ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ರಿ ಕರ್ಣಾಟಕಗ್ರಂಥಮಾಲೆ ಯಿಂದಲೂ ಇತರರ ಪ್ರೋತ್ಸಾಹದಿಂದ ಕೆಲಸಮಾಡುವುದಕ್ಕೆ ಉಲ್ಲಾ ಸವು ಹೆಚ್ಚುತ್ತದೆ. ಮೂರುನಾಲ್ಕು ದಿನಗಳು ನಡೆಯತಕ್ಕ ಒಂದಾನೊಂದು ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯು ಮೊದಲನೆಯ ದಿನ ತಾನು ಬರೆದ ಉತ್ತರಗಳಲ್ಲಿ ಕೆಲವು ತಪ್ಪೆಂದೂ ಆದುದರಿಂದ ಆ ಭಾಗದಲ್ಲಿ ತೇರ್ಗಡೆಯಾ ಗುವುದಕ್ಕೆ ಬರಬೇಕಾದುದಕ್ಕಿಂತ ಕಡಿಮೆ ಅಂಕಗಳು ಬರಬಹುದಾಗಿಯೂ ಯೋಚಿಸಿ ಹೆದರಿಕೊಂಡು ಇನ್ನು ಮುಂದಿನ ದಿನಗಳಲ್ಲಿ ನಡೆಯತಕ್ಕ ಪರೀ ಕ್ಷೆಗಳಿಗೆ ಸಂಬಂಧಪಟ್ಟ ಪಾಠಗಳನ್ನು ಓದಲಿಕ್ಕೂ ಪುನಃ ಪರೀಕ್ಷಾ ಮಂದಿ ಕವನ್ನು ಪ್ರವೇಶಿಸಲಿಕ್ಕೂ ಕೂಡ ಮನಸ್ಸಿಲ್ಲದೆ ಹತಾಶನಾಗಿದ್ದನು. ಆ ವೇಳಗೆ ಮಾರ್ಗವಶಾತ್ ಅವನ ಉಪಾಧ್ಯಾಯರು ಅಲ್ಲಿಗೆ ಬಂದು ಅದ ನ್ನೆಲ್ಲಾ ತಿಳಿದು ಆ ವಿದ್ಯಾರ್ಥಿಗೆ ಧೈರಹೇಳಿ ಇನ್ನು ಮುಂದಿನ ದಿನಗಳ ಮೈಯ ಚೆನ್ನಾಗಿ ಉತ್ತರ ಬರೆದರೆ ಖಂಡಿತವಾಗಿಯA ತೇರ್ಗಡೆಯಾಗುವ ನೆಂದು ಭರವಸೆಹೇಳಲು ಆ ವಿದ್ಯಾರ್ಥಿಯು ಉತ್ಸಾಹಗೊಂಡು ಮುಂದಕ್ಕೆ ಸರಿಯಾಗಿ ವ್ಯಾಸಂಗಮಾಡಿ ತೃಪ್ತಿಕರವಾಗಿ ಉತ್ತರ ಬರೆದು ಕಡೆಗೆ ಪರೀ ಕೈಯಲ್ಲಿ ಉತ್ತೀರ್ಣನಾಗಿಯೇ ಆದನು. ಫುಟ್‌ಬಾಲ್‌ ಕ್ರಿಕೆಟ್ ಮೊದಲಾದ ಆಟಗಳನ್ನು ಆಡುತ್ತಿರುವಾಗಲೂ ಕುಸ್ತಿಗಳಲಿಯ ಜನಗಳು ಅವರವರ ಪಕ್ಷದವರಿಗೆ ಉತ್ತೇಜಕವಾಗು ವಂತ' * ಶಾಬಾಸ್ ' ಬೇಪ್ ಭಲಾಅಪ್ಪ ಎಂಬಂಥ ಮಾತುಗಳಿಂದಲೂ ಜಯಘೋಷಗಳಿಂದಲೂ ಹುರಿದುಂಬಿಸುವುದರಿಂದ ಆಟಗಾರರು ತಕ್ಕಷ್ಟು ಉತ್ಸಾಹಗೊಂಡು ಹೋರಾಡಿ ತಾವು ಗೆಲ್ಲುವುದರಲ್ಲಿ ತಮ್ಮ ಸರಶಕ್ತಿ ಯನ್ನೂ ವಿನಿಯೋಗಿಸುವರು. ಆದುದರಿಂದ ಪ್ರೋತ್ಸಾಹವು ಉಲ್ಲಾಸ ವನ್ನೂ ತನ್ಮೂಲಕವಾಗಿ ಶಕ್ತಿಯನ್ನೂ ಹೆಜ್ಜೆಸುವುದೆಂದಾಯಿತು. ಉತ್ಸಾಹವು ಈ ಮೇಲೆ ಹೇಳಿದ ಮಾರ್ಗಗಳಲ್ಲಿ ಹುಟ್ಟಿದರೆ ಮಾತ್ರ ಉತ್ತಮವೇ ಹೊರತು ಮಾದಕವಸ್ತುಗಳ ಸೇವನೆಯಿಂದಲಾದರೆ ಅನಥ್