ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕೆ.] ಕರ್ಣಾಟಕ ಸಾಹಿತ್ಯ ಸಮ್ಮೇಳನ. [ಅಕ್ಟೋಬರ್ ೧೯೧೮, .... : --- ... ಸ್ಥಾಪಿತವಾಯಿತು. ಕಳೆದವರುಷ ಯುವರಾಜ ಮಹಾಶಯರು ಸೂಚಿಸಿದ ಮೇರೆಗೆ ಧಾರವಾಡಸ್ಟರಾದ ನಾವು ಈಸಾರಿ ಈ ಭಾರವನ್ನು ಹೊತ್ತು ತಮ್ಮೆಲ್ಲರನ್ನೂ ಇಲ್ಲಿಗೆ ಬರಮಾಡಿಕೊಂಡಿರುವೆವು. - ಸಹೋದರರೇ.-ಈ ವರುಷದ ಸಮ್ಮೇಲನದಲ್ಲಿ ಕರ್ಣಾಟಕಸಾಹಿತ್ಯಕ್ಕೆ ಆನುಷಂಗಿಕವಾದ ಕೆಲವು ಸಂಗತಿಗಳ ಬಗ್ಗೆ ವಿಮರ್ಶಿಸಲು ಕನ್ನಡಿಗರಿಗೆಲ್ಲ ಅನು ಕೂಲ ಮಾಡಿಕೊಡಬೇಕೆಂದು, ಯೋಚಿಸಿ, ನಾವು ಪ್ರಯತ್ನ ಪಟ್ಟೆವು. ಕರ್ಣಾಟ ಕದ ಪ್ರಾಚೀನ ಇತಿಹಾಸದ ಸಾಹಿತ್ಯ ಪ್ರದರ್ಶನವನ್ನು ಮಾಡಬೇಕೆಂಬ ನಮ್ಮ ಕೋರಿಕೆಯು ನಾಲ್ಕಾರು ತಿಂಗಳುಗಳಿಂದ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆದರೆ ಪ್ರಾಚೀನಕಾಲದ ಕರ್ಣಾಟಕ ವೈಭವದ ಹೆಗ್ಗುರುತುಗಳಾದರೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಚಿತ್ರಿಸಿರುವುದು ನಮ್ಮೆಲ್ಲರ ಏಳಿಗೆಗೆ ಅತ್ಯವಶ್ಯವಿರುವುದರಿಂದ ಸದ್ಯಕ್ಕೆ ಅಂಧಕಾರದಲ್ಲಿ ಅಡಗಿರುವ ನಮ್ಮ ಪೂರ್ವದ ಘನತೆಯ ಕುರುಹುಗಳನ್ನು ಪ್ರಕಾಶಪಡಿಸಲು ಮ್ಯಾಜಿಕ್ ಲ್ಯಾಂಟರ್ನದ ಚಿತ್ರಪಟಗಳಂಥ ಉಪಯುಕ್ತ ಸಾಧನವು ಬೇರೆ ಯಾವುದೂ ಕಾಣದ್ದರಿಂದ ಆ ಮಾರ್ಗದಿಂದ ಪ್ರಯತ್ನಿಸಿರುವೆವು. ಕನ್ನಡ ಸಾಹಿತ್ಯದ ಅಂಗಗಳೆಂದು ಸಕೃದರ್ಶನಕ್ಕೆ ಎಂದೂ ಕಾಣದ ನಾಟಕ, ಕೀರ್ತನ ಮೊದಲಾದುವುಗಳ ಮಹತ್ವವು ವಿದ್ವಜ್ಜನರ ಲಕ್ಷ್ಯಕ್ಕೆ ಬಂದು, ಅವುಗಳ ಬೇರೆಬೇರೆ ಸಮ್ಮೇಲನಗಳಾಗುವವರೆಗೆ ಅವುಗಳ ಬಗ್ಗೆ ಸಾಹಿತ್ಯ ಸಮ್ಮೇಲನದವರೇ ವಿಚಾರಿಸಿ, ದಾರಿ ತೋರಿಸುವುದು ಅವಶ್ಯವಾಗಿ ತೋರಿದ್ದರಿಂದ, ಪ್ರಸಿದ್ಧವಾದ ನಾಟಕ ಕರ್ತ ರಿಗೂ, ನಾಟ್ಯಕಲಾಭಿಜ್ಞರಿಗೂ, ನಾಟಕ ಸಂಘದವರಿಗೂ, ಕೀರ್ತನಕಾರರಿಗೂ ಆ ಮಂತ್ರಣ ಕೊಟ್ಟು ಕೆಲವರನ್ನು ಕರೆಯಿಸಿಕೊಂಡು ಕನ್ನಡ ನಾಟಕ ಕೀರ್ತನಗಳ ಸದ್ಯಸ್ಥಿತಿಯನ್ನು ತಮ್ಮೆಲ್ಲರ ಮುಂದೆ ಇಟ್ಟು ಅವುಗಳ ಸುಧಾರಣೆಯ ಬಗ್ಗೆ ಕೈಕೊಳ್ಳ ಬಹುದಾದ ಉಪಾಯಗಳನ್ನು ಕುರಿತು ಸರ್ವಸಮ್ಮತವಾದ ಅಭಿಪ್ರಾಯವನ್ನು ಪಡೆಯಬೇಕೆಂದು ಪ್ರಯತ್ನ ಮಾಡಿರುವೆವು, ಈ ಕೆಲಸಗಳಲ್ಲಿ ತಮ್ಮೆಲ್ಲರ ಸಹಾಯವ ನಮಗೆ ದೊರೆಯುವುದೆಂದೂ ಕರ್ಣಾಟಕ ಸಾಹಿತ್ಯದ ಸರ್ವತೋಮುಖವಾದ ಪ್ರಗತಿಗೆ ಆರಂಭವಾಗುವುದೆಂದೂ ನಾವು ದೃಢವಾಗಿ ನಂಬಿದ್ದೇವೆ. ಕನ್ನಡಿಗರೇ..... ಇದು ನವಯುಗವು, ಈಗ ಜನರ ಆಚಾರವಿಚಾರಗಳು ಭರ ದಿಂದ ಬದಲಾವಣೆ ಹೊಂದುತ್ತಿರುವುವು. ಜ್ಞಾನಾಭಿವೃದ್ಧಿಯು ಈಗ ಬಹುಮುಖ ವಾಗಿ) ಬಲುಒತ್ತರದಿಂದ ಮುಂದುವರಿಯುತ್ತಿರುವುದು, ಆದರೆ ಪ್ರತಿಯೊಂದು ಬಗೆಯ ಜ್ಞಾನಕ್ಕೂ, ಚೈತನ್ಯಕ್ಕೂ ಭಾಷೆಯೇ ಮೂಲಾಧಾರವಾದುದರಿಂದ, ಹೊಸ ಪರಿ ಸ್ಥಿತಿಗೆ ಅನುರೂಪವಾದ ಹೊಸ ಹೊಸ ವಿಚಾರ ಸರಣಿಗಳೂ, ಶಬ್ದಗಳೂ ಪ್ರಚಾರ ದಲ್ಲಿ ಬರುತ್ತಲಿರುವುವು. ಹಾಗೂ ನಮ್ಮ ಭಾಷೆಯು ವಿಲಕ್ಷಣವಾದ ಕ್ರಾಂತಿಯ ಕಾಲಚಕ್ರದಲ್ಲಿ ಸಿಲುಕಿರುವುದು, ಇವೆಲ್ಲ ಸಂಗತಿಗಳ ಪರಿಣಾಮವು ಭಾಷೆಯ ಮೇಲೆ ಆಗದೆ ಹೇಗೆ ಉಳಿಯುವುದು ? ಜನಾಂಗಗಳು ಹೊಂದುತ್ತಿರುವ ಪ್ರಗತಿಯು ಅವರವರ ಭಾಷೆಯಲ್ಲಿ ಪ್ರತಿರೂಪವಾಗಿ ತೋರದುಳಿಯದು, ಹೊಸ ಧೈಯ, ಹೊಸ ವಿಚಾರ, ಹೊಸ ಹೊಸ ಶೋಧ, ಹೊಸ ಹೊಸ ಆಸೆ, ಹೊಸ ಹೊಸ ಆಕಾಂಕ್ಷೆ, ಹೊಸ ರೀತಿ ಈ ಮೇರೆಗೆ ಯಾವ ದೃಷ್ಟಿಯಿಂದ ನೋಡಿದರೂ ನವೀನತೆಯೇ ೧s