ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನಕ್ಕೆ ಹಿಂದೆ] ಶ್ರೀಧರಾಚಾರ್ಯ 3

          ಗಜಾಂಕುಶ,1 ಮನಸಿಜ,2 ಚಂದ್ರಭಟ್ವ3 ಸು.1000
                                                         
       ಈ ಕವಿಗಳನ್ನು ಶ್ರೀಧರಾಚಾರ್ಯನು 4 ತನ್ನ  ಜಾತಕತಿಲಕದಲ್ಲಿ     
 (1049) ಸ್ತುತಿಸಿರುವುದರಿಂದ  ಇವರುಗಳು  ಅವನ ಕಾಲಕ್ಕೆ  ಹಿಂದೆ,       
 ಎಂದರೆ ಸುಮಾರು 1000 ರಲ್ಲಿಯೋ ಅಥವಾ ಆಕಾಲಕ್ಕೆ  ಸ್ವಲ್ಪ ಹಿಂದೆ     
 ಯೋ, ಇದಿರಬೇಕು.
                         _______                      
                                                                 
                     ಶ್ರೀಧರಾಚಾರ್ಯ 1049
                                                    
       ಈತನು ಜಾತಕತಿಲಕವನ್ನು  ಬರೆದಿದ್ದಾನೆ.   ಚಂದ್ರಪ್ರಭಚರಿತೆ    
   ಯನ್ನೂ ಬರೆದಿರುವಂತೆ ಜಾತಕತಿಲಕದ ಅಂತ್ಯಭಾಗದಲ್ಲಿರುವ
                                                 
      ಸುಭಗವಚಂ ಕಾವ್ಯಕವಿ | ತ್ವಭೂಷಣಂ ಶ್ರೀಧರಾರ್ಯರಚಿತಂ ಚಂದ್ರ | 
      ಪ್ರಭಚರಿತಂ  ಶಾಸ್ತ್ರಕವಿ | ತ್ವಭೂಷಣಂ ಧರೆಗೆ ನೆಗಲ್ದಿ ಜಾತಕತಿಲಕಂ || 
      ಅದಿದೆನ್ನದೆ ಜಾತಕತಿಲ | ಕದೊಳರುವುದು ಗಣಿತಧರ್ಮಮಂ ಸಕಳಜಗ |
      ದ್ವಿದಿತಂ ಚಂದ್ರಪ್ರಭಚರಿ|ತದೊಳರುವುದು ಕಾವ್ಯಧರ್ಮಮಂ ಬುಧನಿವಹಂ|| 
  ಎಂಬ  ಪದ್ಯಗಳಿಂದ  ತಿಳಿಯುತ್ತದೆ.  ಆದರೆ  ಈ  ಗ್ರಂಥವು ನಮಗೆ  
  ದೊರೆತಿಲ್ಲ.
      ಇವನು  ಜೈನಕವಿ.ಇವನ  ಸ್ಥಳ ಬೆಳುವಲನಾಡಿನಲ್ಲಿರುವ  ನರಿ      
  ಗುಂದ. “ವಿಪ್ರಕುಲೋತ್ತಮಂ” ಎಂದು ಹೇಳಿಕೊಂಡಿದ್ದಾನೆ.  “ಇದುವ      
  ರೆಗೂ ಆರೂ ಕನ್ನಡದಲ್ಲಿ ಜ್ಯೋತಿಷವನ್ನು  ಬರೆದಿಲ್ಲ ; ನೀನು ಜಾತಕ   
  ತಿಲಕವನ್ನು ಬರೆಯಬೇಕು”  ಎಂದು ವಿದ್ವಾಂಸರು ಹೇಳಲು ಈ ಗ್ರಂಥ      
  ವನ್ನು ಬರೆದಂತೆ ಕವಿ ಹೇಳುತ್ತಾನೆ.  ಇದರಿಂದ ಕನ್ನಡದಲ್ಲಿ,ಜ್ಯೋತಿಷ      
  ವನ್ನು ಬರೆದವರಲ್ಲಿ  ಇವನೇ  ಪ್ರಥಮಕವಿಯೆಂದು ತಿಳಿಯುತ್ತದೆ.  ಈ  
  ಯಂಶವನ್ನು  ಬಾಹುಬಲಿ (ಸು. 1550) ತನ್ನ  ನಾಗಕುಮಾರಕಥೆಯ 
  ಆದಿಭಾಗದಲ್ಲಿಯ ಈ ಪದ್ಯದಲ್ಲಿ ದೃಢೀಕರಿಸುತ್ತಾನೆ--__________________________________________________                                                      
    I Volume I,67 2.Ibid., II5 3 Ibid.136, 4 ಇವನ ಚರಿತವನ್ನು ನೋಡಿ