ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ತನಗೆ ಯೋಗ್ಯತೆಯಿಲ್ಲದಿದ್ದರೂ ಡಂಬಕ್ಕಾಗಿ ತನ್ನ ಶಕ್ತಿಗೆ ಮೀರಿದ ಸಾಹಸಮಾಡುವುದು ಎರಡನೆಯ ವಿಧವು. ಕೇವಲ ಬಡವನು ಸಾಹುಕಾರ ಸಂತೆ ಕಾಣಿಸಿಕೊಳ್ಳಬೇಕೆಂದು ತನ್ನಲ್ಲಿದ್ದುದನ್ನೆಲ್ಲಾ ಮಾರಿ ಬೆಲೆಯಾದ ಉಡುಪುಗಳನ್ನು ಧರಿಸುವುದು ಇದಕ್ಕೆ ಉದಾಹರಣೆ, ಆದರೆ ಈ ಮೇಲೆ ಹೇಳದಂಥ ಎರಡುವಿಧವಾದ ನಡೆವಳಿಕೆಗಳ ಸ್ಪರ್ಧೆಯಿಂದ ಹುಟ್ಟಿದವುಗ ಇಲ್ಲವೆಂದು ಕೆಲವರು ಹೇಳುವರು. ಒಬ್ಬರಿಗಿಂತ ತಾವು ಕಡಿಮೆಯಾಗಕೂಡದೆಂಬ ಚೂಡಿಯಿಂದ ಸರಿ ಸಮಾನಸ್ಕಂದರು ಮಾತ್ರ ಹೊರಾಡತಕ್ಕುದೇ ನಿಜವಾದ ಸ್ಪರ್ಧೆಯು. ಸ್ಪರ್ಧೆಯಲ್ಲಿ ತಾನೂ ಮೇಲೆಯನ್ನು ಪಡೆಯಬೇಕೆಂಬುದು ಮಾತ್ರ ಮು ಖ್ಯೋದ್ದೇಶವಾಗಿರಬೇಕೇ ವಿನಾ ಇತರರ ಏಳಿಗೆಯಲ್ಲಿ ಅಸೂಯೆಪಟ್ಟು ತನಗೆ ಏನೂ ಫಲವಿಲ್ಲದಿದ್ದರೂ ಅಥವಾ ಅಲ್ಪಸ್ವಲ್ಪ ಫಲವಾಗುವ ಸಂಭವ ವಿದ್ದರೂ ಅವರನ್ನು ನಾಶಮಾಡಬೇಕೆಂಬ ಉದ್ದೇಶವಿರಬಾರದು. ನ್ಯಾಯವಾದಸ್ಪರ್ಧೆಯೊಂದಿದ್ದರೆ ಎಂಥ ದುರ್ಬಲರಿಗೂ ಕೆಲಸ ಮಾಡುವುದಕ್ಕೆ ಉಲ್ಲಾಸವು ಹುಟ್ಟಿ ಬಲವು ಹೆಚ್ಚುತ್ತದೆ. ಹಿಡಿದ ಕೆಲಸ ವನ್ನು ಬಿಡದೆ ಸಾಧಿಸಲೇ ಬೇಕೆಂಬ ದೃಢಸಂಕಲ್ಪವು ಹುಟ್ಟುತ್ತದೆ. ಮುತ್ತು ಇತರರಿಗಿಂತ ಹಿಂದೆ ಬಿದ್ದು ನಗೆಗೀಡಾದೇವಲ್ಲಾ ಎಂಬ ಭೀತಿಯು ಹುಟ್ಟುತ್ತದೆ. ಇಂಥ ಗುಣಗಳೆಲ್ಲಾ ಮನುಷ್ಯಗೆ ಶ್ರೇಯಸ್ಸಾಧಕಗಳು. ಲೋಕದಲ್ಲಿ ಒಬ್ಬರನ್ನು ನೋಡಿ ಒಬ್ಬರು ಸ್ಪರ್ಧೆಯಿಂದ ಕೆಲಸಮಾಡುವ ರೂಢಿಯಿಲ್ಲದಿದ್ದಲ್ಲಿ ಎಲ್ಲರೂ-ಆದಷ್ಟಾಗಲಿ ಹೋದಷ್ಟು ಹೋಗಲಿ'ಎಂದು ಉದಾಸೀನರಾಗಿಯೇ ಇದ್ದು ಬಿಡುತ್ತಿದ್ದುದರಿಂದ ಪ್ರಪಂಚ ವ್ಯಾಪಾರ ಗಳಲ್ಲಿ ಯಾವುದೂ ಈಗಿರುವ ಮಟ್ಟಿಗೆ ಮುಂದಕ್ಕೆ ಬರುತ್ತಲೇ ಇರಲಿಲ್ಲ. ಸ್ಪರ್ಧೆಯೊಂದಿಲ್ಲದಿದ್ದರೆ ನಾಗರಿಕತೆಯು ಇಷ್ಟು ಮಟ್ಟಿಗೆ ತಲೆಯೆತ್ತುವುದ ಆಗುತ್ತಿದ್ದಿತೆ ?