ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ

                                 ಚಿಕ್ಕರಸ
                                                                    613
                              ವರಾಹಾವತಾರ 

ಎಳವೆಯ ಕರ್ಚ ನೀಲಾ | ಚಳ ನಡೆಯ೮ಕಲ್ತುದೆಂಬಶೆಆದಿಂ ದೇವರ್‌ | ನಲಿಯೆ ಸುರರುಲಿಯೆ ಬಾಹಾ | ಬಲದೆ ವರಾಹಾವತಾರಮಂ ಹರಿ ತಾಳಂ | ಚಿಕ್ಕರಸ ಸು, 1680 ಈತನು ಸೊಣ್ಣಬೈರೆಗೌಡನ ಚರಿತ್ರೆಯನ್ನು ಬರೆದಿದ್ದಾನೆ. ಇವನು ಜೈನಕವಿ; ಇವನ ತಂದೆ ಗಿರಿಯಪ್ಪಯ್ಯ, ತಾಯಿ ತಿಮ್ಮಮ್ಮ, ಅಣ್ಣ ದೊಡ್ಡಪ್ಪಯ್ಯ. ಇವನು ಸೊಣ್ಣಬೈರೆಗೌಡನ ಆಶ್ರಿತನಾಗಿದ್ದಂತೆ ಕಾಣುತ್ತದೆ. ತನ್ನ ಸ್ವಾಮಿ ಶಿವಾಜಿಯ ಮಗನಾದ ಸಂಭೋಜಿಯನ್ನು ಯುದ್ಧದಲ್ಲಿ ಜಯಿಸಿದಂತೆ ಹೇಳುವುದರಿಂದ ಕವಿಯ ಕಾಲವು ಸುಮಾರು 1680 ಆಗಿರ ಬಹುದು.

   ಇವನ ಗ್ರಂಥ
                      ಸೋಣ್ಣ ಬೈರೆಗೌಡನ ಚರಿತ್ರೆ 

ಇದು ಸಾಂಗತ್ಯದಲ್ಲಿ ಬರೆದಿದೆ, ಸಂಧಿ 13, ಪದ್ಯ 1319 ಇದರಲ್ಲಿ ಆವತಿನಾಡ ಪ್ರಭುವಾದ ದೇವಣಾಪುರದ ಸೊಣ್ಣಬೈರೆಗೌಡನ ವಿಜಯಾದಿಗಳಾವರ್ಣಿತವಾಗಿವೆ. ತನ್ನ ಕಾವ್ಯವನ್ನು ಕುರಿತು ಕವಿ ಹೀಗೆ ಬರೆದಿದ್ದಾನೆ

ಜಾಣತನವು ಮುದ್ದು ರಸಿಕತೆ ಮೋಹವು | ಕಾಣಿಸಬೇಕು ಕಬ್ಬದೊಳು | ಸ್ವರ ಕಿತ್ತ ವೀಣೆಯ ಹೊಳಹಿನಂದದೊಳಲ್ಲ | ಕರಿಯಂಡ ಬೆಳಗಾಯಂತಲ್ಲ | ಕರಳದಾಮಳಕದಂತೆ ನಿಟೆ ಪರಿಗೆ | ವರರನ್ನದ ಕೈಪಿಡಿಯು ||

ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ, ಬಳಿಕ ಕವಿ ವಿಷ್ಣು, ಬ್ರಹ್ಮ, ಸರಸ್ವತಿ, ಗಣೇಶ, ವೀರೇಶ, ಗೋಪಾಲಕೃಷ್ಟ, ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ. “ದೊರೆರನ್ನ ಸೊಣ್ಣಭೂಪಾಲನ ಕೀರ್ತಿಯ | ಕಟಿರು ಸುಧೆಯ ಬಿತ್ತಿ ಬೆಳೆದು | ತರುವಿನ ಪಣ್ಗಳ ನರರೆಲ್ಲ ಸವಿವಂತೆ | ಯೊರೆವೆನು ಸುಗುಣರಾಲಿಪುದು | ಕೇದಗೆ ಆದರಿಸಿವನು ಮದುರ ಕರದೊಳಗ೦ತು | ಕಾದಲೆಯಗಲ್ದರ ಎದೆಯ | ಭೇದಿಸಿ ಕೊರವಂತ ಕರಗಸ ನೋಡೆಂದು | ಕೇದಗೆಗಳ ಮಾಡುತಿಹರು ||