ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ ಕರ್ಣಾಟಕ ನಂದಿನಿ ಸ್ವಲ್ಪ ದಾರಿಗೆ ಬಂದಿದೆ. ಆಯಾಸವೆಲ್ಲಾ ಹೋಯಿತು. ಸ್ವಲ್ಪ ನಡೆ ಯುವಂತಾಗಿದೆ. ಇನ್ನು ನಾನೇ ಮೆಲ್ಲಗೆ ಹೋಗುವೆನು, ನಿಮಗೆ ಹೆಚ್ಚು ತೊಂದರೆ ಕೊಡಲಾರೆನು.” ಎಂದನು. ಶಿವಸಿಂಗನು ಹಾಗೆಯೇ ಆಗಲೆಂದು ತನ್ನ ಪರಿವಾರದೊಡನೆ ಹೊರಟು ತನ್ನ ದಾರಿಯನ್ನು ಹಿಡಿದನು. ಅವರು ಸ್ವಲ್ಪ ದೂರ ಹೋದಮೇಲೆ ರೋಗಿಯು ಯಾರಿಗೂ ತಿಳಿಯದಂತೆ ಎದ್ದು ಓಡಿಹೋದನು. ಇಪ್ಪತ್ತನೆಯ ಹ ಕರಣ. (ಪಾರಿವಾಳವೆಲ್ಲಿಗೆ ಹೋಯಿತು') ಸದ್ಯೆ ಯನ್ನು ಮೋಸಪಡಿಸಬೇಕೆಂದು ಕುಂದೆಯು ಪಾರಿವಾಳರ ಕೊರಳಲ್ಲಿದ್ದ ಕಾಗದವನ್ನು ಓದಿಕೊಂಡು ಅದಕ್ಕೆ ವ್ಯತಿರೇಕವಾಗಿ ಉತ್ತ ರವನ್ನು ಬರೆದು ಪಾರಿವಾಳಗ ಕೊರಳಿಗೆ ಕಟ್ಟಿ ಕಳುಹಿದುದು ಸರಿಯಷ್ಟೆ ? ಪಾರಿವಾಳವು ಅಂತರಿಕ್ಷದಲ್ಲಿ ಹಾರಿಬರುತ್ತಿರುವಾಗ, ಮಧ್ಯಮಾರ್ಗದಲ್ಲಿಯೇ ಬಿಡಾರವನ್ನು ಹೊಡಿಸಿ ವಿಶ್ರಾಂತಿಗಾಗಿ ಬಿಡಾರದ ಹೊರಗೆ ಕುಳಿತು ಹುಕ್ಕಾ ಸೇದುತ್ತೆ ಮೇಲೆಯೇ ನೋಡುತ್ತಿದ್ದ ಸಾದತ್ ಖಾನನು ಅಂತರಿಕ್ಷದಲ್ಲಿ ಹಾರಿಬರುತ್ತಿದ್ದ ಪಾರಿವಾಳವನ್ನು ಕಂಡನು ; ತತ್‌ಕ್ಷಣವೇ ತನ್ನ ಕೈಗುರಿ ಯನ್ನು ಪರೀಕ್ಷಿಸಲು ಬಳಿಯಲ್ಲಿಯೇ ಇದ್ದ ತುಪಾಕಿಯನ್ನು ತೆಗೆದುಕೊಂಡು ಪಾರಿವಾಳಕ್ಕೆ ಗುರಿಯಿಟ್ಟು ಹೊಡೆದು ಅದನ್ನು ಕೆಳಕ್ಕೆ ಕೆಡಹಿದನು, ಪಾರಿವಾಳವು ನೆಲದ ಮೇಲೆ ಬಿದ್ದೊಡನೆಯೇ ಅದರ ಕಂಠದಲ್ಲಿದ್ದ ಕಾಗದವನ್ನು ಕಂಡು, ಕುತೂಹಲಗೊಂಡು, ಅದನ್ನು ಆತುರದಿಂದ ಬಿಚ್ಚಿ ತೆಗೆದು ಒಬ್ಬ ಹಿಂದೂಭಟನ ವಶಕ್ಕೊಪ್ಪಿಸಿ ಓದಿಸಿದನು, ಅದರಲ್ಲಿ