ಈ ಪುಟವನ್ನು ಪ್ರಕಟಿಸಲಾಗಿದೆ
೧೨ನೆಯ ಪ್ರಕರಣ - ವೈಭವ-ವರ್ಣನೆ
೮೯

ರಿಸುವುದರಲ್ಲಿ ಸೋಜಿಗವೇನು? ಈ ಅರಸನು ಕ್ಷತ್ರಿಯ ಕುಲದವನು. ಈತನ ಹೆಸರು ಪುಲಿಕೇಶಿ. ಇವನ ವಿಚಾರಗಳು ಉದಾತ್ತ ಮತ್ತು ಗಂಭೀರವಾದವುಗಳು; ಪ್ರಜೆಗಳ ಮೇಲೆ ಇವನಿಗೆ ಬಲು ಪ್ರೀತಿ, ಇವನು ಕೊಡುಗೈ ದೊರೆ ಎಂದು ಹೆಸರುಗೊಂಡಿರುವನು. ಈತನ ಪ್ರಜೆಗಳು ಅತ್ಯಂತ ರಾಜನಿಷ್ಠರಾಗಿ ಈತನ ಸೇವೆಯಲ್ಲಿ ತತ್ಪರರಾಗಿರುವರು, ಚಕ್ರವರ್ತಿಯಾದ ಹರ್ಷವರ್ಧನನು ಅನೇಕ ರಾಜ್ಯಗಳನ್ನು ಗೆದ್ದಿರುವನು; ನೆರೆಹೊರೆಯವರೂ ದೂರ ದೂರ ದೇಶದವರೂ ಈ ಹರ್ಷವರ್ಧನನಿಗೆ ಅಂಜಿ ನಡಗುವರು. ಆದರೆ ಈ ಪುಲಿಕೇಶಿಯ ಪ್ರಜೆಗಳು ಮಾತ್ರ ಆತನನ್ನು ಲೆಕ್ಕಿಸಿರುವುದಿಲ್ಲ. ಆ ಹರ್ಷವರ್ಧನನು ಇವರನ್ನು ಸೋಲಿಸುವುದಕ್ಕಾಗಿ ಪಂಚನದಗಳ ಸೈನ್ಯವೆಲ್ಲವನ್ನೂ ಕಲೆ ಹಾಕಿದ್ದಾನೆ; ತನ್ನ ರಾಜ್ಯದೊಳಗಿನ ಅತಿರಥ ಮಹಾರಥರನ್ನೆಲ್ಲ ಕರೆಸಿಕೊಂಡಿದ್ದಾನೆ. ಇಷ್ಟೆಲ್ಲ ಬಲವಾದ ಸೇನಾ ಸಾಮಗ್ರಿಯನ್ನಳವಡಿಸಿಕೊಂಡು ಹರ್ಷವರ್ಧನನು ತಾನೇ ಸ್ವತಃ ಇವರ ಮೇಲೆ ದಂಡೆತ್ತಿ ಬಂದಿದ್ದಾನೆ, ಆದರೂ ಇವರನ್ನು ಮುರಿಬಡಿಯುವದು ಅವನಿಂದಾಗಲಿಲ್ಲ. ಇದರ ಮೇಲಿಂದ, ಈ ನಾಡಿನ ಜನರ ಕ್ಷಾತ್ರತೇಜವು ಎಷ್ಟೆಂಬುದು ಗೊತ್ತಾಗುವುದು. ಜನರು ವಿದ್ಯಾವಂತರು; ಇವರಲ್ಲಿ ನಾಸ್ತಿಕರೂ ಆಸ್ತಿಕರೂ ಇರುವರು. ಈ ರಾಜ್ಯದಲ್ಲಿ ನೂರು ಮಠಗಳುಂಟು. ಅದರೊಳಗೆ ಸುಮಾರು ೫೦೦೦ ಬೌದ್ಧ ಭಿಕ್ಷುಗಳಿದ್ದಾರೆ. ಅವರೊಳಗೆ ಮಹಾಯಾನ ಪಂಥದವರೂ, ಹೀನಯಾನ ಪಂಥದವರೂ ಇರುವರು. .....
ವಾಚಕರೇ ! ಈ ರೀತಿಯಾಗಿ ಇನ್ನೂ ಹೆಚ್ಚಿಗೆ ವರ್ಣನೆಯಿರುವುದು. ವಿಸ್ತಾರ ಭಯದಿಂದ ನಾವು ಅದನ್ನು ಇಲ್ಲಿ ಕೊಟ್ಟಿಲ್ಲ. ಕರ್ನಾಟಕಸ್ಥರೇ ಈ ಮೇಲಿನ ವರ್ಣನೆಯನ್ನು ಓದಿ ಯಾವ ಕರ್ನಾಟಕಸ್ಥನಿಗೆ ತನ್ನ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನವುಂಟಾಗುವುದಿಲ್ಲ? ಕನ್ನಡಿಗರೇ, ನಿಮ್ಮ ಪೂರ್ವಜರ ಆ ಧೀರೋದಾತ್ತವಾದ ಸ್ವಭಾವಕ್ಕೆ ಈಗಿನ ನಿಮ್ಮ ನಿರ್ಬಲ ಸ್ವಭಾವವನ್ನು ಹೋಲಿಸಿ ನೋಡಿ, ನಾಚಿರಿ.
ನ್ನು ಚಾಲುಕ್ಯರ ಅನಂತರದಲ್ಲಿ ರಾಷ್ಟ್ರಕೂಟವಂಶದ ರಾಜಧಾನಿಯಾದ ಮಳಖೇಡ ಪಟ್ಟಣದ ವರ್ಣನೆಯನ್ನು ಇಲ್ಲಿ ಕೊಡುವೆವು, ವರ್ಧಾ ಮತ್ತು ಕರ್ಹಾಡಗಳಲ್ಲಿ ಸಿಕ್ಕಿದ ತಾಮ್ರ ಶಾಸನಗಳಲ್ಲಿ ಈ ಕೆಳಗಿನ ಶ್ಲೋಕವು ದೊರೆಯುತ್ತದೆ.