ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ಕರ್ಣಾಟಕ ನಂದಿನಿ ಲೊಂದು ನಕ್ಷತ್ರಗಳು ಮಾಯವಾಗುತಲಿದ್ದು ವ, ರಾತ್ರಿಯೆಲ್ಲಾ ವಿಶ್ರಾಂ ತಿಯಿಲ್ಲದೆ ಕೆಲಸಮಾಡುವವರು ಆಯಾಸಪಡುವಂತೆ ಚಂದ್ರನು ಕಾಂತಿ ಹೀನನಾಗುತ್ತ ಕಣ್ಮರೆಯಾಗುತ್ತಿದ್ದನು. ಅಂಧಕಾರರಾಕ್ಷಸ ಸೈನ್ಯವೂ, ಲೋಕಬಾಂಧವನ ಆಗಮನವನ್ನು ಆತನ ಸಾರಥಿಯಾದ ವರುಣನಿಂದ ತಿಳಿದು ದಿಗಂತಗಳಿಗೆ ಓಡುತ್ತಿದ್ದುದರಿಂದ ಬೆ' ಕು ಕ್ರಮೇಣ ಹೆಚ್ಚಾ ಗುತ್ತಿದ್ದಿತು. ತಂಪಾದ ಪೂರ್ವ ದಿಕ್ಕಿನ ಗಾಳಿಯು ಮೆಲ್ಲನೆ ಬೀಸುತ್ತ ಗಾಢನಿದ್ರೆಯಲ್ಲಿರುವವರನ್ನು ಎಬ್ಬಿಸುತ್ತಿದ್ದಿತು. ಹಿಂದೂ ದೇವಾಲಯ ಗಳಲ್ಲಿ ಘಂಟಾನಾದವೂ ಪ್ರಾಬೋಧಿಕ ಪ್ರಾರ್ಥನೆಗಳೂ ಮಹಮ್ಮದೀ ಯರ ಮಸೀದೆಗಳಲ್ಲಿ ನಮಾಜುಧನಿಯೂ ಕೇಳಿಬರುತ್ತಿದ್ದುವು. ಇಂತಹ ಪ್ರಾತಃಕಾಲ ಸಮಯದಲ್ಲಿ ಗೋಲಕೊಂಡ ಪಟ್ಟಣಕ್ಕೆ ಮೈಲುದೂರದಲ್ಲಿದ್ದ ತೋಟದೊಳಗಿನ ಪುಷ್ಕರಣಿಯಲ್ಲಿ ಒಬ್ಬ ಬ್ರಾಹ್ಮ ಣನು “ ಜಯ ಶಂಕರ ! ಜಯ-ಮಹಾದೇವ !!” ಎಂದು ಈಶ್ವರನಾಮಸ್ಮ ರಣೆ ಮಾಡುತ್ತ ಸ್ನಾನಮಾಡುತ್ತಿದ್ದನು. ಸ್ವಚ್ಛವಾದ ಚಂದ್ರಕಾಂತಶಿಲೆ ಗಳಿಂದ ಕಟ್ಟಲ್ಪಟ್ಟ ಸೋಪಾನದ ಮೇಲೆ ಕುಳಿತು ಯಥೇಚ್ಛವಾಗಿ ಅಘ ಮರ್ಷಣಸ್ನಾನವನ್ನು ಮಾಡಿ ಮೇಲಕ್ಕೆ ಬಂದ ಕೂಡಲೆ ದಡದಲ್ಲಿ ಕುಳಿತು ಕೊಂಡಿದ್ದ ಆತನ ಶಿಷ್ಯನು ಗುರುವಿಗೆ ತನ್ನ ಬಳಿಯಲ್ಲಿದ್ದ ಮೂಟೆಯನ್ನು ಕೊಟ್ಟನು. ಆ ಬ್ರಾಹ್ಮಣನು ತನ್ನ ಮೈಯ್ಯನ್ನು ಒರಿಸಿಕೊಂಡು ಶುಭ ವಸ್ತ್ರವನ್ನು ಧರಿಸಿ, ತನ್ನ ಮುಖವನ್ನೂ ದೇಹವನ್ನೂ ಧನ್ಮ ದಿಂದ ಆತಂಕ ರಸಿ, ರುದ್ರಾಕ್ಷ ಮಾಲೆಯನ್ನು ಕಂಠದಲ್ಲಿ ಧರಿಸಿ, ಜರತಾರೀ ಶಾಲೋಂ ದನ್ನು ತಲೆಗೆ ಸುತ್ತಿಕೊಂಡನು. ಅಷ್ಟರಲ್ಲಿ ಆನ ಶಿಷ್ಯನು ಸ್ನಾನಮಾಡಿ ಭಸ್ಮ ಧಾರಣೆ ಮಾಡಿ ಗುರುವಿನ ಹಿಂದೆ ನಿಂತಿದ್ದನು. ಆಗ ಬ್ರಾಹ್ಮಣನು ಹಿಂದುಸ್ಥಾನಿ,ಾಷೆಯಲ್ಲಿ " ನಾವು ಸೂರ್ಯೋದಯಕ್ಕೆ ಸರಿಯಾಗಿ ಪಟ್ಟ ಣವನ್ನು ಸೇರಬೇಕು” ಎಂದು ಹೇಳಿದನು. ಕೂಡಲೆ ಶಿಷ್ಯನು ಗುರುವಿನ ಜನಸಾಮಗ್ರಿಗಳನ್ನು ಮೊದಲಿನಂತೆ ಮೂಟೆಕಟ್ಟ ಭಜಕ್ಕೆ ತಗಲಿಸಿ