ಈ ಪುಟವನ್ನು ಪರಿಶೀಲಿಸಲಾಗಿದೆ

510 ಕರ್ಣಾಟಕ ಕವಿಚರಿತೆ. [17 ನೆಯ ಬಳ್ಳಿಮಿಂಚುಗಳು ಬಲ್ಮಳೆಯ ಭರಕೆ ಸುತ್ತ | ಕೊಳ್ಳಿಯ ಬೀಸಿದಂತಾಗೆ | ಬಳ್ಳಬಳ್ಳದಿ ಮೊಗೆಮೊಗೆದು ಚೆಲ್ಲಿದವೋಲು |ಚೆಲ್ಲಿದುವಾಲಿಗಲ್ಲುಗಳು ||

                            ರಾಜನೀತಿ 

ದಂಡವ ದೋಷಕ್ಕೆ ತಕ್ಕಷ್ಟ ನಡಸದೆ | ಮಂಡಲಪತಿಯುಪೇಕ್ಷಿಸಲು | ವುಂಡೆದ್ದು ಮಾತ್ಸ್ಯ ನ್ಯಾಯದೊಳೊಬ್ಬರನೊಬ್ಬ |ರಠ‌‌‌ಡಲೆಯದೆ ಸುಮ್ಮನಿಹರೇ || ನೀರವೂರಿತವಾದ ಹಲವುಕುಂಭಗಳೊಳು | ತೋರುವಾದಿತ್ಯನಂದದೊಳು | ಮೇರೆಗೊಂಡಖಿಲಮತಂಗಳೊಳಿರ್ಪಂತೆ | ತೋರುವರವನಿಪಾಲಕರು || ಪರಮಕುಲಜನುಪಧಾಶಧ್ಧಿ ಸಹಿತನಂ | ತುರುಶಾಸ್ತ್ರ ಶಸ್ತ್ರ ಕೋವಿದನು | ಗರುವನು ಸ್ವಾಮಿಭಕ್ತನು ನಿಜದೇಶಜ | ನರುಹನು ಮಂತ್ರಿ ಪದವಿಗೆ ||

                            ಕಾಮ
ವರವಹ್ನಿ ಸಾಕ್ಷಿಕವಾಗಿ ತಾನಂಗೀ |ಕರಿಸಿದವರೊಳಲ್ಲದುರೆದ | ಪರಪರಿಗ್ರಹದ ಪೆಣ್ಣುಗಳೊಳು ಮಾಡಿದ | ದುರಭಿಸಂಧಿಯೆ ಕಾಮವರಸಾ||
                               ಆತ್ಮ
ತನ್ನಿಂದ ತಾನೆ ಬದ್ಧಾತ್ಮನು ಭಾವಿಸೆ | ತನ್ನಿಂದ ತಾನೆ ಮುಕ್ತಾತ್ಮ | ಇನ್ನೊಬ್ಬ ಕೊಡುವ ಬಿಡುವನೆಂಬ ಮಾತಿನ | ಗನ್ನಗೊಕ್ಕೆಗೆ ಸಿಕ್ಕನಾತ್ಮ || ಸತ್ಕರ್ಮಗಳ ಮಾಡಿ ಸುಖಿಯಹನಂತೊಮ್ಮೆ | ದುಷ್ಕರ್ಮಗಳ ಮಾಡಿ ದುಃಖಿ | ಸಶ್ಕರ್ಮದುಷ್ಕರ್ಮವೆರಡ ತಪದಿ ಸು | ಟೈಕ್ಕಲೊಮ್ಮೆಗೆ ಮುಕ್ತನಾತ್ಮ ||
                       ಮಲ್ಲರಸ. ಸು. 1680 

ಈತನು ದಶಾವತಾರಚರಿತೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ; ಶ್ರೀವತ್ಸಗೋತ್ರದವನು; ಕಮ್ಮೆವಂಶದವನು. ಇವನ ತಂದೆ ತಿಮ್ಮರಸ ಮಂತ್ರಿ; ತಾಯಿ ತಿಪ್ಪಾಂಬಿಕೆ, ಗುರು ಸದಾನಂದ; ಸ್ಥಳ ನಾರವಂಗಲ ಪೂರ್ವಕವಿಗಳಲ್ಲಿ ಕಾಮಾರವ್ಯಾಸ (ಕುಕರೂಪ)ನನ್ನು (ಸು. 1430) ಸ್ತುತಿ ಸುವುದರಿಂದ ಕವಿ ಅವನ ಕಾಲಕ್ಕೆ ಈಚೆಯವನೆಂಬುದು ವ್ಯಕ್ತವಾಗಿದೆ ನಮಗೆ ದೊರೆತ ಪ್ರತಿಯಲ್ಲಿ ಗ್ರಂಥಾಂತ್ಯದ ಗದ್ಯಕ್ಕೆ ಹಿಂದೆ ಚಿಕ್ಕುಪಾಧ್ಯಾ ಯನ ಆಜ್ಞಾನುಸಾರವಾಗಿ ಗ್ರಂಥವು ಪ್ರಮಾಡಲ್ಪಟ್ಟತೆಂದು ಹೇಳಿರುವುದ ರಿಂದ ಗ್ರಂಥವು, ಬಹುಶಃಚಿಕ್ಕುಪಾಧ್ಯಾಯನಕಾಲದಲ್ಲಿ ಹುಟ್ಟರಬಹುದೆಂದು