ಈ ಪುಟವನ್ನು ಪ್ರಕಟಿಸಲಾಗಿದೆ
೭೬
ಕರ್ನಾಟಕ ಗತವೈಭವ

ಟ್ಟು ಶಿಲಾಹಾರ ಮನೆತನಗಳು ಮೂರು. ಅವೆಲ್ಲ ರಾಷ್ಟ್ರಕೂಟರ ಕಾಲದಲ್ಲಿ ತಲೆಯೆತ್ತಿದುವು. ಉತ್ತರ ಕೊಂಕಣದಲ್ಲಿ ೧೪೦೦ ಹಳ್ಳಿಗಳಿದ್ದು , ಪುರಿ ಎಂಬುದು ಈ ಉತ್ತರ ಕೊಂಕಣದ ಶಿಲಾಹಾರವಂಶದ ರಾಜಧಾನಿಯು. ರಾಷ್ಟ್ರಕೂಟರ ಅರಸನಾದ ಅಮೋಘವರ್ಷ ಅಥವಾ ನೃಪತುಂಗ (೮೧೫-೮೭೭) ನ ಕಾಲಕ್ಕೆ ಅಲ್ಲಿ ಫುಲ್ಲಶಕ್ತಿಯೆಂಬವನು ಅವನ ಮಾಂಡಲಿಕನಾಗಿ ಆಳುತ್ತಿದ್ದನು. ದಕ್ಷಿಣ ಕೊಂಕಣದ ಶಿಲಾಹಾರರ ರಾಜಧಾನಿಯು ಖಾರೆ ಪಟ್ಟಣವಾಗಿತ್ತು. ಈ ಶಿಲಾಹಾರರು ಅಷ್ಟು ಪ್ರಸಿದ್ಧರಾಗಿರಲಿಲ್ಲ. ಕೊಲ್ಲಾಪುರದ ಶಿಲಾಹಾರವಂಶವೇ ಮೂರನೆಯ ಶಿಲಾಹಾರ ವಂಶ. ಕೊಲ್ಲಾಪುರ, ಮಿರಜ, ಕರ್ಹಾಡ ಪ್ರಾಂತಗಳು ಇವರ ವಶದಲ್ಲಿದ್ದುವು. ಇದು ಎಲ್ಲಕ್ಕೂ ಈಚೆಯ ಮನೆತನವು. ರಾಷ್ಟ್ರಕೂಟ ವಂಶವು ಹಾಳಾಗುವ ಕೊನೆ ಕೊನೆಗೆ ಈ ಮನೆತನವು ಉದಯಕ್ಕೆ ಬಂದಿತು. ಇವರ ವಂಶಾ ವಳಿಯನ್ನು ಇಲ್ಲಿ ಕೊಟ್ಟಿದೆ.

ಜಟ್ಟಿಗ (೧ನೇ)
ಜಟ್ಟಿಗ (೨ನೇ)




ಗೋಂಕ ಗುಹಲ ಕೀರ್ತಿರಾಜ ಚಂದ್ರಾದಿತ್ಯ
ಮಾರಸಿಂಹ
(೧೦೫೮)



ಭೋಜ ಗಂಡರಾದಿತ್ಯ
ವಿಜಯಾದಿತ್ಯ
ಭೋಜ (೨ನೇ)
(೧೧೭೮)

ಗಂಡರಾದಿತ್ಯನೆಂಬವನು ಪ್ರಸಿದ್ಧ ರಾಜನು. ಮಿರಜ ಸಂಸ್ಥಾನದಲ್ಲಿಯ ಇರಕೂಡಿಯಲ್ಲಿ “ಗಂಡಸಮುದ್ರ'ವೆಂಬ ಸರೋವರವನ್ನು ಕಟ್ಟಿಸಿದನು.