ಈ ಪುಟವನ್ನು ಪರಿಶೀಲಿಸಲಾಗಿಲ್ಲ.

486 ಕರ್ಣಾಟಕ ಕವಿಚರಿತೆ. [17 ನೆಯ ಮಾಂ ಹಿ ಪ್ರಾರ್ಧ ವ್ಯಪಾಶ್ರಿತ್ಯ ಯೇಪಿ ಸ್ಯುಃ ಪಾಪಯೋನಯಃ || ಸ್ತ್ರೀಯೋ ವೈಶ್ಯಾಸ್ತಧಾ ಶೂದ್ರಾಸೇಪಿ ಯಂತಿ ಪರಾಂ ಗತಿಂ | ಎಂದು ಗೀತೆಯೊಳ್ ಶ್ರೀಕೃಷ್ಣಂ ತಾನೇ ನಿರೂಪಿಸಿದತೆರದೊಳ್ ಪಿಂತಣ್ಗೆ ನಿತಾನುಂ ಪಾಪಿಗಳಾದೊಡಂ ಆವಜಾತಿಯೊಳ್ ಪುಟ್ಟಿ ರ್ದೊಡಮಿಗಳುಂ ತತ್ವಜ್ಞಾನದಿಂ ತನ್ನೊ ಳ ಭಕ್ತಿಗೆಯ್ದು ನಂಬಿದವರ್ಗೆ ಮುಕ್ತಿ ತಪ್ಪದೆಂದೆಣಿಸಿ ಅಕ್ಕರಮನರುಯದೊಕ್ಕಲಿ ಗರ್ಗ೦ ಪೆಣ್ಗಳ್ಗ೦ ಸಕ್ಕದದಿಂ ತತ್ವಜ್ಞಾನಮಪ್ಪುದರಿದು ಎಂದು ಎಲ್ಲರುಮರೆವಂತೆ ಕನ್ನಡವಾತಿನೊಳಂ ಮೆಲ್ನುಡಿಗಳಿಂದೆ ಅಖಿಲತತ್ವಾರ್ಧಂಗಳಂ ಸಂಗತಿಗೊಳಿಸಿ ತಾಂ ತನ್ನ ಕುಲದೇವತೆಯಪ್ಪ ಯಾದವಗಿರಿನಾರಾಯಣನಡಿದಾವರೆಗಳ್ಗೆ ಬಿನ್ನಪಂಗೆಯ್ವ ನೆವದೊಳ್ ಮೂವತ್ತು ಬಿನ್ನ ಪಂಗಳಂ ಪವಣ್ಗೆಯ್ದ೦. ಗ್ರಂಧಾವತಾರದಲ್ಲಿ ಯದುಗಿರಿನಾರಾಯಣನ ಸ್ತುತಿ ಇದೆ. ಆಮೇಲೆ ಪದ್ಯರೂಪವಾಗಿಯೂ ಗದ್ಯರೂಪವಾಗಿಯೂ ಕವಿಯ ಪರಾಕ್ರಮಾದಿಗಳು ವರ್ಣಿತವಾಗಿವೆ. ಒಂದೊಂದು ಬಿನ್ನಪದ ಆದಿಯಲ್ಲಿಯೂ ಒಂದೊಂದು ಕಂದವಿದೆ; ಉಳಿದಭಾಗವೆಲ್ಲಾ ಗದ್ಯರೂಪವಾಗಿದೆ. ಗದ್ಯವು ಹಳಗನ್ನಡ ದಲ್ಲಿ ಪ್ರೌಢಶೈಲಿಯಲ್ಲಿ ಬರೆದಿದೆ. ಈ ಗ್ರಂಥದಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ... _1 ಚಿಕದೇವರಾಜ ಆನಂದೈಕರಸಂ ಸಮಸ್ತ ಜಗದಾನಂದಂಗೆ ಚಕ್ರಾಯುಧಂ | ಸೇನಾಚಕ್ರವಿಮರ್ದಿ ತಾಹಿತಮಹೀಚಕ್ರಂಗೆ ವೈಕುಂರನ | ನ್ಯೂನೋಪಾಯವಿಕು೦ರಿತಾರಿಧರಣೀಭ್ರದ್ದುರ್ಗ ವರ್ಗ೦ಗೆ ಲಕ್ಶ್ಮಿನಾರಾಯಣನೀವನಕ್ಕೆ ಚಿಕದೇವೇಂದ್ರಂಗೆ ಸಾಮ್ರಾಜ್ಯಮ೦ | ಒಂದುದೆಸೆಯೊಳ್ ತುರುಕರೊ೦ದುಕಡೆಯೊಳ್ ವೆರಸ | ರೊಂದೆಸೆಯೊಳಾರೆಯರ ಬಿಂದಮಳವಿಂ ಬೇ | ಅಂದುಬಯೊಳ್ ತಿಗುಳರೊಂದಿರವಿನೊಳ್ ಕೊಡಗ | ರೊಂದು ಕೆಲದೊಳ್ ಮಲೆವರೊಂದುವೆರೆದೆಲ್ಲರ್‌ | ಸಂದಣಿಸಿ ಕಾಳೆಗಕೆ ಮುಂದುವರಿವನ್ನ ಮದ | ಟಿ೦ದವರ ತಟ್ಟುಗಳ ಪಂದಲೆಗಳಂ ದಿ | ಗ್ದೃ೦ದಬಲಿಯಿತ್ತು, ನಲವಿಂದೆ ಚಿಕದೇವನೃಪ |