8 ಶೂರರು--- ಎಲಲ ಎಂಬ ಚೋಳನು ಮೈಸೂರು ಸೇನೆಯ ಸಹಾ ಯದಿಂದ ಲಂಕೆಯನ್ನು ಕಿ. ಪೂ. 205 ರಲ್ಲಿ ಜಯಿಸಿದಂತೆ ಸಿಂಹಳದ್ವೀಪದ ಚರಿತ್ರೆಯಲ್ಲಿ ಹೇಳಿದೆ1. ರಾಷ್ಟ್ರಕೂಟರಾಜನಾದ ದಂತಿದುರ್ಗನ ಒಂದು ಶಾಸನದಲ್ಲಿ ಕರ್ಣಾಟಕಸೇನೆ ಕಾಂಚಿಯ ದೊರ, ಕೇರಳರಾಜ ಚೋಳ, ಪಾಂಡ್ಯ ಮುಂತಾದವರನ್ನು ಸೋಲಿಸುವುದರಲ್ಲಿ ಸಮರ್ಧವಾದುದು ಎಂದು ಹೇಳಿದೆ.2 ವರ್ತಕರು --ಚಿತ್ರದುರ್ಗದಲ್ಲಿ ಆಂಧ್ರಭೃತ್ಯರ ಸೀಸದ ನಾಣ್ಯಗಳು ದೊರೆತುವೆಂದು ಹಿಂದೆ ತಿಳಿಸಿದ್ದೇನೆ. ಅದೇ ಸ್ಥಳದಲ್ಲಿ ಕ್ರಿಸ್ತ ಪೂರ್ವ 2ನೆಯ ಶತಮಾನದಲ್ಲಿದ್ದ ರ್ಹವುತಿ ಎಂಬ ಚೀನದೇಶದ ಚಕ್ರವರ್ತಿಯ ಹಿತ್ತಾಳೆಯ ನಾಣ್ಯವೂ ಕ್ರಿಸ್ತಶಕ 14 ರಲ್ಲಿ ಗತಿಸಿದ ಅಗಸ್ಟಸ್ ಎಂಬ ರೋಮ್ ಚಕ್ರವರ್ತಿಯ ಡಿನೇರಿಯಸ್ ಎಂಬ ಬೆಳ್ಳಿಯ ನಾಣ್ಯವೂ ದೊರೆತಿರುವುದರಿಂದ ಪೂರ್ವಕಾಲದಲ್ಲಿ ಕನ್ನಡನಾಡಿನ ವಾಣಿಜ್ಯಕ್ಕೆ ಎಷ್ಟರಮಟ್ಟಿಗೆ ವ್ಯಾಪ್ತಿಯಿದ್ದಿತು ಎಂಬಂಶವನ್ನು ಸಲ್ಪಮಟ್ಟಿಗೆ ಊಹಿಸಿ ಬಹುದಾಗಿದ. ಪ್ರಬಲರಾದ ವರ್ತಕರಿಗೆ ವಡ್ಡ ವ್ಯವಹಾರಿ, ರಾಜಶ್ರೇಷ್ಠಿ ಎಂಬ ಹೆಸರುಗಳು ಶಾಸನಗಳಲ್ಲಿಯೂ ಗ್ರಂಥಗಳಲ್ಲಿಯೂ ಹೇಳಿವೆ ಸುಮಾರು 1120 ರಲ್ಲಿ ಹೋಯ್ಸಳಸೆಟ್ಟ, ನೇಮಿಸೆಟ್ಟ ಎಂಬ ವರ್ತಕರು ಹೊಯ್ಸಳರಾಜನಾದ ವಿಷ್ಣುವರ್ಧನನ ರಾಜಶ್ರೇಷ್ಠಿಗಳಾಗಿದ್ದಂತೆಯೂ,1188 ರಲ್ಲಿ ಚೆಟ್ಟಪಸೆಟ್ಟ ಎಂಬವನ ಇಂದ್ರನ ಉಚ್ಚೈಶ್ರವಸ್ಸಿಗೆ ಸಮನಾದ ಕುದುರೆಗಳನ್ನೂ ಐರಾವತಕ್ಕೆ ಸದೃಶವಾದ ಆನೆಗಳನ್ನೂ ಶ್ರೇಷ್ಠವಾದ ಮುತ್ತುಗಳನ್ನೂ ಹಡಗುಗಳಲ್ಲಿ ತಂದು ದೊರೆಗಳಿಗೆ ಮಾರುತ್ತಿದ್ದಂತೆಯೂ ಅದೇ ಕಾಲದಲ್ಲಿ ದಾಸೆಯನೆಂಬ ವರ್ತಕನು ಪೂರ್ವದೇಶದ ವಸ್ತುಗಳನ್ನು ಪಶ್ಚಿಮದೇಶಕ್ಕೂ ಪಶ್ಚಿಮದೇಶದ ವಸ್ತುಗಳನ್ನು ಪೂರ್ವದೇಶಕ್ಕೂ ಉತ್ತರದೇಶದ ಭಂಡಗಳನ್ನು ದಕ್ಷಿಣದೇಶಕ್ಕೂ ದಕ್ಷಿಣದೇ -.- - - - - - - - - - - - - - - - - - - - [ The Lost ( 11tes Of Ceylon plgL 26 ೪ ಕಾಂಚೀಶಕೇರಳನರಾಧಿಪಪಾಂಡ್ಯಚೋಳಶ್ರೀಹರ್ಷವಜ್ರಟವಿಭೇದವಿಧಾನ ದಕ್ಷಂ | ಕರ್ಣಾಟಕಂ ಒಲಂ. Indian Antiquary XI, II4,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.