ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬ mmmmmmmmmmmmmmmm ಕರ್ಣಾಟಕ ಗ್ರಂಥಮಾಲೆ ಯೋಗ್ಯತೆಗೆ ತಕ್ಕುದಾಗಿರಬೇಕು, ಇಲ್ಲದಿದ್ದರೆ ಆತ್ಮಗೌರವಕ್ಕೆ ಹಾನಿ ಬರುವುದು, ಮುನತೆಯೆಂಬ ವೃಕ್ಷಕ್ಕೆನಡತೆಯ ತಾಯಿಬೇರು. ತುಂಬ ಹೆಚ್ಚು ಬೆಲೆ ಬಾಳುವ ಅಥವಾ ಹೆಚ್ಚು ಬಣ್ಣವುಳ್ಳ ಉಡುಪುಗಳನ್ನು ಧರಿಸಿ ಎಲ್ಲರೂ ತಮ್ಮನ್ನೇ ನೋಡುವರೆಂದು ಭ್ರಮಿಸುವುದು ನಿಷಿದ್ಧ. ಮತ್ತು ಜಂಭ, ನಿಜಸ್ಥಿತಿಯ ಮುಂದೆ ಸಂಭವು ಎಂದಿಗೂ ಜಯಿಸಲು ರದು, ಹಗಲುಚಂದ್ರನಿಗೆ ಪ್ರಕಾಶವಿಲ್ಲದಿರುವುದೂ ಸೂಯ್ಯನಿಗೆ ಪ್ರಕಾಶ ವಿರುವುದೂ ಸಾಕಾದ ದೃಏಾಂತವಾಗಿದೆ. ಆದರೆ ನಿಜಸ್ಥಿತಿಯು ಮರೆಯಾ ದಾಗ ಸುಳ್ಳೇ ಮೋಹಕವಾಗಿ ತೋರುವುದು, ಆದುದರಿಂದಲೇ ಸ್ವಯಂ ಪ್ರಕಾಶಮಾನನಾದ ಸೂರನು ಮರೆಯಾದನಂತರ ಚಂದ್ರನಿಗೇ ಪಾಠಸ್ಯ. ನಾವು ಧರಿಸುವ ಬಟ್ಟೆಗಳು ಎಷ್ಟೇ ಕಡಿಮೆಯ ಬೆಲೆಯುಳ್ಳವಾದರೂ ಚಿಂತೆ ಯಿಲ್ಲ, ಆದರೆ ಕೊಳೆಯಿಲ್ಲದೆ ಶುಭ್ರವಾಗಿರಬೇಕಾದುದು ಮುಖ್ಯ. - ನಮ್ಮ ಚಾಳಿಗಳೂ ಕೆಲಸಗಳ ಕೊಳಕಿಲ್ಲದೆಯ ಒಪ್ಪವಾ ಗಿಯೂ ಇರಬೇಕು, ಬೀದಿಯಲ್ಲಿ ಸಿಳ್ಳು ಹಾಕುವುದು, ಸೈಕ್ಷೆಯಾಗಿ ಬಲು ಗಟ್ಟಿಯಾಗಿ ನಗುವುದು, ಜೂಜಾಡುವುದು, ಕುಸ್ತಿ ಇಂಥವುಗಳ ಘನತೆಯನ್ನು ಕೆಡಿಸುವುವು. ಆಹಾರಪಾನ ಮೊದಲಾದುವುಗಳಲ್ಲಿ ಮಿತಿ ವಿಾರಿ ಹೊಟ್ಟೆಬಾಕರಾಗಿದ್ದರೆ ಇತರರ ಹೇಳನೆಗೆ ಗುರಿಯಾಗಬೇಕಾಗುವುದ ಲ್ಲದೆ ದೇಹಾರೋಗ್ಯವೂ ಕೆಡುವುದು, ಗೌರವಶಾಲಿಗಳಾಗಿರಬೇಕಾದವರಲ್ಲಿ ಯಾವ ಕೆಟ್ಟಚಾಳಿಗಳೂ ಇರಕೂಡದು, ನಾಲಗೆಯನ್ನು ಹದ್ದಿನಲ್ಲಿಟ್ಟು ಕೊಂಡಿರಬೇಕು, ಅಸತ್ಯ, ಪರನಿಂದೆ, ಕರೆಯದ ಕಡೆಗೆ ಹೋಗುವುದು ಬೇಚ್ಚುಮಾತು, ಪುಂಡುವಾತು, ಅಥವಾ ಗ್ರಾಮ್ಯವಾದಮಾತು ಇವುಗಳಿಂದ ಇತರರೊಡನೆ ಸಲ್ಲಾಪಮಾಡುವುದು, ಕೆಟ್ಟ ಮಾತುಗಳಿಂದ ತನ್ನನ್ನೇ ಬೈದು ಕೊಳ್ಳುವುದು, ಹರ್ಷ ವಿವಾದಗಳಲ್ಲಿ ಮಿತಿಮೀರಿದ ಉದ್ರೇಕ ಇವುಗಳೆಲ್ಲು ಮನುಷ್ಯನ ನಡತೆಯನ್ನು ಕೆಡಿಸುವುವು, ಸ್ತ್ರೀಪುರುಷರು ಪರಸ್ಪರವಾಗಿ