೬ನೆಯ ಪ್ರಕರಣ
ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ
(೫ನೆಯ ಶತಕದವರೆಗೆ )
ಲ್ಕನೆಯ ಪ್ರಕರಣದಲ್ಲಿ ಕರ್ನಾಟಕದ ಇತಿಹಾಸದ ಮಹಿಮಾತಿಶಯವನ್ನು ವರ್ಣಿಸಿ, ಐದನೆಯದರಲ್ಲಿ ಕರ್ನಾಟಕ ಇತಿಹಾಸದ ಸಾಧನ ಸಂಪತ್ತಿಯನ್ನು ಹೇಳಿರುವೆವಷ್ಟೆ. ಆದರೆ ಆ ಮಹಿಮಾತಿಶಯವು ಚೆನ್ನಾಗಿ ಮನಸ್ಸಿನಲ್ಲಿನಟ್ಟು, ಆ ಸಾಧನ ಸಂಪತ್ತಿಯನ್ನು ಯೋಗ್ಯವಾಗಿ ಉಪಯೋಗ ಮಾಡಿಕೊಳ್ಳುವ ಸಾಮರ್ಥ್ಯವು ನಮ್ಮಲ್ಲಿ ಬರಬೇಕಾದರೆ, ನಾವು ಕರ್ನಾಟಕದ ಸಂಕ್ಷಿಪ್ತ ಇತಿಹಾಸವನ್ನು ಈಗ ಗೊತ್ತಿದ್ದ ಮಟ್ಟಿಗೆ ಅರಿತುಕೊಳ್ಳುವುದು ಅವಶ್ಯವಾಗಿದೆ. ಈಗ ನಮ್ಮಲ್ಲಿಯ ಸುಶಿಕ್ಷಿತರಿಗೂ ಕೂಡ, ಕರ್ನಾಟಕದ ಪ್ರಸಿದ್ದ ಅರಸರು ಯಾರು, ಅವರು ಯಾವಾಗ ಆಳಿದರು, ಸಾರ್ವಭೌಮ ರಾಜರ ಮನೆತನಗಳು ಯಾವುವು, ಮಾಂಡಲಿಕರ ಮನೆತನಗಳು ಯಾವುವು, ಎಂಬ ಕಲ್ಪನೆಯು ಕೂಡ ಚೆನ್ನಾಗಿ ತೋರಿರುವುದಿಲ್ಲ, ಚಾಲುಕ್ಯ ವಿಕ್ರಮನಂದರೆ, ಪ್ರಸಿದ್ದ ಶಕಕರ್ತನಾದ ಉತ್ತರ ಪ್ರಾಂತದ ವಿಕ್ರಮಾದಿತ್ಯನಂದೇ ಇಂದಿಗೂ ಅನೇಕರ ಭಾವನೆ. ಪುಲಿಕೇಶಿಯೆಂಬುದು ಅರಸನ ಹೆಸರೊ, ಅರಸು ಮನೆತನದ ಹೆಸರೋ, ಇದು ಕೂಡ ಗೊತ್ತಿರುವುದಿಲ್ಲ. ಚಾಲುಕ್ಯರು ಬಾದಾಮಿಯಲ್ಲಿ ಆಳಿದರೋ, ಲಕ್ಷೇಶ್ವರದಲ್ಲಿ ಅಳಿದರೋ ಎಂಬು ದನ್ನೂ ಅನೇಕರು ಅರಿಯರು.*ಹೀಗೆ ನಿಜಸ್ಥಿತಿಯಿರುವುದರಿಂದ, ಅಲ್ಲೊಂದು ಇಲ್ಲೊಂದು ಹರಡಿರುವ ಸಾಧನ ಸಾಮಗ್ರಿಯನ್ನು ತಲೆಯಲ್ಲಿ ಹಾಕಿಕೊಳ್ಳುವುದು ಸಾಮಾನ್ಯ ಜನರಿಗೆ ಕಠಿಣ ಕಾರ್ಯವಾಗಿರುತ್ತದೆಂದು ನನ್ನ ಅನುಭವಕ್ಕೆ ಬಂದಿದೆ. ಆದುದರಿಂದ, ಮೊದಲಿಂದ ಕೊನೆಯವರೆಗೆ ಕರ್ನಾಟಕದ ಇತಿಹಾಸದ ಮಹತ್ವದ
- *ಕರ್ನಾಟಕ ಕಾಲೇಜ ಅಸೋಸಿಯೇಶನ್ನದ ವತಿಯಿಂದ ಗವರ್ನರ ಸಾಹೇಬರಿಗೆ ನಿವೇದಿಸಿದ ರಿಪೋರ್ಟನ೦ಥ ಮಹತ್ವದ ಲೇಖದಲ್ಲಿ ಸಹ ಈ ಬಗೆಯು ಭಯಂಕರವಾದ ತಪ್ಪುಗಳು ಸೇರಿದ್ದನ್ನು ನೋಡಿ ಯಾವ ಇತಿಹಾಸಾಭಿಮಾನಿಗೆ ವ್ಯಸನವಾಗಲಿಕ್ಕಿಲ್ಲ? ಕರ್ನಾಟಕ-ಇತಿಹಾಸ ಮ೦ಡಲದ ಅವಶ್ಯಕತೆಯ ಬಗ್ಗೆ ಇದಕ್ಕಿ೦ತ ಹೆಚ್ಚಿನ ಆಧಾರವು ಬೇಡ.