ಈ ಪುಟವನ್ನು ಪ್ರಕಟಿಸಲಾಗಿದೆ
೯ನೆಯ ಪ್ರಕರಣ - ಕಲ್ಯಾಣದ ಚಾಲುಕ್ಯರು
೬೧

ಕಲ್ಯಾಣದ ಚಾಲುಕ್ಯರು.*
(೯೭೩-೧೧೮೦)

ಶ್ರೀವಲ್ಲಭನಹಿತಜಯ | ಶ್ರೀವಲ್ಲಭನೆನಿಸಿ ವಿಕ್ರಮಾದಿತ್ಯಂಗಂ ||
ವಧುವೊಲೆಸೆವ ಬೊಂಧಾ | ದೇವಿಗವಾದಂ ತನೂಭವಂ ತೈಲನೃಪಂ ||

- ಗದುಗಿನ ಶಿಲಾಲೇಖ

आसेतोः कार्तराशे रघुकुलतिलकस्याच शैलाधिराजा ।
दाच प्रत्यक्पयोधेश्चटुलतिमिकुलोत्तुङ्गरिङ्गतरङ्गात् ॥
आचपृथ्वीसमुद्रान्नतनृपतिशिरोरत्नभाभासुरांघ्रिः ।
पायादाचन्द्रतारं जयदिदमखिलं विक्रमादित्यदेवः ।।

- मिताक्षरा (विज्ञानेश्वरकृत)

अथ सुरपथवल्गद्दिव्यभेरीनिनादं ।
प्रशमितपरितापं भर्तलाभात्पृथिव्याः ||
अलभत चिरिचत्ताचान्त चालुक्यलक्ष्मी |
क्लममुषमभिषेकं विक्रमादित्यदेवः ॥
श्रीचालुक्यनरेंद्रसूनुरनुजं तत्रैव पुण्ये दिने ।
कारुण्यातिशयादसूत्रयदसा पात्रं महत्यः श्रियः ।।
दासी यद्भवनेषु विक्रमधनक्रीता ननु श्रीरियम् |
तेषामाश्रितपोपणाय गहनं किं नाम पृथ्वीभुजाम् ॥

—विक्रमांकदेवचरित (बिल्हणकृत).

ನ್ನಡಿಗರೇ, ಈ ಪ್ರಕರಣದಲ್ಲಿ ನಾವು ನಿಮ್ಮ ರಾಜವೈಭವದ ಪರಮಾವಧಿಯನ್ನು ವರ್ಣಿಸುವೆವು, ಈ ಕಲ್ಯಾಣ ಚಾಲುಕ್ಯರ ಕಾಲವೆಂದರೆ ಕರ್ನಾಟಕ ವೈಭವ ಸೂರ್ಯನ ಮಧ್ಯಾನ್ಹ ಕಾಲವು. ಬಾದಾಮಿಯ ಚಾಲುಕ್ಯರು ಬಿತ್ತಿದ


*ಈ ಚಾಲುಕ್ಯರ ಲೇಖಗಳು ಸುಮಾರು ೩೦೦-೪೦೦ ದೊರೆತಿರುತ್ತವೆ. ಆದರೆ ಮೈಸೂರಿನವರು ಮುದ್ರಿಸಿದ ಲೇಖಗಳನ್ನು ಬಿಟ್ಟರೆ ಇತ್ತ ಕಡೆಗೆ ೧೦೦-೧೧೫ ಲೇಖಗಳು ಮಾತ್ರವೇ ಪ್ರಸಿದ್ಧವಾಗಿರುತ್ತವೆ. ಚಾಲುಕ್ಯ ವಿಕ್ರಮನೊಬ್ಬನ ಶಿಲಾ ಲೇಖಗಳೇ ಇನ್ನೂರರ ಮೇಲೆ ಇರುತ್ತವೆ. ಇವರ ಶಿಲಾಲೇಖಗಳು ಗದಗ, ಭೈರನಟ್ಟಿ, ಅಮ್ಮಿನಭಾವಿ, ಮಿರಜ, ಬ೦ಕಾಪುರ, ಕರಿಗುದರಿ ಮು೦ತಾದ ಅನೇಕ ಸ್ಥಳಗಳಲ್ಲಿ ದೊರೆಯುತ್ತವೆ.