ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 26

ಳೊ ನೃದರ್ಭಗೌಡಮಾರ್ಗಗಳಿಗೆ ಅನ್ಯಯಿಸುತ್ತವೆಯೇಹೊರತು ಕನ್ನಡ 
ದ ಭೇದಗಳಿಗಲ್ಲ ಏಕೆಂದರೆ ಎಲ್ಲಾ ಲಕ್ಷಣಗ್ರಂಧಗಳಲ್ಲಿಯೂ ವೈದರ್ಭಗೌಡ 
ಮಾರ್ಗಗಳಿಗೆ ಈಗುರುತುಗಳು ಹೇಳಿವೆ ಈಭಾಗಗಳನ್ನು ಬಿಟ್ಟರೆ ಕನ್ನ 
ಡದ ದಕ್ಷಿಣೋತ್ತರಮಾರ್ಗಗಳಿಗೆ ಸಂಬಂಧಿಸುವ ವಿಷಯವು ಕವಿರಾಜ 
ಮಾರ್ಗದಲ್ಲಿ ಒಂದೇ ಒಂದುಕಡೆ ದೊರೆಯುತ್ತದೆ. ಅದಾವುದೆಂದರೆ 
ಕ್ರಿಯೆಗಳಲ್ಲಿ ನೋಳ್ಪೆಂ, ತರಿಸುವೆಂ ಇತ್ಯಾದಿರೂಪಗಳನ್ನು ದಕ್ಷಿಣ 
ಮಾರ್ಗದ ಕವಿಗಳೂ ಅವಕ್ಕೆ ಪ್ರತಿಯಾಗಿ ನೋಡುವೆಂ, ತರಿಸೆಂ ಇತ್ಯಾ 
ದಿರೂಪಗಳನ್ನು ಉತ್ತರಮಾರ್ಗದ ಕವಿಗಳೂ ಪ್ರಯೋಗಿಸುತ್ತಾರೆ. 
ಎಂಬುದೇ ಏವಂಚ ಸಮಾನಾರ್ಥಕವಾದ ಕೆಲವು ದ್ಯಿರೂಪಕ್ರಿಯೆಗಳಲ್ಲಿ 
ಬಂದು ಉತ್ತರಮಾರ್ಗದಲ್ಲಿಯೂ ಮತ್ತೊಂದು ದಕ್ಷಿಣಮಾರ್ಗ ದಲ್ಲಿಯೂ 
ವಿಶೇಷವಾಗಿ ಬಳಕೆಯಲ್ಲಿರುವುದೇ ಈಮಾರ್ಗಗಳಿಗೆ ಭೇದಕಗುಣವೆಂದು 
ಫಲಿತವಾಯಿತು. ನೃಪತುಂಗನ ಕಾಲದಲ್ಲಿ ಒಂದುವೇಳೆ ಈ ಭೇದವು 
ಇದ್ದಿರಬಹುದು. ಆದರೆ ಈಚೆಯ ಗ್ರಂಥಗಳಲ್ಲಿ ಕ್ರಿಯೆಗಳ ರೂಪದ್ಯ 
ಯವೂ ದೊರೆಯುತ್ತದೆ. ಉತ್ತರಮಾರ್ಗ ದಲ್ಲಿ, ನೃಪತುಂಗನ ಹೇಳಿಕೆ 
ಯ ಪ್ರಕಾರ ಆಕಾರವಿಶಿಷ್ಟವಾದ ಕ್ರಿಯಾರೂಪವು ಬಳಕೆಯಲ್ಲಿಲ್ಲ, ತೆಲು 
ಗಿನಲ್ಲಿಯೂ ಬಿಕಾರವಿಲ್ಲ. ಆದುದರಿಂದ ಉತ್ತರವಾರ್ಗವು ತೆಲುಗಿನ ಸಂಪ 
ರ್ಕದಿಂದ ಹುಟ್ಟಿತು ಎಂದು ನಿರ್ಣಯಿಸುವುದು ಧಾರ್ಷ್ಟ್ಯವೇಸರಿ. ತೆಲು 
ಗಿನಲ್ಲಿ ಈಗ ಬಿಕಾರವಿಲ್ಲದಿದ್ದರೂ ಒಂದಾನೊಂದು ಕಾಲದಲ್ಲಿ ಅದು ಇದಿ 
ರಬಹುದು ಎಂಬ ಊಹೆಗೆ ಸಾಧಕವಾದ ಗುರುತುಗಳು ಶಬ್ದಗಳಲ್ಲಿ 
ಕಾಣುತ್ತವೆ. ತಮಿಳಿನಲ್ಲಿರುವ ಪ್ರೊಳುದು ಎಂಬ ಶಬ್ದನ ಕನ್ನಡದಲ್ಲಿ 
ಪೊಳ್ತು ಎಂಬ ರೂಪದಲ್ಲಿಯೂ ತೆಲುಗಿನಲ್ಲಿ ಪ್ರೊದ್ದು ಎಂಬ ರೂಪದ 
ಲ್ಲಿಯೂ ಇದೆ. ತಮಿಳಿನ ಮತ್ತು ಕನ್ನಡದ ಪಲಿ ಎಂಬ ಶಬ್ದವು ತೆಲುಗಿ 
ನಲ್ಲಿ ಪ್ರಾ ಎಂದಾಗಿದೆ. ತಮಿಳು ಕನ್ನಡಗಳಲ್ಲಿರುವ ಪಾಳು, ಏುಳು ಎಂಬ 
ಮಾತುಗಳು ತೆಲುಗಿನಲ್ಲಿ ಪಾಡು, ಏಡು ಎಂಬ ರೂಪಗಳಲ್ಲಿವೆ ಈ 
ಉದಾಹರಣಗಳಿಂದ ವಿಕಾರವು ತೆಲುಗಿನಲ್ಲಿ ಕೆಲವುಕಡೆ ರೇಫವಾಗಿಯೂ 
ಕಲವುಕಡೆ ಡಕಾರವಾಗಿಯೂ ಪರಿಣಮಿಸಿದೆ ಎನ್ನಬಹುದು 
  1, 11, 100-104