ಈ ಪುಟವನ್ನು ಪ್ರಕಟಿಸಲಾಗಿದೆ
- ೧೨ -


ನ್ನೊಂದನೆಯ ಪ್ರಕರಣದಲ್ಲಿಯ ಬಿಜ್ಜಳ-ಬಸವರ ಕಥಾನುವಾದದಲ್ಲಿ ಕೆಲವು ದೋಷಗಳಿರಬಹುದೆಂದು ಸಂಶಯವುಂಟಾದುದರಿಂದ ನಾವು ನಮ್ಮ ಲಿಂಗಾಯತ ಮಿತ್ರರನೇಕರಿಗೆ ಹೇಳಿಕೊಳ್ಳಲಾಗಿ, ಮೊದಲಿನಿಂದಲೂ ಕನ್ನಡ ಭಾಷಾಭಿಮಾನಿಗಳಾದ ಶ್ರೀ ಗುರಬಸಪ್ಪಾ ಹಳಕಟ್ಟಿಯವರು ಹೋದ ವರುಷ ಆ ವಿಷಯವನ್ನು ಬರೆದು ಕಳುಹಿದರು. ಕರ್ನಾಟಕ ವಿಭೂತಿಗಳ ಮಹಿಮೆಯನ್ನು ಹೊಗಳು ವಾಗ ಯಾರಿಗೂ ಯಾವ ವಿಧದಿಂದಲೂ ಮನಸ್ತಾಪ ವುಂಟಾಗುವಂಥ ವಿಧಾನಗಳನ್ನು ಆದಷ್ಟು ಮಟ್ಟಿಗೆ ಮಾಡದಿರುವದಕ್ಕೆ ನಾವು ಯಾವಾಗಲೂ ಎಚ್ಚರಗೊಂಡಿ ರುವದರಿಂದ ಈ ಆವೃತ್ತಿಯಲ್ಲಿ ಶ್ರೀ ಹಳಕಟ್ಟಿಯವರು ಬರೆದುಕೊಟ್ಟ ಕಥೆಯನ್ನೇ ಸೇರಿಸಿರುವೆವು.
ಮ್ಮೀ ಪುಸ್ತಕವನ್ನು ಮೈಸೂರಿನ ಆರ್ಕಿಯಾಲಾಜಿಕಲ್ ಡಿಪಾರ್ಟ್‌ಮೆಂಟಿನ ಸುಪರಿಂಟೆಂಡಂಟರಾದ ಪ್ರಾಕ್ತನವಿಮರ್ಶ ವಿಚಕ್ಷಣ ರಾವ್‌ ಬಹದ್ದೂರ್ ಆರ್. ನರಸಿಂಹಾಚಾರ್ಯ ಎಮ್.ಎ. ಇವರೂ ಅಸಿಸ್ಟೆಂಟ್ ಸುಪರಿಂಟೆಂಡೆಂಟರಾದ ಡಾ. ವೆಂಕಟಸುಬ್ಬಯ್ಯ ಎಮ್.ಎ, ಪಿ.ಎಚ್.ಡಿ. ಇವರೂ ಇತಿಹಾಸ ದೃಷ್ಟಿಯಿಂದ ಆಮೂಲಾಗ್ರವಾಗಿ ಓದಿರುವದರಿಂದ, ಇದರೊಳಗಿನ ಇತಿಹಾಸ ವಿಷಯಗಳು ತಪ್ಪಿಲ್ಲವೆಂದು ಹೇಳಲು ಈಗ ನನಗೆ ಧೈರ್ಯವುಂಟಾಗಿದೆ. ಅವರು ತೋರಿಸಿದ ಒಂದೆರಡು ತಪ್ಪುಗಳನ್ನು ತಿದ್ದಿರುವವು. ಡಾ.ವೆಂಕಟಸುಬ್ಬಯ್ಯ ನವರು ಚಾಲುಕ್ಯರ ವಂಶಾವಳಿಯ ವಿಷಯವಾಗಿ ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯಲ್ಲಿ ಮೊನ್ನೆ ಮೊನ್ನೆ ಲೇಖನವನ್ನು ಬರೆದಿರುವರು, ಅವರು ಕೊಟ್ಟ ವಂಶಾವಳಿಯನ್ನು ನಾವು ೧೪ನೆ ಶ್ರಟ ಪುಟದಲ್ಲಿ ಕೊಟ್ಟಿರುವೆವು.
{[gap}}ಭಾಷಾ ವಿಷಯದಲ್ಲಿ, ಹಲ ಕೆಲವು ವ್ಯಾಕರಣ ದೋಷಗಳನ್ನು ತೆಗೆದು ಹಾಕಿರುವೆನಲ್ಲದೆ, ಮದ್ರಾಸಿನ ಮ.ರಾ.ರಾ. ಅಳಸಿಂಗಾಚಾರ್ಯರವರೂ ಮೈಸೂರಿನ ಮ.ರಾ.ರಾ. ಯಳಂದೂರ ರಾಮಚಂದ್ರರಾಯರೂ ಬಹಳ ಪರಿಶ್ರಮ ಪಟ್ಟು ಅತ್ತ ಕಡೆಯ ಶಬ್ದ ಪ್ರಯೋಗಗಳನ್ನು ತೋರಿಸಿಕೊಟ್ಟ ಮೇರೆಗೆ ಅವುಗಳನ್ನು ಸಾಧ್ಯವಾದ ಮಟ್ಟಿಗೆ ಈ ಪುಸ್ತಕದಲ್ಲಿ ಸೇರಿಸಲು ಯತ್ನಿಸಿರುವೆವು. ಹೀಗೆ, ಎಲ್ಲ ಭಾಗ