ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಕವಿಚರಿತೆ - [11 ನೆಯ ನಿಃಕಲ ಸು. 1700 ನಿಃಕಲರ ವಚನ ಎಂಬ ಒಂದು ಗ್ರಂಥವು ದೊರೆಯುತ್ತದೆ, ಇದು ನಿಃಕಲ ಎಂಬವನಿಂದ ರಚಿತವಾದುದೆಂದು ಹೇಳುತ್ತಾರೆ, ಅವನು ವೀರಶ್ನೆ ವಕವಿ; ಸುಮಾರು 1700 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇನೆ. ಇವೆ ನಗ್ರಂಥದಲ್ಲಿ ಸ್ಥಲ 42 ಪದ 575ಇವೆ, ಪ್ರತಿಪದವೂ ನಿಕಲನೆ ಎಂದು ಮುಗಿಯುತ್ತದೆ. ಕೊನೆಯಲ್ಲಿ ಬಸವಸ್ತುತಿ ಇದೆ ಇದರಿಂದ ಕೆಲವು ಪದಗ ಳನ್ನು ತೆಗೆದು ಬರೆಯುತ್ತೇವೆ.. ಅಚಿಯೆನೆಂದೆನಬೇಡಿ ( ಅಜಿತನೆಂದೆನಬೇಡಿ { ಆಟಿವವ ಅದೆಗಳನಟರಿದರೆ | ಆಯಿ ಪರವು ಬೆ: ಜ್) | ಏರಬೊಟ್ಟು ತಾನಯ್ಯ ನಿಕಲನೆ | ಸ್ಮರಣೆಯಿಂ ಮನಶುದ್ದಿ | ದರುಶನದಿ ತಶುದ್ದಿ | ಸ್ಪರುಶನದಿ ಆತ್ಮಶುದ್ಧಿಯು ಶರಣೆನಲು ಮುಕ್ತಿ ಸಿದ್ಧಿಯು { ಶರಣರ ಹರನೆಂದು ನಂಬು ನಿಃಕಲನೆ | ಕುಲ್ಲಮನುಜರ ಸಂಗ ಕಾ ಪದಕದಹಾಂಗೆ | ಅಲ್ಲೇನು ಕಂಪು ಭೂಷಣವು || ಒಲ್ಲಂತ ಸುಜ್ಞಾನಿಗಳ ಸಂಗ ಕರದೊಳು | ಮಲ್ಲಿಗೆಯ ಹಾರ ನಿಃಕಲನೆ | ಸಪ್ಪಣ್ಣ ಸು, 1700 ಇತನು ಕೈವಲ್ಯಕಲ್ಪವಲ್ಲರಿಯನ್ನು ಬರೆದಿದ್ದಾನೆ, ಇವನು ವೀರಶೈ ವಕವಿ, ಗುರುಸಿದ್ದಯತಿಯ ಶಿಷ್ಯನು ಇವನಿಗೆ ಸರ್ಪಭೂಷಣ ಎಂಬ ಹಸ ರೂ ಇದ್ದಂತೆ ತೋರುತ್ತದೆ ಇವನ ಕಾಲವು ಸುಮಾರು 17oo ಆಗಿರ ಬಹುದು ಇವನ ಗ್ರಂಥ ಕೈವಲ್ಯಕಲ್ಪವಲ್ಲರಿ | ಇದು ಹಾಡಿನರೂಪವಾಗಿದೆ ಸ್ಥಲ 5, ವಚನ ಸಂಪುಟ 107, ವಿರಳೆ ಪದಗಳು 710 ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಇತಿ ಶ್ರೀಮದವಿರಳಾಸದಬಂಧುರಸಮಸ್ತತತ್ವ ತಾತ್ವಿಕರಹಸ್ಕೋಪದೇಶಕ್ಕಣರ ಚಾತುರೀಧುರೀಣ ನಿರಾಭಾರಿಗುರುಕುಲಕೇತನಾಯಮಾನ ಗುರುಸಿದ್ಧಯತಿವರೇಣ್ಯಚರ ಣಾರವಿಂದಮಕರಂದಮಧುಕರಸ್ವರೂಪ ಶ್ರೀಸರ್ಪಭೂಷಣಶಿವಯೋಗಿವಿರಚಿತಮಪ್ಪ ಕೈವಲ್ಯ ಕಲ್ಪವಲ್ಲರಿಯೆಂಬಧ್ಯಾತ್ಮ ಸುಖಬೋಧಕಪ್ರಕರಣದಲ್ಲಿ ಇದರಿಂದ ಒಂದು ಹಾಡನ್ನು ತೆಗೆದು ಬರೆಯುತ್ತೇನೆ