ಈ ಪುಟವನ್ನು ಪರಿಶೀಲಿಸಲಾಗಿಲ್ಲ.

480 ಕರ್ಣಾಟಕ ಕವಿಚರಿತೆ [17 ನೆಯ ಸಿದ್ದಮುನಿ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗ ಳನ್ನು ತೆಗೆದು ಬರೆಯುತ್ತೇವೆ. ಸತಿಯನ್ನು ಅಗಲಿದ ಕಪೋತದ ಉಕ್ತಿ ಮಧನಿಸಿ ವನೆಯೊಳು ಕದನಕಲಹದಿಂದೆ | ಮತಿಗೇಡಿತನದೊಳಗಿಹಳ || ಗತಿಗೇಡಿ ಗಂಡನ ಖತಿಮಾಡಿ ಬೈವಂತ | ಸತಿಯಳಾದಡೆ ನಿನ್ನ ನೆನೆಯೆ | ಜಗಳವೆಂದರೆ ಬೇಗ ಲಗಡುತನವ ತೋ> | ಬಗೆಯದೆ ಪುರುಷನ ಮಾತ | ನಗೆಗೇಡಿತನದಲ್ಲಿ ಬಗುಳಾಟದೊಳಗಿಹ | ವಿಗಡೆಯಾದಡೆ ನಿನ್ನ ನೆನೆಯೆ || ಬಡತನವಷಸಿದ ಕಾಲಕ್ಕೆ ಗಂಡನ 1 ನುಡಿಗೆಡಿಸದೆ ಗರ್ಭಿಕರಿಸಿ | ದೃಢಗೆಡದಂದದಿ ನಡೆ ಯುವ ಸತಿಯಳ | ಬಿಡುವ ಮನುಜ ಶತದ್ರೋಹಿ | ==no ° ° ಶ್ರೀನಿವಾಸಕವಿ ಸು. 1700 ಈತನು ಭಾರತದಲ್ಲಿ ಪರ್ವವನ್ನು ಬರೆದಿದ್ದಾನೆ. ಅವನು ಬ್ರಾಹ್ಮಣಕವಿ; ಇವನ ಸ್ಥಳ ಮಾಗಡಿಯ ಸಮೀಪದಲ್ಲಿರುವ ತಿರುಮಲೆ; ಅಲ್ಲಿಯ ರಂಗನಾಥದೇವರ ಅಂಕಿತದಲ್ಲಿ ತನ್ನ ಗ್ರಂಥವನ್ನು ಬರೆದಿದ್ದಾನೆ. ಇವನ ಕಾಲವು ಸುಮಾರು 100 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ಭಾರತ ಸ್ತ್ರೀ ಪರ್ವ ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ; ಸಂಧಿ 4, ಸದ್ಯ 243. ಆರಂ ಭದಲ್ಲಿ ಸಾಮಂತದುರ್ಗದ ಮಾಕುಟೀಪುರಸನ್ನಿಹಿತತಿರುಮಲೆಯ ಶ್ರೀರಂ ಗನ ಸ್ತುತಿ ಇದೆ ಪರ್ವದ ಕೊನೆಯಲ್ಲಿ ಶ್ರೀಮದಪರಿವಿತಶಕ್ತಿಕನಾದ ತಿರುಮಲೆಯ ರಂಗನಿಗಂಕಿತವಾಗಿ ಶ್ರೀನಿವಾಸಕವಿರಚಿತವಾದ ; ಪರ್ವಂ ಸಂಪೂರ್ಣ೦--ಎಂಬ ಗದ್ಯವಿದೆ. ಈ ಗ್ರಂಥದಿಂದ ಕೆಲವು ಪದ್ಯ ಗಳನ್ನು ತೆಗೆದು ಬರೆಯುತ್ತೇವೆ. ಶೋಕ | ಒಮ್ಮೆ ಯಲಲುವರೊಮ್ಮೆ ಬರುವ | ರೊಮ್ಮೆ ತೊಲುವಗೊಮ್ಮೆ ನರಳುವ | ರೊಮ್ಮೆ ಮರ್ಧಿಪರೊಮ್ಮೆ ಚೇತರಿಸೊಮ್ಮೆ ಪೊರಳುವರು || ಒಮ್ಮೆಯೆದೆಬಾಯ್ಕ ಳನು ಪೊಡೆವೊಡೆ | ದೊಮ್ಮೆ ತಲೆಗಳನಣಿಗೆ ತಾಗಿಪ | ರಿಮ್ಮಹಿಯೊಳವರಂದ ನೋಟಡೆ ಮುಗದವರಾರು |