ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನಕ್ಕೆ ಹಿಂದೆ] ಶ್ರೀಧರಾಚಾರ್ಯ 5

    “ಧರಣೀಸ್ತುತಾರ್ಯಭಟನಂ | ನಿರತಿಶಯೋಜ್ವಳಯಶಃಪ್ರಕೋರಕ               ನಂ ಶ್ರೀ | ಕರಣ" ಎಂಬ ಅಸಮಗ್ರವಾದ ಪದ್ಯದಲ್ಲಿ ಆರ್ಭಟನ ಹೆಸರು        

ಹೇಳಿದೆ.

    ಇವನ ಗ್ರಂಥ__
                   ಜಾತಕತಿಲಕ                                              
                                                      
    ಇದು ಜ್ಯೋತಿಷಗ್ರಂಥ ; ಕಂದವೃತ್ತಗಳಲ್ಲಿ ಬರೆದಿದೆ; 24 ಅಧಿಕಾ     

ರಗಳಾಗಿ ಭಾಗಿಸಲ್ಪಟ್ಟಿದೆ. ಅಧಿಕಾರಗಳ ಹೆಸರು-ಸಂಜ್ಞಾ, ಬಲಾಬಲ, ಗರ್ಭ, ಜನ್ಮ, ತಿರ್ಯಗ್ಜನ್ಮ, ಅರಿಷ್ಟ,ಅರಿಷ್ಟಭಂಗ, ಆಯುರ್ದಾಯ, ದಶಾಂತರ್ದಶಾ,ಅಷ್ಟಕವರ್ಗ, ಜೀವ, ರಾಜಯೋಗ, ನಾಭಿಸಂಯೋಗ, ಚಂದ್ರಯೋಗ, ದ್ವಿತ್ರಿಯೋಗ, ದೀಕ್ಷಾಯೋಗ , ರಾಶಿ, ಲಗ್ನಭಾವ, ದ್ರೆಕ್ಕಾಣ, ದೃಷ್ಟ, ಅನಿಷ್ಟ್ಯ, ಸ್ತ್ರೀಜಾತಕ, ನಿರ್ಯಾಣ, ನಷ್ಟಜಾತಕ. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ-

   ಪದಪೂರಣಮನಣಂ ಪುಗಿ | ಸದೆ ಕುದಿದು ವೃಧಾಕ್ಷರಂಗಳಂ ಪ್ರಾಸದೊಳಿ |   
   ಕ್ಕದೆ ಶಾಸ್ತ್ರದರ್ಧಮಂ ಬಿಸು | ಡದೆ ಪೂಣ್ಕೆಯಿನೋದುವೇಳದಳ್ಒಡಾರ್ 
                                           ಮೆಚ್ಚರಿದಂ || 
   ಅಮಿತಾರ್ಧ೦ ಸಕಲಾಚಾ| ರ್ಯಮತಾಂತಸ್ಸಾರಮತಿಗಭೀರಂ ಹೃದಯಂ | 
   ಗಮಮನ್ಯಶಾಸ್ತ್ರನಿರಪೇ | ಕ್ಷಮೆಂಬಿನಂ ಖ್ಯಾತಮಾಯ್ತು ಚಾತಕತಿಲಕಂ || 
   ಸುಕರಮುಚಿತಕ್ರಿಯಾಕಾ | ರಕಮಪಶಬ್ದ ಪ್ರದೂರತುಪನೇಯಂ ಸಾ | 
   ಧ೯ಕಪದವಿನ್ಯಾಸಂ ಜಾ | ತಕತಿಲಕವೀದೆಂದು ಕೊಂಡುಕೊನೆಯದರೊಳರೇ || 
   ಲಲಿತವಚೋಲಲನಾನನ | ತಿಲಕಂ ದೈವಜ್ಞವದನತಿಲಕಂ ಎದ್ವ | 
   ತ್ಕುಲಮುಖತೀಕಂ ಜಾತಕ|ತಿಲಕಂ ತ್ರೈಲೋಕ್ಯತಿಲಕಮಿದು ಕೇವಲಮೇ||
   ಗ್ರಂಥಾವತಾರದಲ್ಲಿ  ಜಿನಸ್ತುತಿಯೂ  ಸರಸ್ವತೀಸ್ತುತಿಯೂ  ಇವೆ. ಅಧಿಕಾರಾಂತ್ಯದಲ್ಲಿ ಈಗದ್ಯವಿದೆ__
    ಇದು ಭಗವದರ್ಹತ್ಪರಮೇಶ್ವರಚರಣಸರಸಿರುಹಷಟ್ಪದಾಯಮಾನಂ ಸರಸಪ್ರ ಸನ್ನಂ ವಚೋಲಕ್ಷ್ಮೀಧರಂ  ಗದ್ಯಪದ್ಯವಿದ್ಯಾಧರಂ ಶ್ರೀ ಶ್ರೀಧರಾಚಾರ್ಯಪ್ರಣೀತ    ಮಪ್ಪ ಜಾತಕತಿಲಕದೊಳ್