ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮೂನ]

                                  ಪದ್ಮನಾಭ
                                                                     616

ದೀಪ ತಿರುಮಲಸಾಮಂತ ಎಂಬ ಬಿರುದೂ ಹನುಮನಟೆಕ್ಕೆಯೂ ಇದ್ದುವು.ಇವರ ಬಳಿಕ ಚಿನ್ನಮಾಂಬಿಕೆ ಆಳಿದಳು. ಇವಳ ಗಂಡ ಶಂಕರರಸ; ಮಗ ಚಿಕ್ಕರಾಯ, ಚಿನ್ನಮಾಂಬೆ ಧರೆಯನ್ನು ಪಾಲಿಸುವಂದು ಕಾರಸ್ಕಾರಪುರದ ವರ್ಧಮಾನಸ್ವಾಮಿಯ ಕೃಪೆಯಿಂದ ತಿರುಮಲಸಾಮಂತನೃಸನ ಕೋಶಾಧ್ಯಕ್ಷನಾದ ಪದ್ಮನಾಭನು ಈ ಗ್ರಂಧವನ್ನು ಬರೆದನು.

ನಮಗೆ ದೊರೆತ ಈ ಗ್ರಂಥದ ಪ್ರತಿ 1761ರಲ್ಲಿ ಬರೆದುದಾದುದರಿಂದ ಗ್ರಂಥವು ಆ ಕಾಲಕ್ಕೆ ಹಿಂದೆಯೇ ಹುಟ್ಟಿರಬೇಕು. ಸುಮಾರು 1680ರಲ್ಲಿ ಹುಟ್ಟಿರಬಹುದೆಂದು ತೋರುತ್ತದೆ.

ಇವನ ಗ್ರಂಥ

                               ಪದ್ಮಾವತೀಚರಿತೆ 

ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 12, ಪದ್ಯ 1671. ಇದರಲ್ಲಿ ಪಾರ್ಶ್ವನಾಥನ ಶಾಸನದೇವಿಯಾದ ಪದ್ಮಾವತಿಯ ಚರಿತೆ ಹೇಳಿದೆ. ಗ್ರಂಧಾವತಾರದಲ್ಲಿ ಜಿನಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳು, ಸರಸ್ವತಿ, ಬ್ರಹ್ಮ, ಪದ್ಮಾವತೀದೇವಿ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- ಹರ್ಣಾಟದೇಶ ಕಟ್ಟೆಂಬ ಮಾತಿಲ್ಲ ಕುಪ್ಪೆಂಬ ನುಡಿಯಿಲ್ಲ | ಕೊಟ್ಟು ಬೇಡುವ ಜನವಿಲ್ಲ | ಕಟ್ಟುಕುಟ್ಟೆಂಬರು ಮನೆಯನು ಭತ್ತವ | ಕೊಟ್ಟು ಬೇಡವರು ಮುನಿಗಳ |

                                 ರಾಜರು 

ಒಲಿದರೆ ಸಕಲಭಾಗ್ಯವನೀವರು ಕೂಡೆ | ಸುಲಿದರು ಬೆನ್ನ ಚರ್ಮವನು | ಕಲಿಯನು ಹಂದೆಯೆಂಬರು ಹಂದೆಯನು ಬಲು | ಕಲಿಯೆಂಬರು ಭೂಮಿಸರು ||

                               ಪದ್ಮಾವತಿ

ಎಸಳುಕೇದಗೆಯನು ಶಶಿಯ ಕಿರಣವನು | ಆಸಿಕಮರನ ಸುರಗಿಯನು | ನಸುನಗುವುದೊ ತಾನೆಂಬಂತೊಪ್ಪುವುದು | ಮಿಸುಗುವ ಹಸ್ತದ ನಖವು ||

                              ಹೆಣ್ಣು ಮಗಳು

ಹೆಣ್ಣು ಮಕ್ಕಳ ಹೆತ್ತು ಹೆದರ ಬಾಯಿಗೆ ಕೊಟ್ಟು | ಕಣ್ಣೀರಿಕ್ಕುತ ಮರದಿ | ಉಣ್ಣರೊ ಉಡರೋ ಎನುತ ಚಿಂತಿಸುತಿಹ | ಹೆಣ್ಣಿಂದ ಫಲವುಂಟೆ ನಮಗೆ |