ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ಶ4 ಧಿಯತಮಗೇ ಸಂಭವಿಸಿದ್ದರೆ ಹೇಗೋ ಅದಕ್ಕಿಂತಲೂ ಹೆಚ್ಚಾಗಿ ಸಂಕಟ ಪಡುವರು, ಪುತ್ರಶೋಕವನ್ನು ತಾಳಲಾರದೇ ಧಶರಥ ಮೊದಲಾದ ಎಷ್ಟೋ ಜನರು ಚಿತ್ರಣವನ್ನು ಕೂಡ ಕಳೆದುಕೊಂಡಿರುವರು. ಹೀಗೆ ಮಾತಾಪಿತ್ಸುಗ ೪ಗೆ ಮಕ್ಕಳ ವಿಷಯದಲ್ಲಿ ರುವ ಪ್ರೀತಿ ಮರುವನ್ನು ಮಕ್ಕಳು ಎಂಥ ಪ) ತ್ಯುಪಕಾರಗಳಿಂದ ತಾನೆ ತೀರಿಸುವುದಕ್ಕೆ ಸಾಧ್ಯವಾದೀತು! ಆದರೆ ಹೀಗೆಂದು ಏನೂನಾಡದೆ ಸುಮ್ಮನಿರಬಹುದೆ? ನನ್ನಿಂದ ಆಗುವಮಟ್ಟಿಗೂ ಭಕ್ತಿ ಶ್ರದ್ಧೆ ೪ಗಂದ ಸೇವೆಸತ್ಕಾರಗಳನ್ನು ಮಾಡುತ್ತ ವಿನಯವಿಧೇಯತೆಗಳಿಂದ ಕಾಣು ತಿರಬೇಕಲ್ಲದೆ ಮುಖ್ಯವಾಗಿ ಅವ ರನ್ನು ಮುಪ್ಪಿನಲ್ಲಿ ಚೆನ್ನಾಗಿ ಆದರಿಸ ಬೇಕು. , ಮತ್ತು ಅವರಿಂದ ನನಗೆ ಉಂಟಾಗಿರತಕ್ಕೆ ಉಪಕಾರಗಳನ್ನು ಸರ ದಾ ಸ್ಮೃತಿಪಥದಲ್ಲಿಟ್ಟು ಕೊಂಡಿರಬೇಕು. ಹೀಗೆಯೇ ವಿದ್ಯಾಗುರುಗಳು ವಿದ್ಯಾರ್ಥಿಗಳ ಕೃತಜ್ಞತೆಗೆ ಅರ್ಹರು. ಇವರು ಶಿಷ್ಯರಿಗೆ ಉತ್ತಮವಾದ ತಿಳವಳಿಕೆಯನ್ನುಂಟುಮಾಡುತ್ತ ಬುದ್ಧಿ ಶಕ್ತಿಗಳನ್ನು ಹೆಚ್ಚಿಸಿ ಅವರ ಅಜ್ಞಾನವನ್ನು ತೊಲಗಿಸಲು ವಿಶೇಷವಾಗಿ ಶ್ರಮಪಡುವರು, ಮತ್ತು ಅವರಿಗೆ ಮೇಲಾದ ಶಿಕ್ಷಣವನ್ನೂ ಕೊಟ್ಟು ಅವರ ನಡತೆಯನ್ನು ತಿದ್ದಿ ಕ್ರಮಪಡಿಸು : ಪು. ಹೀಗೆ ಇವರು ಮಾಡಿ ಕೊಟ್ಟ ಸಂಸ್ಕಾರವು ಶಿಷ್ಯನ ಜೀವಮಾನದಲ್ಲೆಲ್ಲಾ ಅವನಿಗೂ ಮತ್ತು ಅವನಿಂದ ಇತರರಿಗೂ ಫಲಕಾರಿಯಾಗುವದಲ್ಲದೆ ಅನಂತರವೂ ಅವನ ಆತ್ಮಕ್ಕ ಕೂಡ ಸದ್ಧತಿಯನ್ನುಂಟುಮಾಡಿಕೊಡುವುದು, ಹೀಗೆ ಇಹಪರ ಗಳೆರಡರಲ್ಲಿ ಯ ನನ್ನ ಶ್ರೇಯಸ್ಸಿಗೆ ಕಾರಣಭೂತರಾದ ಗುರುಗಳಲ್ಲಿ ಕೃತಜ್ಞರಾಗಿರಬೇಕಾದುದೇನತಿಶಯ ! ಇದರಂತೆಯೇ ಇತರ ಉಪಕಾರಿಗೆ ಳೆಲ್ಲರ ವಿಷಯದಲ್ಲಿಯ ಕೃತಜ್ಞತೆಯಿಂದ ನಡೆಯಬೇಕಾದುದು ಅತ್ಯಾ ವಶ್ಯಕ.