ಈ ಪುಟವನ್ನು ಪ್ರಕಟಿಸಲಾಗಿದೆ



೧ನೆಯ ಪೂರಕ ಪ್ರಕರಣ ಕರ್ನಾಟಕ-ಇತಿಹಾಸ-ಸಂಶೋಧನ
೧೩೧

ಈ ಇಂಡಿಯನ್ ಆಂಟಿಕ್ವರಿ(Indian Antiquary) ಮಾಸಪತ್ರಿಕೆಯ ಜೊತೆಗೇ ಎಫಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಸ್ವತಂತ್ರವಾದ ಪತ್ರಿಕೆಯನ್ನು ೧೮೯೧ನೆಯ ಇಸಿವಿಯಿಂದ ಹೊರಡಿ ಸಹತ್ತಿರುವರು. ಇದರಲ್ಲಿ ಕೇವಲ ಲಿಪಿಗಳೇ ದೊರೆಯುತ್ತವೆ. ಇವೆರಡು ಪತ್ರಿಕೆಗಳೂ ಇನ್ನೂ ನಡೆಯುತ್ತಿವೆ. ಇವು ಸಂಶೋಧಕರಿಗೆ ಅವಶ್ಯವಾದ ಪುಸ್ತಕಗಳು.
ಮೈಸೂರು ಸರಕಾರದವರಂತೂ ತಮ್ಮ ಪ್ರಾಂತದ ಶಿಲಾಲಿಪಿ ಮುಂತಾದುವುಗಳನ್ನು ಸಂಪೂರ್ಣವಾಗಿ ಸಂಶೋಧಿಸಿ ಅಚ್ಚು ಹಾಕಿದ್ದಾರೆ. ಈಗ ಒಟ್ಟು ೧೨ ಪುಸ್ತಕಗಳು ಹೊರಬಿದ್ದಿವೆ. ಇದಲ್ಲದೆ, ಆ ಖಾತೆಯವರು ಪ್ರತಿ ವರುಷವೂ ಹೊಸಶೋಧಗಳನ್ನು ಮಾಡುತ್ತಿದ್ದಾರೆ. ಅವೆಲ್ಲಾ ಪುಸ್ತಕಗಳೂ ನಮ್ಮ ಇತಿಹಾಸಕ್ಕೆ ಸಂಬಂಧಪಟ್ಟವುಗಳೇ ಆಗಿರುವುದರಿಂದ ಅವೆಲ್ಲವೂ ಓದತಕ್ಕವೇ.
ಇತ್ತಿತ್ತ ತಿರುವಾಂಕೂರು ಮತ್ತು ನಿಜಾಮ ಸರಕಾರದವರೂ ಈ ಪುರಾಣ ವಸ್ತು ಸಂಶೋಧನದ (Archeology) ಬೇರೆ ಖಾತೆಯನ್ನೇ ಏರ್ಪಡಿಸಿದ್ದಾರೆ. ನಿಜಾಮ ಇಲಾಖೆಯಲ್ಲಿಯ ಹೊಸದಾಗಿ ಈ ಸಂಬಂಧದಿಂದ ಒಂದು ಖಾತೆಯು ನಿರ್ಮಿತವಾಗಿದೆ.
ಇನ್ನು ಈ ವಿಷಯವನ್ನು ನಮ್ಮ ಸರಕಾರದವರು ಹೇಗೆ ಕೈಕೊಂಡರೆಂಬುದನ್ನು ಇಲ್ಲಿ ಸಂಕ್ಷೇಪವಾಗಿ ಕೊಡುವೆವು. ಪುರಾಣ ವಸ್ತು ಸಂಶೋಧನಕ್ಕೆ (Archeology) Dr. Burgess ಇವರ ಇಂಪೀರಿಯಲ್ ಸೀರಿಸ್ (Imperial Series) ಮತ್ತು ಜನರಲ್ ಕನ್ನಿಂಗ್ಹಾಮ್ (General Cunningham) ಇವರ ಡಿಸ್ಟ್ರಿಕ್ಟ ರಿಪೋರ್ಟ್ಸ (District Reports) ಇವೇ ಮೊದಲನೆಯ ಪುಸ್ತಕಗಳು. ಆದರೆ ಡಾ| ಬರ್ಗೆಸ್ (Dr. Burgess) ಇವರು ಈ ವಿಷಯವನ್ನು ಸಂಶೋಧಿಸುವ ಉದ್ದೇಶದಿಂದಲೇ ನೇಮಿಸಲ್ಪಟ್ಟಿದ್ದರೂ, ಅವರು ಇಡೀ ಹಿಂದುಸ್ಥಾನದಲ್ಲಿ ಕೆಲಸ ಮಾಡಲಿಲ್ಲ. ದಿ ಬುದ್ಧಿಸ್ಟ್‌ ಕೇವ್ಹಸ್ ಆಫ್ ವೆಸ್ಟರ್ನ್ ಇಂಡಿಯಾ ಮತ್ತು ದಿ ಆಂಟಿಕ್ವಿಟಿಸ್ ಆಫ್ ಬೀದರ್‌ ಆಂಡ ಔರಂಗಬಾದ ಡಿಸ್ಟ್ರಿಕ್ಟ್ಸ್ (The Buddist Caves of Western India; The antiquities of Bidar and Aurangabad Districts) ಇವೇ ಮುಂತಾದ ಅವರ ಪುಸ್ತಕಗಳ ಮೇಲಿಂದ ನಾವು ಮೇಲೆ ಹೇಳಿದ್ದರ ಸತ್ಯತೆಯು ಕಂಡುಬರು