ಈ ಪುಟವನ್ನು ಪರಿಶೀಲಿಸಲಾಗಿಲ್ಲ.
11
ಗುರುವಿಲ್ಲ ದೈವವಿಲ್ಲೆನೆ ! ಧರೆಗೆಸೆವಂ ಕುವರಲಕ್ಷ್ಮ ದಂಡಾ ಧೀಶಂ || ಧನಮುಂ ಪ್ರಾಣಮುಮೆ೦ಬಿನ೦ ಕುವರಲಕ್ಷ್ಯಂ ವೀರಬಲ್ಲಾಳದೇ | ಮ ದಾನೋನ್ನತಿಗ೦ ಜಯೋತ್ಸೆ ತಿಗಾಮಿಯಲ್ ಪೊಣ್ದು ಮುಂದಿಟ್ಟು ರಾ || ಮನ ಬೀಡಿಂಗಣುವಂ ಯಮಾತ್ಮಜನ ಬೀಡಿಂಗರ್ಜನಂ ಚಂದ್ರಜೂ | ಟನ ಬೀಡಿಂಗೆ ಕುಮಾರನಿರ್ದ ತೆಅದಿಂದಿರ್ದಪ್ಪನೇಂ ಧೀರನೋ || ತನ್ನೊಡನೆ ತೋಟದ ಸುಭಟರ | ತನ್ನ ಮನಃಪ್ರಿಯೆಯ ತನ್ನ ಪರಮಾಯುಷ್ಯಂ | ಶನ್ನಾಳ್ದ೦ಗಾಯೆನಿಸಿದ| ನೇನ್ನೆಟ್ಟನೆ ಕಲಿಯೊ ಕುವರಲಕ್ಷ ಚಮೂಪಂ' || ಸುಮಾರು 1215 ರಲ್ಲಿ ತನ್ನ ಸ್ವಾಮಿನಿಯಾದ ಹೊನ್ನವ್ವೆನಾಯ ಕಿತಿ ಸಾಯಲು ಹೊನ್ನಿ ಎಂಬವಳು ತನ್ನ ತಲೆಯನ್ನು ಕೊಟ್ಟು, ಸುರ ಲೋಕವವ್ನೈದಳು ಎಂದು ಒಂದು ಶಾಸನದಲ್ಲಿ ಉಕ್ತವಾಗಿದೆ. 1291 ರಲ್ಲಿ ಬರೆದ ಮತ್ತೋ೦ದು ಶಾಸನದಲ್ಲಿ ಹೊಯ್ಸಳರಾಜಪರಂಪರೆಗೆ ಸೇರಿದ ಒಬ್ಬೊಬ್ಬ ದೊರೆಯ ಸತ್ತಾಗ ಕನ್ನಡಿಗಮೊನೆಯಾಳುಗಳು ಎಂದು ಪ್ರಸಿದ್ದಿಯನ್ನು ಪಡೆದಿದ್ದ ಆ ದೊರೆಗಳ ಸೇನಾಪತಿಗಳ ವಂಶದಲ್ಲಿ ಒಬ್ಬೊಬ್ಬನು ತನ್ನ ಸತಿಯರೊಡನೆಯೂ ಸೇವಕಸೇವಕಿಯರೊಡನೆಯೂ ಸತ್ತಂತೆ ಹೇಳಿದೆ. ಕನ್ನಡನುಡಿಯ ಪ್ರಾಚೀನತೆ ಕೆಳಗಣ ಈಜಿಪ್ಟಿನಲ್ಲಿ ದೊರೆತ ಕ್ರಿಸ್ತಶಕ ೨ನೆಯ ಶತಮಾನದಲ್ಲಿ ರಚಿತವಾದ ಬಂದು ಗ್ರೀಕ್ ನಾಟಕದಲ್ಲಿ ಕೆಲವು ಕನ್ನಡ ಶಬ್ದಗಳು ದೊರೆಯುತ್ತದೆ ಎಂಬ ಅಂಶವು ಪ್ರಾಧನುಸಂಪುಟದ ಅವತರಣಿಕೆಯಲ್ಲಿಯೇ ತಿಳಿಸಿದೆ ನೃಪತುಂಗನು ತನ್ನ ಕವಿರಾಜಮಾರ್ಗದಲ್ಲಿ ತನಗೆ ಹಿಂದೆ ಇದ್ದ ಗದ್ಯಗ್ರ೦ಥಕತ್ರುಗಳಲ್ಲಿ ದುರ್ವಿನೀತನ ಹೆಸರನ್ನು ಹೇಳಿದ್ದಾನೆ. ಈತನು ಸುಮಾರು 500 ರಲ್ಲಿದ್ದ ಆ ಹೆಸರಿನ ಗಂಗರಾಜನಾಗಿರಬಹುದು. ಐದನೆಯ ಶತಮಾನದಿಂದ ಕನ್ನಡಶಾಸನಗಳು ದೊರೆಯುತ್ತವೆ ನೃಪತುಂಗನು ಹೇಳುವ ಕವಿಗಳಲ್ಲದೆ ಶ್ರೀವರ್ಧದೇವ, ಶ್ಯಾನುಕುಂದಾ ಚಾರ್ಯ ಇವರುಗಳು ಸುಮಾರು 700ಕ್ಕೆ ಹಿಂದೆ ಗ್ರಂಥರಚನೆಯನ್ನು ಮಾ
1, ಬೇಲೂರು 112, 2, ಮೊಳಕಾಲುಮುರು {2, 3, ಕೃಷ್ಣರಾಜಪೇಟೆ 10.