ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ಕರ್ನಾಟಕ ಗತವೈಭವ

place in the west- eastwards its southern limit was the Tungabhadra and Krishna rivers; and on the North it perhaps extended to a line drawn from the South end of the Chilka lake towards Nagpur, and thence Westwards and Southwards to the coast.
The Dharwar District may be regarded as the Cradic of the style.

ಸಾರಾಂಶ:– ಈ ಚಾಲುಕ್ಯ ಪದ್ದತಿಯ ಗುಡಿಗಳು ಅವುಗಳ ಉಗಮ ಸ್ಥಾನವಾದ ಮೈಸೂರ ಪ್ರಾಂತದಲ್ಲಿಯೂ ಮಿಕ್ಕ ಕರ್ನಾಟಕದಲ್ಲಿಯೂ ವಿಶೇಷ ವಾಗಿ ಕಂಡುಬರುತ್ತವೆ. ಪೂರ್ವ ದಿಕ್ಕಿಗೆ ತುಂಗಭದ್ರಾ ಮತ್ತು ಕೃಷ್ಣಾ ನದಿಗಳೇ ಅವುಗಳ ದಕ್ಷಿಣಗಡಿಯು, ಚಿಲ್ಕಾ ಸರೋವರದ ದಕ್ಷಿಣ ತುದಿಯಿಂದ ಮೇಲೆ ಉತ್ತರಕ್ಕೆ ನಾಗಪುರದವರೆಗೂ ಅಲ್ಲಿಂದ ಪಶ್ಚಿಮಕ್ಕೂ ದಕ್ಷಿಣಕ್ಕೂ ಸಮುದ್ರ ತೀರದವರೆಗೂ ಈ ಗುಡಿಗಳು ತುಂಬಿರುತ್ತವೆ.
ಧಾರವಾಡ ಜಿಲ್ಲೆಯಂತೂ ಇಂಥ ಗುಡಿಗಳ ಹುಟ್ಟು ಭೂಮಿಯೇ ಆಗಿದೆ.
ರ್ನಾಟಕ ರಾಜರು ಆಳಿದ ಪ್ರದೇಶವೆಲ್ಲವೂ ಈ ಚಾಲುಕ್ಯ ಪದ್ಧತಿಯ ಗುಡಿಗಳಿಂದ ತುಂಬಿದೆ. ಆದುದರಿಂದ ಕರ್ನಾಟಕವು ಇಂಥ ಗುಡಿಗಳ ಆಗರವೆಂದೂ ಧಾರವಾಡ ಜಿಲ್ಲೆಯು ತವರುಮನೆಯೆಂದೂ ಹೇಳಬಹುದು. ಈ ಪದ್ದತಿಗೆ ಚಾಲುಕ್ಯ ಪದ್ಧತಿಯನ್ನಬೇಕೋ ಬೇಡವೋ ಎಂಬ ವಾದದಲ್ಲಿ, ನಾವು ಪ್ರವರ್ತಿಸುವುದಿಲ್ಲ. ಚಾಲುಕ್ಯರೂ ರಾಷ್ಟ್ರಕೂಟದವರೂ ಹೊಸ ಚಾಲುಕ್ಯರೂ ಹೊಯ್ಸಳರೂ ಕರ್ನಾಟಕರೇ ಆಗಿರುವುದರಿಂದ ಅವರು ಕಟ್ಟಿದ ಗುಡಿಗಳ ಪದ್ದತಿಗೆ ಇತಿಹಾಸದೃಷ್ಟಿಯಿಂದ ಕರ್ನಾಟಕ ಪದ್ದತಿಯೆಂದೇ ಕರೆಯಬಹುದು.
ನಮ್ಮ ಕಟ್ಟಡಗಳಲ್ಲಿ ಅತ್ಯಂತ ಪ್ರಸಿದ್ದವಾದ ಕೆಲವು ದೇವಾಲಯಗಳ ವರ್ಣನೆಯನ್ನು ನಾವು ಇದರಡಿ ಕೊಡುತ್ತೇವೆ.
ಗತ್ತಿನೊಳಗೆಲ್ಲ ಅತ್ಯಂತ ಅದ್ಭುತಕೃತ್ಯವೆಂದು ಹೆಸರುಗೊಂಡು, ಪರ ದೇಶಿಯ ಪ್ರವಾಸಿಕರನ್ನೂ ಶಿಲ್ಪಜ್ಞರನ್ನೂ ತನ್ನ ಕಡೆಗೆ ಎಡೆಬಿಡದ ಎಳೆದು ಕೊಂಡು ಬರುವ ದೇವಾಲಯವಾವುದೆಂದರೆ, ನಾಸಿಕದ ಹತ್ತಿರ ಮೊಗಲಾಯಿ