ಶತಮಾನ ಸಿಂಗರಾಧ್ಯ &08 ಸಿಂಗರಾಗ್ಯ, ಸು. 1680 ಈತನು ಮಿತ್ರವಿಂದಾಗೋವಿಂದವನ್ನು ಬರೆದಿದ್ದಾನೆ. ಅಲ್ಲದೆ ಈ ಗ್ರಂಥದಲ್ಲಿರುವ - ರಂಜಿವುದು ರಸಿಕರಂ ಕಾ | ವ್ಯಂ ಜಾಣೀಂದಾರ ರಾಘವಾಭ್ಯುದಯಾಂ | - ಕಂಜಾಕ್ಷನ ಸಂಕೀರ್ತಿಸು | ತುಂ ಜಸಮಂ ಪಡೆದ ಗೀತರಂಗೇಶ್ವರಮುಂ || ಎಂಬ ಪದ್ಯದಿಂದ ರಾಘವಾಭ್ಯುದಯ, ಗೀತರಂಗೇಶ್ವರ ಎಂಬ ಗ್ರಂಥಗ ಳನ್ನೂ ಬರೆದಿರುವಂತೆ ತಿಳಿಯುತ್ತದೆ. ಆದರೆ ಇವು ನಮಗೆ ದೊರೆತಿಲ್ಲ. ಆ ವನ ಶ್ರೀವೈವಕವಿ; ಕೌಶಿಕ ಗೋತ್ರದವನು; ಸೌಮ್ಯನೃಸಿಂ ಹಸೂರಿಯ ಅಥವಾ ಅಳಸಿಂಗರಾಧ್ಯನ ಮಗನು; ತಿರುಮಲಾರ್ನ ತಮ್ಮ ನು, ಚಿಕ್ಕದೇವರಾಜನ (1672-1704) “ಕಡುನೇಹಕ್ಕೆ ನೆಲೆವನೆಯುವ ಶೇತ್ರಕಲಾನಿಧಿಯುಮನಿಸಿ ನೆಗಟ್ಟಿ ತಿರುಮಲಾರನ (ತನ್ನ ಅಣ್ಣನ) ಕೃ ಪೆಯಿಂ ಪಲವುಂ ಬಿಜ್ಜೆಗಳಿಂ ನೆರವಣಿಗೆಗೊಂಡು ಜಸಮಂ” ಪಡೆದಂತ ಹೇಳುತ್ತಾನೆ ಚಿಕ್ಕದೇವರಾಜನಲ್ಲಿ ಈತನೂ ಆಸ್ಥಾನಪಂಡಿತನಾಗಿದ್ದಂತ ತೋರುತ್ತದೆ, ಇವನ ಕಾಲವು ಸುಮಾರು 1680 ಆಗಬಹುದು, ಇವನ ಗ್ರಂಥ ಮಿತ್ರವಿಂದಾಗೋವಿಂದ. ಇದು ನಾಟಕವು, 4 ಅಂಕಗಳಾಗಿ ಭಾಗಿಸಲ್ಪಟ್ಟಿದೆ. ಕನ್ನಡದಲ್ಲಿ ಈಗ ದೊರೆತಿರುವುದು ಇದೊಂದೇ ನಾಟಕವು. ಇದು ರತ್ನಾವಳಿಯೆಂಬ ಸಂಸ್ಕೃತನಾಟಕೆಯ ಭಾಷಾಂತರವು, ಕವಿ ಮಾತೃಕೆಯಲ್ಲಿ ನಾಯಕನಾ ಗಿರುವ ರಾಜನಿಗೆ ಪ್ರತಿಯಾಗಿ ಕೃನ್ಮನನ್ನು ನಾಯಕನನ್ನಾಗಿಮಾಡಿ ಮಿಕ್ಕ ಪಾತ್ರಗಳಿಗೂ ಉಚಿತವಾದ ನಾಮಾಂತರಗಳನ್ನು ಕಲ್ಪಿಸಿದ್ದಾನೆ, ಮಾತೃ ಕೆಗೂ ಇದಕ್ಕೂ ಒಂದೆರಡು ಕಡೆ ಮಾತ್ರ ಸ್ವಲ್ಪ ವ್ಯತ್ಯಾಸವಿದೆ. ಈ ಗ್ರಂ ಧದ ಉತ್ಮತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ:- ಕಳೆಯಿಂದಂ ಪೊಳೆವಚ್ಚ ಬಣ್ಣದೊದವೀಂ ಸದ್ವತ್ತಸಂಸತ್ತಿಯಿಂ | ಬೆಳಗಿಂದಂದದೆ ನುಣ್ಣಿನಿಂದೆರ್ದೆಗೆರ್ವುದ್ಯದ್ದುಣಶ್ಲೇಷದಿಂ | 1. 461 ನೆಯ ಪುಟವನ್ನು ನೋಡಿ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.