ಶ ತಮಾನ] ತಿಮ್ಮರಸ 641 ಕ್ಷೀರಾಬ್ಬಿ ಕುವರಿಯಾಣ್ಮನ ಶ್ವೇತಚ್ಛತ್ರದಂ | ತೇಲಿದ ಶಶಿ ಪೂರ್ವ ಗಿರಿಯ || ಯಮುನಾನದಿ ಕಿ ನಗೆಯೆಂಬ ನೊರೆಯ ಬೆಳ್ಳು ಸೊಬಗಿನ | ತೆರೆಯೆಂಬ ನಳಿತೋಳ್ಳಳಾಗೆ || ಸಿರಿಗಂಗಳೆ ವ ತೃ ವರನಾಭಿ ಸುಖಿಯಗೆ | ವೆಂದಳಂಗನೆಯಿಲ್ ಯಮುನ | ಅಶೋಕ ತಾಕಿದ ಬಾಣ ಕೊಲ್ಲದೆ ಹುಸಿಪೆಟ್ಟಾಗೆ | ಶೋಕಪಡುವರು ಗಾಯದೊಳು | ಸೋಕಿದಾಕ್ಷಣ ಹರಣವ ಕೋಂಬ ಸರಳನ } ಶೋಕವೆಂಬರು ಅಖಂಕದೊಳಗೆ || ವಸಂತ ಇರಲು ವಸಂತಸಮಯ ಬಂದುದಾಗಲೀ | ವಿರಹಿಮೇಧಕ್ರತುವಿಂಗೆ | ತುಲುಗಾತಿಯರ ಕಾಮಾಗ್ನಿ ಯನು ತಂಬೆಲರಿಂದ | ಲ್ಯಾಬಿದನಾಗ ವಸಂತ || ಕಾಮನಾಚಾರನಾದನು ವಸಂತನು ತಾನೆ | ನೇಮದಿಂ ದೀಕ್ಷಿತನಾದ | ಸೋಮರಜತಪಾತ್ರೆಯೊಳು ಸುಧೆಯಾಜ್ಯವ | ಹೋಮಕಾಹುತಿಯ ಮಾಡಿದರು|| ಕುಕ ಮಂತ್ರಗಳನ್ನು ವಾಚಿಸೆ ಸಾಮಗಾನದಿಂ | ಪಿಕನಿಕರಗಳು ಘೋಷಿಸಲು | ಸುಕುಸುವ ಮಾಂದಳಿರಾಗೆ ಭ್ರಮರತತಿ | ಬಕುತಿಯಿ೦ ಮಾದೂಗವ || ಮಂದಮಾರುತನಕ್ಕೀ ಯನು ಹುತಗೊಳಿಸೆ ತಾ | ವಿಂದು ಋಜನಾದನಾಗ | ತಂದರು ವಿರಹಿಗಳೆಂಬ ಪಶುವ ಬೇಗ | ಬಂಧಿಸಿದರು ಲತೆಗಳಲಿ || ತಿಮ್ಮರಸ ಸು 1700 ಇತನು ಕ್ಷೇತ್ರಗಣಿತವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ; ಶ್ರೀವತ್ಸ ಗೋತ್ರದವನು; ವಿಷ್ಣುಭಕ್ತನು; ಇವನ ತಂದೆ ಲಕ್ಷರಸ ಸ್ಥಳ ಘನಗಿರಿಯ (ಪೆನಗೊಂಡೆ) ಪಡುವದಿಕ್ಕಿನಲ್ಲಿರುವ ಕಂಭ, ಇವನು ಸುಮಾರು 1700 ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಇವನ ಗ್ರಂಧ ಕ್ಷೇತ್ರಗಣಿತ ಇದು ಪ್ರಾಯಿಕವಾಗಿ ಕಂದಗಳಲ್ಲಿ ಬರೆದಿದೆ; ಟೀಕೆಯ ಉದಾಹ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.