ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಕರ್ಣಾಟಕ ಗ್ರಂಥಮಾಲೆ mam MwwwಭMwww C. ಆನಂದವೇನೋ ಅಪಾರವಾದುದು. ತಾಯ್ತಂದೆಗಳು ಯಾವಾಗಲೂ ನಮಗೆ ಒಳ್ಳೆಯದಾಗುವುದನ್ನೇ ಬಯಸುತ್ತಾರೆ. ಅವರಿಗಿಂತ ನನಗೆ ಇನ್ನು ಯಾರೂ ಹಿತಚಿಂತಕರಿಲ್ಲ, ಅವರ ಮಾತನ್ನು ಕೇಳುವುದರಿಂದ ನಮಗೆ ಶ್ರೇಯಸ್ಸುಂಟಾಗುವುದು. ಹೀಗೆ ನಮ್ಮ ಹಿತಕ್ಕೋಸ್ಕರ ಅವರ ಮಾತಿನಂತೆ ನಡೆದರೆ ನಮಗೆ ಪ್ರಯೋಜನವೂ ಅವರಿಗೆ ಸಂತೋಷವೂ ಆಗುವುದರಮೂಲಕ ಉಭಯರಿಗೂ ಅನುಕೂಲವುಂಟು, ಹುಟ್ಟುತ್ತಲೆ ತಾಯ್ತಂದೆಗಳನ್ನು ಕಳೆದುಕೊಂಡು ಅನಾಥರಾಗಿರುವವರ ಚಂಡನ್ನು ನೋಡುವುದರಿಂದ ಅವರಿಗಿಂತ ನಾವು ಇಷ್ಟು ಸುಖವಾಗಿರುವುದಕ್ಕೆ ನಮ್ಮ ತಾಯ್ತಂದೆಗಳ ಕಾರಣರೆಂಬುದು ಸ್ಪಷ್ಟವಾಗಿ ತೋರದೆ ಇರದು. ನಾವು ಅವರಿಗೆ ಅವಿಧೇಯರಾಗಿ ನಡೆದರೆ ಚಳಿಯಿಂದ ನಡುಗಿ ಸಾಯುತ್ತಿದ್ದಾಗ ತನ್ನನ್ನು ಬೆಂಕಿಯಬಳಿಗೆ ತಂದುಬಿಟ್ಟು ಕಾಪಾಡಿದಂಥ ಮನುಷ್ಯನನ್ನು ಕುಟುಕಿದ ಚೇಳಿನಂತೆ ಕೃತಘ್ನುರಾಗುವೆವು ನಿರ್ಬಂಧದಿಂದ ಶಠನೆಯಿಂದ ಅಥವಾ ಗೊಣಗಿಕೊಂಡು ಪೇಚಾಡುತ್ತ ವಿಧೇಯತೆಯನ್ನು ನಟಿಸುವುದ ಕ್ಕಿಂತ ಸಂತೋಷವಾಗಿಯ ಮನಃಪೂರಕವಾಗಿಯ ವಿಧೇಯರಾಗಿರು ವುದು ಉತ್ತಮ. ನನಗೆ ಅನ್ನ ಬಟ್ಟೆ ಅಥವಾ ಸಂಬಳವನ್ನು ಕೊಟ್ಟು ಕಾಪಾಡುವ ದಣಿಗಳಲ್ಲೂ ವಿಧೇಯರಾಗಿರಬೇಕು, ನಮಗೇನಾದರೂ ಆಪತ್ಕಾಲವೊ ದಗಿದರೆ ಅವರು ಮರುಗುವುದು ಮಾತ್ರವಲ್ಲದೆ ಎಷ್ಟೋ ಸಹಾಯವನ್ನು ಮಾಡುವರು, ಮತ್ತು ಒಳ್ಳೆಯ ಸೇವಕರನ್ನು ದಣಿಗಳು ತಮ್ಮ ಮನೆಯ ವರೆಂದೇ ಭಾವಿಸಿ ಬಹಳ ವಾತ್ಸಲ್ಯದಿಂದ ಕಾಪಾಡುವರು. ನನಗೇನಾ 'ದರೂ , ತೊಂದರೆಗಳು ಸಂಭವಿಸುವಂತಾದರೆ ತಕ್ಕ ಬುದ್ದಿವಾದಗಳಿಂದ ನನ್ನನ್ನು ತಿದ್ದುವರು. ಕೆಲಸಮಾಡುವುದನ್ನು ಚೆನ್ನಾಗಿ ಕಲಿಸುವರು. ಮತ್ತು ಸುಗುಣಗಳಿಗೆಲ್ಲಾ ತಾವು ಮೇಲ್ಪಯಾಗಿದ್ದು ನೃತ್ಯರ ಏಳಿಗೆಗೆ 6