ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 18 ರವ್ಯಾಸನೂ ಇದೇರಾಜನ ಆಳಿಕೆಯಲ್ಲಿ ಭಾರತವನ್ನು ಬರೆದಂತೆ ತೋರುತ್ತದೆ. ಮಲ್ಲಿಕಾರ್ಜುನನ (1446 1467) ಆಳಿಕೆಯಲ್ಲಿ ಕಲ್ಲರಸನು ಜನವಶ್ಯವನ್ನು ಬರೆದಿದ್ದಾನೆ. ಪಟ್ಸ್ಥಅಜ್ಞಾನಶಸಾರಾಮೃತವನ್ನು ರಚಿಸಿದ ತೋಂಟದ ಸಿದ್ಧಲಿಂಗನು ವಿರೂಪಾಕ್ಷನ (1467 1478) ಆಳಕೆಯಲ್ಲಿ ಬಾಳಿದನು ಕವಿಲಿಂಗನಪದ ಎಂಬ ಗ್ರಂಥವನ್ನು ರಚಿಸಿದ ಕವಿ ಲಿಂಗನು ಸಾಳುವನರಸಿಂಗರಾಯನ ( 1487.-1493.) ಆಸ್ಥಾನಕವಿಯಾಗಿದ್ದನು. ಕೃಷ್ಣರಾಯನ (1509--1529) ಆಜ್ಞಾನುಸಾರವಾಗಿ ತಿಮ್ಮಣ್ಣಕವಿ ಭಾರತದ ಉತ್ತರಭಾಗವನ್ನು ಬರೆದನು ಚಾಟುವಿಟ್ಠಲನಾಥ ಎಂಬ ಬಿರುದುಳ್ಳ ಸದಾನಂದಯೋಗಿ ಅಚ್ಯುತರಾಯನ (1530--1542) ಆಳಿಕೆಯಲ್ಲಿ ಭಾಗವತವನ್ನು ಬರೆದಂತೆ ತೋರುತ್ತದೆ.ಸದಾಶಿವರಾಯನ (1513-1567) ಆಳಿಕೆಯಲ್ಲಿ ಸಲಕರಾಜನ ಮಗನಾದ ತಿರುಮಲರಾಜನು ಕಾಲಜ್ಞಾನವನ್ನು ಬರೆದ ಎಮ್ಮೆ ಬಸವನಿಗೆ ಒಂದು ಗ್ರಾಮವನ್ನು ಕೊಟ್ಟಂತೆ ತಿಳಿಯುತ್ತದೆ. ಶಬ್ದಾನುಶಾಸನವನ್ನು ಬರೆದ ಭಟ್ಟಾಕಳಂಕನ ಗುರುವಾದ ಭಟ್ಟಾಕಳಂಕನು 1ನೆಯ ಶ್ರೀರಂಗರಾಯನ (1573-1584) ಆಸ್ಥಾನದಲ್ಲಿ ಆತನ ಪ್ರೇರಣೆಯಿಂದ ಸಾರತ್ರಯವನ್ನೂ ಅಲಂಕಾರತ್ರಯವನ್ನೂ ಓದಿ ಕೀರ್ತಿವರೆದಂತೆ-

        ಶ್ರೀರಂಗರಾಜನೃಪತಿ | ಪ್ರೇರಣೆಯಿಂ ವಿಒಯಮುನಿಪನುಪದೇಶನದಿಂ |
        ಸಾರತ್ರಿತಯಮುಮನಲಂ | ಕಾರತ್ರಿತಯಮುವನೋದಿ ಜಸಮಂ ಪಡೆದಂ || ಎಂಬ ಬಿಳಗಿತಾಲ್ಲೂಕಿನಲ್ಲಿರುವ ಒಂದು ಶಾಸನದ ಪದ್ಯದಿಂದತಿಳಿಯುತ್ತದೆ.ಅದೇ ಶಾಸನದಲ್ಲಿ ಶಬ್ದಾನುಶಾಸನಕಾರನಾದ ಭಟ್ಟಾಕಳಂಕನು 1ನೆಯ ವೆಂಕಟಪತಿರಾಯನ (1586-1617) ಆಳಿಕೆಯಲ್ಲಿ ಬಾಳಿದಂತೆ ಹೇಳಿದೆ.
       ಮೈಸೂರರಸರು-ರಾಜನೃಪನ (1578-1617) ಪ್ರಧಾನಿಯಾದ ತಿರುಮಲಾರ್ಯನು ಕರ್ಣವೃತ್ತಾಂತ ಕಥೆಯನ್ನು ಬರೆದಿದ್ದಾನೆ. ಚಾಮರಾಜನು (1617 -1637) ರಾಮಾಯಣ, ಬ್ರಹ್ಮೋತ್ತರಖಂಡ ಇವುಗಳನ್ನು

1. Mysore Archaeological Report for 1917, Page 51,