ಈ ಪುಟವನ್ನು ಪ್ರಕಟಿಸಲಾಗಿದೆ
ಸರ್ವಭಕ್ಷಕನಾದ ಕಾಲನಿಗೆ ಪ್ರಾರ್ಥನೆ.
೧೫೯

ಮಾಡಿದ ಕಾಗದಗಳ ಮೇಲೆ ಕಹಿಯಾದ ಮಸಿಯಿಂದ ಬರೆದಿಡುವೆವು; ನೀನು ತಿನ್ನದಿರು ! ಎಚ್ಚರಿಕೆ ! ಅಥವಾ ಹೀಗೆ ನಿನಗೆ ಹೇಳುವವರು ನಾವೂ ದಡ್ಡರೇ ಸರಿ. ಏಕೆಂದರೆ, ಅವು ನಿನ್ನ ತುತ್ತಿನೊಳಗಿನ ಹರಳುಗಳೆಂದು ನೀನೇ ಅವನ್ನು ಉಗುಳಿರುವೆ. ಇನ್ನು ಆ ಉಚ್ಚಿಹವನ್ನು ನೀನು ತಿನ್ನುವುದು ಹೇಗೆ? ಆದರೆ, ನಾವು ಅವನ್ನು ನಿನ್ನ ಪ್ರಸಾದವೆಂದು ಸ್ವೀಕರಿಸಿ, ನಮ್ಮ ಪೂರ್ವವೈಭವವನ್ನು ಪ್ರತಿಪಾದಿಸುವೆವು.

     ಶ, ಷ, ಕನ್ನಡ ನಾಡೊಳು |
             ಮುನ್ನಾಳದ ನೃಪ |
             ರುನ್ನತವಿಭವಗಳಂ ನೀನು ||
             ತಿನ್ನುವ ನಿನ್ನಯ |
             ಕಣ್ಣಿಗೆ ಬೀಳದ |
          * ಲಿನ್ನು ಮುಳಿದುಕೊಂಡಿರುತಿರ್ದ ||೧||
             ಶಿಲಾಲೇಖಗಳ |
             ಸಲೆ ತಾಮ್ರದ ಸಟ |
             ಗಳ ಪಾಳ್ ದೇಗುಲಗೊಂಬೆಗಳ ||
             ಹಳೇ ಗ್ರಂಥಗಳ |
          ǂ ಪೊಳಲ್ ಗುರುಹುಗಳ |
             ಬಳೆದಾರಿಸಿ ಕೊಂಡಾವೀಗ || ೨ ||
             ಬಲು ಕಹಿ ವಸ್ತುಗ |
             ಳೊಳಕೊಂಡೋಲೆಕ
             ಳೊಳು ಕಹಿಯಾಗಿಹ ಮಸಿಯಿಂದ ||
             ಸಲೆ ನಿನ್ನಯ ಕೃತಿ |
             ಗಳ ಗುರುಮಹಿಮಾ |
             ವಳಿಗಳನ್ನು ಬರೆದಿಡುತಿಹೆವು || ೩ ||


*ಇನ್ನು=ಉಳಿದು, ǂ ಪೊಳಲ್ ಗುರುಹು= ಪಟ್ಟಣದ ಕುರುಹು.