ಗಳಿಂದ ತುಂಬಾ ಮುಚ್ಚಲ್ಪಟ್ಟಿದ್ದು ವು. ಅದರ ತಗಡುಗಳು ಕತ್ತಿಯ ಅಲಗಿನಷ್ಟು ದಪ್ಪವಾಗಿ ಬಂಗಾರದ ಮೊಳೆಗಳಿಂದ ಗಟ್ಟಿಯಾಗಿ ಕೂಡಿಸಲ್ಪಟ್ಟಿದ್ದುವು.
"ದುಯಾರ್ಟ ಬಾರ್ಬೊಸಾ” ಎಂಬ ಪೋರ್ಚುಗೀಸ್ ಪ್ರವಾಸಿಯು ೧೫೦೪ ರಲ್ಲಿ ಇಲ್ಲಿಗೆ ಬಂದಿದ್ದನು. ಅವನೂ ಹೀಗೆಯೇ ಬಣ್ಣಿಸಿರುವನು.
“ಈ ಪಟ್ಟಣದಲ್ಲಿ ಅಸಂಖ್ಯಾತ ಜನರುಂಟು.* ಅರಮನೆಗಳೂ ಅಸಂಖ್ಯಾತವಾಗಿವೆ; ಇಲ್ಲಿ ಎಲ್ಲ ತರದ ಜನಾಂಗಗಳ ಮತ್ತು ಜಾತಿಗಳ ಜನರ ಮುಖಗಳನ್ನು ನೋಡಬಹುದು, ಇಲ್ಲಿಗೆ ಪೇಗೂ ಮತ್ತು ಸಿಂಹಲದೀಪದಿಂದ ವಜ್ರಗಳು ಬರುತ್ತವೆ”.
ನನಿಝನೆಂಬ ಮತ್ತೊಬ್ಬ ಪೋರ್ಚುಗೀಸ್ ಪ್ರವಾಸಿಯೂ ಹೀಗೆಯೇ ವರ್ಣಿಸುವನು.
ಪೇಯಸನೆಂಬ ಪೋರ್ಚುಗೀಸ್ ಪ್ರವಾಸಿಯು ೧೫೨೦ರಲ್ಲಿ ಎಂದರೆ ಈ ವೈಭವದ ಪರಮಾವಧಿಯ ಕಾಲದಲ್ಲಿ ಇಲ್ಲಿಗೆ ಬಂದಿದ್ದನು. ಅವನು ವಿಜಯನಗರ ಪಟ್ಟಣವನ್ನು ಅತಿವಿಸ್ತಾರವಾಗಿ ವರ್ಣಿಸಿರುವನು. ಅದರಿಂದ ಇಂಥ ಪೇಟೆಯು ಇಂಥ ಕಡೆಯೇ ಇತ್ತೆಂದೂ ಇಂಥ ಗುಡಿಯು ಇಲ್ಲಿಯೇ ಇತ್ತೆಂದೂ ಈಗಲೂ ಗೊತ್ತು ಹಿಡಿಯಬಹುದು, ಆದರೆ ಸ್ವಲ್ಪ ಸಾರಾಂಶವನ್ನು ಇಲ್ಲಿ ಕೊಡದಿರಲಾರೆವು.
"ಈ ಪಟ್ಟಣದ ವಿಸ್ತಾರವನ್ನು ನಾನು ಏನೆಂದು ಬಣ್ಣಿಸಲಿ! ಒಮ್ಮೆಯೇ ಇಡೀ ಪಟ್ಟಣವನ್ನು ಕಂಡರಷ್ಟೇ ಇದನ್ನು ನಾನು ಚೆನ್ನಾಗಿ ಬಣ್ಣಿಸಲಾದೀತು! ಆದರೂ ನಾನು ಒಂದು ಗುಡ್ಡವನ್ನೇರಿ ನೋಡಿದನು. ಆಗ ನನ್ನ ಕಣ್ಣಿಗೆ ಬಿದ್ದ ಭಾಗವೇ ರೋಮ್ ಪಟ್ಟಣದಷ್ಟು ವಿಶಾಲವೂ ಅತ್ಯಂತ ಮನೋಹರವೂ ಆಗಿದೆ. ಅಲ್ಲಿ ನಿಬಿಡವಾದ ಗಿಡಗಳ ಸಾಲುಗಳು ಅಂದವಾಗಿ ಕಂಡವು. ಅಲ್ಲಲ್ಲಿಗೆ ಅನೇಕ ಸರೋವರಗಳು ಕಂಗೊಳಿಸುತ್ತವೆ, ಅರಮನೆಯ ಸಮೀಪದಲ್ಲಿಯೇ ತೆಂಗಿನ ಬನಗಳೂ ಫಲಭರಿತವಾದ ತೋಟಗಳೂ ತುಂಬಿವೆ, ಅಲ್ಲಲ್ಲಿಗೆ ನಿರ್ಮಲ
- *ಹಿ೦ದೆ ಆನೆಯ ಪ್ರಕರಣದಲ್ಲಿ ಜನಸಂಖ್ಯೆಯು ೫೦-೬೦ ಲಕ್ಷ ಇರಬಹುದೆಂದು ತಪ್ಪಿ ಬಿದ್ದದೆ. ಶ್ರಿ. ಬಿ. ಸೂರ್ಯ ನಾರಾಯಣ ರಾವ ಇವರು ೩೦ ಲಕ್ಷವಿರಬಹುದೆಂದು ಊಹೆ ಕಟ್ಟುತ್ತಾರೆ.