಕಾವ್ಯಕ್ಕೆ ವಿವರಣ ರೂಪವಾಗಿದ್ದರೂ ಅನೇಕವೀರಶೈವ ಕವಿಗಳ ಮತ್ತು ಅವರ ಗ್ರಂಥಗಳ ವಿಷಯವಾದ ಇತಿಹಾಸಗಳನ್ನು ಒಳಗೊಂಡಿರುವುದರಿಂದ ಬಹಳ ಪ್ರಯೋಜನಕಾರಿಯಾಗಿದೆ. ಇವನ ಕಾಲವು ತಿಳಿದಿರುವುದರಿಂದ ಇದರಲ್ಲಿ ಹೇಳಿರುವ ಕವಿಗಳ ಮತ್ತು ಗ್ರಂಥಗಳ ಕಾಲವು ಇದಕ್ಕಿಂತ ಹಿಂದಣದು ಎಂದು ಸ್ಥೂಲವಾಗಿ ನಿಶ್ಚಯಿಸಲು ಸಹಕಾರಿಯಾಗಿದೆ. ಕರ್ಣಾಟಕಕವಿಚರಿತೆಯ ಪ್ರಥಮಸಂಪುಟದಲ್ಲಿ ವೀರಶೈವಕವಿಗಳ ಚರಿತವನ್ನು ಬರೆವಾಗ ಹಲವು ಕಡೆ ಈ ಗ್ರಂಥದಿಂದ ಕೆಲವು ಭಾಗಗಳನ್ನು ಉದ್ಧರಿಸಿ ಬರೆದಿದ್ದೇವೆ. ಈ ಸಂಪುಟದಲ್ಲಿಯೂ ಹಾಗೆಯೇ ಮಾಡಿದ್ದೇವೆ. ಚಿಕ್ಕದೇವರಾಜ, 1672-1704 ಇತನು ಚಿಕ್ಕ್ವದೇವರಾಜಬಿನ್ನಪ, ಗೀತಗೋಪಾಲ ಭಾಗವತ, ಶೇಷಧರ್ಮ, ಭಾರತ ಈ ಗ್ರಂಥಗಳನ್ನು ಬರೆದಿದ್ದಾನೆ. ಇವನು ಮೈಸೂರು ರಾಜರಲ್ಲಿ ಬಹಳ ಪ್ರಖ್ಯಾತನಾದ ದೊರೆ; 1672 ರಿಂದ 1704 ರವರೆಗೆ ಆಳಿದನು. ಇವನ ತಂದೆ ದೊಡ್ಡ ದೇವರಾಜ, ತಾಯಿ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.