ಈ ಪುಟವನ್ನು ಪರಿಶೀಲಿಸಲಾಗಿಲ್ಲ.

610 ಕರ್ಣಾಟಕ ಕವಿಚರಿತ [in ನಯ ಚೆನ್ನಿಗ ಸು, 1700 ಇತನು ಪ್ರಹ್ಲಾದಚರಿಕೆಯನ್ನು ಬರೆದಿದ್ದಾನೆ, ತನ್ನ ಪರಂಪರೆ ಯನ್ನು ಹೀಗೆ ಹೇಳಿಕೊಂಡಿದ್ದಾನೆ-ಹೊಕ್ಕುಳಿಕೆಯ ಸುರಕಧಿಪತಿ ಹರಿ ಭಕ್ತ ನರಸಿಂಹದೇವ, ಮಗ ಶಂಕರಲಿಂಗದೇವ, ಮಗ ಕವಿ ಚಿನ್ನಿಗ ತನ್ನ ಗ್ರಂಥವನ್ನು ಅವುಬಳನರಸಿಂಹದೇವರ ಅಂಕಿತದಲ್ಲಿ ಬರೆದಿದ್ದಾನೆ. ಪೂರ್ವಕವಿಗಳಲ್ಲಿ ಕುಮಾರವಾಲ್ಮೀಕಿಯನ್ನು (ಸು, 1500) ಸ್ಮರಿಸುವುದ ರಿಂದ ಅವನ ಕಾಲಕ್ಕೆ ಇಚಯವನು ಎಂಬುದು ವ್ಯಕ್ತವಾಗಿದೆ; ಸುಮಾರು 1700 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಪೂವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸುತ್ತಾನೆಉತ್ತಮ ಕವಿ ಕಾಳಿದಾಸ ಭಾರತವನ್ನು ವಿಸ್ತರಿಸಿದ ವ್ಯಾಸರಾಯ | ಒತ್ತಲೇಶ್ವರವಾಲ್ಮೀಕಿಗಳಂಭ್ರಗೆ / ಭಕ್ತಿಯಿಂ ಲೆ ವಂದಿಸುವೆ || ಆವನ ಗ್ರಂಥ ಪ್ರಹ್ಲಾದಚರಿತ, ಅದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 13, ಪದ್ಯ 915. ಇದಕ್ಕೆ ನರಸಿಂಹಚಾರಿತ್ರ ಎಂಬ ಹೆಸರೂ ಉಂಟು. ದರಿಂದ ನರಸಿಂಹಸ್ತುತಿ ರೂಪವಾದ ಒಂದೆರಡು ಪದ್ಯಗಳನ್ನು ಉದಾಹರಿಸುತ್ತವೆ ದುರಿತಗಿರಿಗೆ ವಜ್ರ ಕರ್ಮವೆಂಬಡವಿಯ | ನುರುಕುವ ದಾವಾನಳನು | ಕರುಣಾಕರನವಬಳನರಸಿಂಹನ | ಚರಣವ ನಾ ಬಲಗೊಂಬೆ || ಬ್ರಹ್ಮನ ಜನಕ ಭಕತಜನವಕ್ಸಲ್ | ಕರ್ಮ ದುರಿತಸಂಹರಣ | ನಿರ್ಮಳಮೂರ್ತಿಯಬಳನರಸಿಂಹಗೆ | ಸುಮ್ಮಾನದಿಂದೆಲಗುವೆನು | ಮರುಳಸಿದ. ಸು 1700 ಈತನು ಬಸವರಾಜನ ಪವಾಡಗಳನ್ನು ಬರೆದಿದ್ದಾನೆ ಇವನು ವೀರ ವಕವಿ; ಈರ್ವಕವಿಗಳಲ್ಲಿ ಸಿಂಗಿರಾಜನನ್ನು (ಸು, 1500) ಹೇಳುವುದ ರಿಂದ ಅವನ ಕಾಲಕ್ಕೆ ಈಚೆಯವನು ಎಂದು ವ್ಯಕ್ತವಾಗುತ್ತದೆ;ಸುಮಾರು 17oo ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಇವನ ಗ್ರಂಥ ಬಸವರbಜನಪವಾಡಗಳು ಇದು ಗದ್ಯಗ್ರಂಥ; ಇದರಲ್ಲಿ ಬಸವನು ಕಾಯವಚನಮನಸ್ಸುಗೆ ೪೦ದ ನಡೆಸಿದ ಕಿ೦ಬಿ ಪವಾಡಗಳು ವರ್ಣಿತವಾಗಿವೆ. ಈ ರ್ವಗ್ರಂಥಗfo