ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XV ವಾತ ಮಿಗೆ ಚಂಚಲನು ಯಕ್ಷನು ನೀತಿಬಾಹಿರನು | ಈತ ಧನಪತಿ ಲುಬ್ಬ ಕನು ತಾ ನೀತನುದ್ದತ ನಾತ್ರಿಯಂಬಕ ನೀತರೆಲೆ'ಕಿಗ್ಗೆ ಯಿಯರನಿದೇವರಿವರೆಂದು || (44 ಪ.) ಎಂಬ ಪದ್ಯಗಳು एष ब्रह्मातिवृद्धस्तपति दिनपतिश्चंचलो मातरिश्वा दिग्वासी नीलकंठस्त्रिदशपतिरसौ गर्वितः क्षीयतेब्जः ॥ इत्थं देव्या विचिंत्य भ्रमरकुलकलागीतशब्दप्रफुल्ला दत्ता माला मुरारेः सुरतरुकुसुमालंकृता पातु युष्मान् ॥ ಎಂಬ ಪ್ರಾಚೀನ ಶ್ಲೋಕದ ಛಾಯೆಯಾಗಿರುವುವು. ಇದೇ ರೀತಿಯಾಗಿ ಅಲ್ಲಲ್ಲಿರುವುದು, ಇವುಗಳನ್ನು ಪರ್ಯಾ ಲೋಚಿಸಲಾಗಿ ಈ ಕವಿಯು ಭಾವಾದ್ರಯದಲ್ಲಿಯೂ ವ್ಯಾಸಂಗಿಯೆಂದು ಬಹುದರ್ಶಿಯೆಂದು ಹೇಳಬೇಕು. ಈ ಕವಿಯು ಕರ್ಣಾಟಕವ್ಯಾಕರಣಾದಿಗಳನ್ನು ಅನುಸರಿಸದೆ ಗ್ರಂಥವನ್ನು ರಚಿಸಿರುವುದರಿಂದ ಈ ಕವಿಯು ಓದಿಕೊಂಡವನಲ್ಲ ವೆಂದು ಒಂದು ವೇಳೆ ಊಹಿಸಬಹುದು, ಆದರೆ ಸುಲಭ ಶೈಲಿಯಿಂದ ರಚಿಸಲುದ್ದೇಶಿಸುವ ಕವಿಗಳು ಈಪಟ್ಟದಿಗಳಲ್ಲಿ ಧಾರಾಳವಾಗಿ ಅಕ್ಷರ ಸಂಖ್ಯಾದಿ ನಿಯಮವಿಲ್ಲದೆ, ಮತ್ತು ಸಾಮಾನ್ಯರಿಗೆ ಸುಬೋಧವಲ್ಲದ ಹಳಗನ್ನಡಪದಗಳನ್ನು ಹೆಚ್ಚಾಗಿ ಉಪಯೋಗಿಸದೆ, ಬಳಕೆಯಲ್ಲಿ ರುವ ಕನ್ನಡಪದಗಳಿಂದೇ ಗ್ರಂಥವನ್ನು ರಚಿಸುವ ಪದ್ಧತಿಯನ್ನವಲಂ ಬಿಸಿ ಇರುವನೆಂದೂ, ಇಂತಹ ಗ್ರಂಥಗಳಿಗೆ ಶಬ್ದಮಣ್ಯದಿವ್ಯಾಕರಣ ವಿರೋಧವು ದೂಷಣವಲ್ಲವೆಂದೂ ಪೀಠಿಕಾಸಂಚಿಕೆಯ (ಕನ್ನಡರ್ಸೆಷ್ರ 3ನೆಯ ನಂಬರಿನ ) ಅವತರಣಿಕೆಯಲ್ಲಿ ವಿಶದವಾಗಿ ನಿರೂಪಿಸಲ್ಪಟ್ಟಿದೆ.