ಈ ಪುಟವನ್ನು ಪರಿಶೀಲಿಸಲಾಗಿಲ್ಲ.
12 ಕರ್ಣಾಟಕ ಕವಿಚರಿತೆ. [15 ನೆಯ ಅಚರಾಜ, ಮಲ್ಲಿದೇವ 1 1104 ಇವರುಗಳು ಬರೆದ ಅಬ್ಬಲೂರುಶಾಸನದ ವಿವರವು ಪ್ರಥಮಸಂಪು ಟದಲ್ಲಿ ಹೇಳಿಲ್ಲ. ಈ ಶಾಸನದಲ್ಲಿ ದಂಡನಾಯಕಗೋವಿಂದರಸನು ಏಚಿ ಗಾವುಂಡನ ಪ್ರಾರ್ಥನಾನುಸಾರವಾಗಿ ಅಬ್ಬಲೂರ ಬ್ರಹ್ಮೇಶ್ವರದೇವಸ್ಥಾ ನಕ್ಕೆ ನಾಗರಖಂಡಕ್ಕೆ ಸೇರಿದ ಮುರಿಗನಹಳ್ಳಿಯನ್ನು ಶೈವಾಚಾರ್ಯನಾದ ಸೋಮೇಶ್ವರಪಂಡಿತನ ಕಾಲಂ ಕರ್ಚಿ ಬಿಟ್ಟಂತೆ ಹೇಳಿದೆ. ಈ ಶಾಸನ ದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- ಶ್ರೀಕಂರದೇವಸ್ತುತಿ ಹರಪಾದಾಂಭೋಜದೊಳ್' ಚಿತ್ತ ಮನೆಸೆವ ಮುಖಾಂಭೋಜದೊಳ್ ಭಾರತೀಸೌ೦ | ದರಿಯಂ ಚಾರಿತ್ರದೊಳ್ ನಿರ್ಮಲತೆಯನಖಿಲಾಶಾಂತದೊಳ್ ಶಕ್ರದಿಕ್ಕುಂ || ಜರಭಾಸ್ವತ್ಕೀರ್ತಿಯಂ ಬಾಪ್ಪುಲೆ ನಿಲಿಸಿದನುಧ್ಯದ್ಗುಣೌಘಂ ಮುನೀಂದ್ರಾ | ಭರಣಂ ಶ್ರೀಕಂಠದೇವಂ ಬುಧಜನತಿಲಕಂ ತರ್ಕವಿದ್ಯಾಸಮುದ್ರಂ || ಸೋಮೇಶ್ವರಸೂರಿಸ್ತುತಿ. ಕೆಲಬರ್ ತರ್ಕವಿಶಾರದರ್ ಕೆಲಬರಾಪ್ತಾಳಾಪಸಂಬೊಧಕರ್ | ಕೆಲಬರ್ ನಾಟಕಕೋವಿದರ್ ಕೆಲಬರೊಳ್ಗಬ್ಬಂಗಳಂ ಬಲ್ಲವರ್ || ಕೆಲಬರ್ ವ್ಯಾಕರಣಜ್ಞರಿಂತಿನಿತುಮಂ ಬಲ್ಲನ್ನರಿಲ್ಲೆಲ್ಲಮಂ | ಸಲೆ ಸೋಮೇಶ್ವರಸೂರಿ ಬಲ್ಲನನಘಂ ನೈಯಾಯಿಕಾಗ್ರೇಸರಂ || ಅಕಳಂಕಾಮ್ರಕುಜಾತಚೈತ್ರಸಮಯಂ ಲೋಕಾಯತಾಂಭೋಧಿಶೀ | ತಕರಂ ಸಾಂಖ್ಯದಿಶಾದಿಶಾರದನಿ ಮೀಮಾಂಸಾಂಗನಾಕಂಬುಕಂ || ರಕನನ್ಮೌಕ್ತಿಕಭೂಶಣಂ ಸುಗತನೀರೇಜಾತಚಂಡಾಂಶು ತಾ | ರ್ಕಿಕಸೋಮೇಶ್ವರಸೂರಿ ಸೆಂಪುವಡೆದಂ ನೈಯಾಯಿಕಾಗ್ರೇಸರಂ || ------ ಮೌಕ್ತಿಕಕವಿ ಸು. 1120 ಚಂದ್ರನಾಥಾಶ್ಟಕದ ಅಂತ್ಯದಲ್ಲಿರುವ ಕೃತಕೃತ್ಯಂ ಮೌಕ್ತಿಕಂ ಸತ್ಕವಿ ವಿರಚಿಸಿದೀ ಸಾರಮಪ್ಪಷ್ಟಕಶ್ರೀ | ಸ್ತುತಿಯಂಪೇಳ್ದೋದುವಾಲಿಪ್ಪವರ್ಗೆನಿರುಪಮಾನಂದಮಂಮಾಳ್ಕೆ ಸೀತಾ|| -------------------------------------------------- I, Vol, I, 366.