ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ಕಾರಿಗಳಾದ ವಸ್ತುಗಳನ್ನು ಸೇವಿಸುವುದರಿಂದ ದೇಹಸ್ಥಿತಿಯು ಕೆಟ್ಟು ಹೋಗಿ ಕಡೆಗೆ ಗಣಹಾನಿಯಾಗುವ ಸಂಭವವೂ ಉಂಟು. ಜೂಜು, ಸಾಲ ಮೊದಲಾದ ಕೆಲವು ಅಂಶಗಳು ಮೊದಲುಮೊದಲು ಪ್ರಿಯವಾಗಿಕಂಡುಬಂದರೂ ಪರಿಣಾಮದಲ್ಲಿ ಅವುಗಳಿಂದ ಎಂಥ ಅನರ್ಥಗ ಳುಂಟಾಗುವುದೆಂಬುದನ್ನು ಯೋಚಿಸಿ ಅವಕ್ಕೆ ಆಸ್ಪದಕೊಡದಂತೆ ಮನಸ್ಸನ್ನು ಬಿಗಿಹಿಡಿದು ನಡೆಯಬೇಕು. ಮನಸ್ಸು ಕೋಪತಾಪಗಳಿಗೆ ಪ್ರವರ್ತಿಸತೊ ಡಗಿದಾಗಲೂ ಹೀಗೆಯೇ ಅದನ್ನು ತಡೆಯಬೇಕು. ಈ ರೀತಿಯಾಗಿ ಮನ ಸ್ಪನ್ನು ದುರಾರ್ಗಗಳ ಕಡೆಗೆ ಬಿಡದೆ ತಡೆಯುವುದೇ ಆತ್ಮ ನಿಗ್ರಹ ಅಥವಾ ಆತ್ಮಸಂಯಮುನ ವೆನಿಸುವುದು, ಯಾರು ಹಾಗೆ ತಮ್ಮನ್ನ ತಾವು ಹದ್ದಿನ ಲ್ಲಿಟ್ಟು ಕೊಳ್ಳಬಲ್ಲರೋ ಅಂಥವರು ಮಾವ ಇತ 'ನ್ನಾದರೂ ವಶದಲ್ಲಿ ಟ್ಟುಕೊಳ್ಳಬಲ್ಲರು. ಕೆಲವು ಸಮಯಗಳಲ್ಲಿ ಏನಾದರೂ ಕೆಲಸಮಾಡಬೇಕಾದಾಗ ಅದನ್ನು ಮಾಡೋಣವೇ ಬೇಡವೆ ಎಂಬ ಸಂಶಯವುಂಟಾಗುವುದು. ಅಂಥ ಸಂದರ್ಭಗಳಲ್ಲಿ ಕೆಲವರು ಇತರರು ಹೇಗೆ ಹೇಳಿದರೆ ಹಾಗೆ ನಡೆಯುತ್ತಾರೆ. ಆದರೆ ನಮಗೆ ಸಲಹೆ ಹೇಳತಕ್ಕವರು ನಮಗಿಂತ ಯೋಗ್ಯರೂ ತಿಳಿದವರೂ ನಮಗೆ ಆಪ್ತರೂ ಆಗಿದ್ದರೆ ಅಂಥವರ ಮಾತನ್ನು ಆವಶ್ಯಕವಾಗಿ ಈ ವುದೇಯುಕ್ತವು. ಆದರೆ ಯಾವಾಗ ಎಲ್ಲೆಲ್ಲಿಯೂ ಎಲ್ಲರಿಗೂ ಅಂಥ ಹಿತಚಿಂತಕರಾದ ದೊಡ್ಡ ಮನುಷ್ಯರು ದೊರೆಯುವರೆಂಬ ಭರವಸೆಯು ಕಡಿಮೆ. ಅಂಥವರಲ್ಲದವರ ಮಾತನ್ನು ಕೇಳುವುದರಿಂದ ಅನೇಕವೇಳೆ ನಾವು ತಪ್ಪು ದಾರಿಯನ್ನು ತುಳಿಯಬೇಕಾದೀತು. ಅದುದರಿಂದ ಎಂಥ ಸಂಶಯದಿಂ ದಾಗಲೂ , ಇತರರು ನಮಗೆ ಹೇಳುವುದರಲ್ಲಿರುವ ಗುಣದೋಷಗಳನ್ನು ಗ್ರಹಿಸಿ ಇದನ್ನು ಹೀಗೆ ಮಾಡಬೇಕೆಂದು ನಮ್ಮ ಮನಸ್ಸಿನಲ್ಲಿ ನಿಶ್ಚಯಿಸಿ 4 .