508 ಕರ್ಣಾಟಕ ಕವಿಚರಿತ [17 ನೆಯ ವಳಿಯೆ ಸುಗಂಧಮಾಂತ ಕುಸುಮವ್ರಜನೊಪ್ಪುವ ಜಾಹ್ನವೀನದೀ || ಜಳಮಭಿಷೇಕವಾರಿ ಘನರಾವಮೆ ಗಂಟೆಯದಾಗೆ ದೇವಸಂ | ಕುಳಮಿರದರ್ಚಿಸಿರ್ದ ಘನಲಿಂಗಮೆನಲ್ ಕನಕದ್ರಿ ರಂಚಿಕುಂ || ಚಿಕ್ಕದೇವರಾಜನಕೀರ್ತಿ ಪರಿಪಂಧಿಕ್ಷಿತಿರಾಡ್ಯ ಶೋರುಚಿಸುಕರ್ಪೂರಾಳಿಯಂ ತಂದು ಭೂ | ಧರವರಂ ಚಿಕದೇವಭೂಪತಿಗೆ ತರ್ತ್ಯುಜ್ವಲತ್ಕಾಂತೆ ತಾಂ || ಸ್ಪುರಿಸಲ್ ಪೊತ್ತಿಸಿ ತತ್ತ್ವ ತಾಪಶಿಖಿಯೊ೪ ನೀರಾಜನವ್ಯೂ ಹಮಂ | ನಿರತಂ ಗೈದುರೆ ಮಂಗಳಾರತಿಯನೆತ್ತುತ್ತಿರ್ದವಳ್ ಮೋದದಿಂ || ನರ್ತಕಿಯರು ನಿಡುಜಡೆಯಿಂದಲರ್ ಜಗುತಿ ಕಣ್ಣಳ ನುಣ್ಣೊಗರುರ್ವೆ ವಕ್ತಮಂ | ಪಿಡಿಯೆ ಬೆಮರ್ ತೆರಂಭೊಳೆಯೆ ನುಣ್ಣದಪುಣ್ಮರೆ ದಂತಕಾಂತಿ ಮ | ಲ್ಪಡಿಯ ಸುವರ್ಣ ಕಿಂಕಿಣಿಯ ಮೆಲ್ಲುಲಿ ರಂಜಿಸೆ ಲಾಸ್ಯ ಮಾರ್ಗದೊಳ್ | ಬಿಡದೆ ಬೆಡಂಗು ಮಾತಿ ಮಿಗೆ ನರ್ತಕಿಯರ ಸೊಗಸಿಂದನೊಪ್ಪಿದರ್ || ಚಿದಾನಂದಕವಿ ಸು, 1680 ಈತನು ಮುನಿವಂಶಾಭ್ಯುದಯವನ್ನು ಬರೆದಿದ್ದಾನೆ. ಇವನು ಜೈನ ಕವಿ, ತನ್ನ ಗ್ರಂಥದಲ್ಲಿ ಮೈಸೂರು ದೊರೆಯಾದ ಚಿಕ್ಕದೇವರಾಜನನ್ನು (1672-1704) ಸ್ತುತಿಸಿ ಆತನ ವಂಶಾವಳಿಯನ್ನು ಹೇಳಿ ಅವನನ್ನೇ ಸಂ ಬೋಧಿಸಿ ವಿಷಯಗಳನ್ನು ಹೇಳುವುದರಿಂದ ಈಕವಿ ಚಿಕ್ಕದೇವರಾಜನಕಾ ಲದವನು ಎಂಬುದು ವ್ಯಕ್ತವಾಗುತ್ತದೆ , ಸುಮಾರು 1680 ರಲ್ಲಿ ಇದ್ದಿರ ಬಹುದು, ಚಿಕ್ಕದೇವರಾಜನ ವಂಶಾವಳಿಯನ್ನೂ ಶ್ರವಣಬೆಳಗೊಳಕ್ಕೆ ಸಂ ಬಂಧಿಸಿದ ಕೆಲವು ವಿಷಯಗಳನ್ನೂ ಈರೀತಿಯಾಗಿ ಹೇಳಿದ್ದಾನೆ-. ಈಬೆಟ್ಟದ ಚಾಮರಾಜ; ಮಕ್ಕಳು ತಿಮ್ಮ ರಾಜ, ಕೃಷ್ಣರಾಜ, ಚಾಮರಾಜ; ಚಾಮರಾಜನ ಮಕ್ಕಳು ರಾಜನೃಪ, ಬೆಟ್ಟ ದಚಾಮರಾಜ, ದೇವರಾಜ, ಚೆನ್ನ ರಾಜ; ರಾಜನೃಪನು ಪಟ್ಟಕ್ಕೆ ಬಂದನ , ಬೆಟ್ಟದ ಚಾಮರಾ ಎನು ಯುವರಾಜನಾಗಿದ್ದನು. ರಾಜನೃಪನು ಕಾರುಗಹಳ್ಳಿಯವರ ಕಡಿದೋಡಿಸಿ ಮಾರೆದ ತಿರುಮಲನೃಪನ ! ಭಾರಿಯ ಜಗಳದಿ ಕೆಣಕಿ ಮುರೆದು ಹಮ್ಮ | ಶ್ರೀರಂಗಪುರವ ಸಾಧಿಸಿದ || 1. ಈ ಯೆರಡು ಪದ್ಯಗಳು ತಿಮ್ಮ ಕವಿಯ ಯಾದವಗಿರಿಮಾಹಾತ್ಮದಲ್ಲಿ ಯೂದೊರೆಯುತ್ತವೆ; 494 ನೆಯ ಪುಟವನ್ನು ನೋಡಿ,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೩
ಈ ಪುಟವನ್ನು ಪರಿಶೀಲಿಸಲಾಗಿದೆ