ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕೆ:} | ಸಿ೦ಗಳ ಸ೦ವತ್ಸರದ ವ ರಟ. [ಅಕ್ಟೋಬರ್ ೧೯೨೮. ಅನಂತರ ಶ್ರೀಯುತ ಆರ್. ಎಚ್. ದೇಶಪಾಂಡೆ, ಎಂ, ಎ. ಯವರು, ಶ್ರೀಯುತ ಆರ್. ನರಸಿಂಹಾಚಾರರು ಕರ್ಣಾಟಕ ಭಾಷೆಗೆ ಮಾಡಿರುವ ಉಪಕಾರಗಳನ್ನು ವರ್ಣಿಸಿ, ಶ್ರೀಯುತ ಆಚಾರರು ಸಮ್ಮೇಳನದ ಅಗ್ರಾಸನ ವನ್ನು ವಹಿಸಲು, ಎಷ್ಟು ಸಮರ್ಥರೆಂಬುದನ್ನು ತೋರ್ಪಡಿಸಿ ಅಗ್ರಾಸನವನ್ನು ವಹಿಸಲು, ಸಾಮಾಜಿಕರ ಸಮ್ಮತಿಯನ್ನು ಕೊಡಲು ಸೂಚಿಸಿದರು. ಇವರ ಸೂಚನೆಯನ್ನು ಮ! ಆರ್. ರಘುನಾಥರಾಯರು ಶ್ರೀಯುತ ಆಚಾರ್ಯರಿಗೆ ಕರ್ಣಾಟಕ ಭಾಷೆಯಲ್ಲಿರುವ ಜ್ಞಾನವನ್ನೂ, ಅದಕ್ಕಾಗಿ ಅವರು ಪಟ್ಟ ಶ್ರಮವನ್ನೂ ವರ್ಣಿಸುವುದರ ಮೂಲಕ ಅನುಮೋದಿಸಲು, ಶ್ರೀ ಕೃಷ್ಣ ಸೂಕ್ತಿ ಸಂಪಾದಕ ಶ್ರೀಯುತ ರ್ಎ, ರಾಜಗೋಪಾಲ ಕೃಷ್ಣರಾಯರೂ, ಮದಕೆರಿಯ ಮ। ಸಿ, ವೆಂಕಪ್ಪಯ್ಯ ನವರೂ ಪುಷ್ಟಿಕರಿಸಿದರು, ಸಾಮಾಜಿಕರೆಲ್ಲರೂ ಕರತಾಡನದಿಂದ ಒಪ್ಪಲು, ಶ್ರೀಯುತ ಆಚಾರರು ಅಗ್ರಾಸನವನ್ನು ಸ್ವೀಕರಿಸಿದರು. ಸ್ವಾಗತಮಂಡಲದ ಕಾರ್ಯದರ್ಶಿಗಳು, ಸಮ್ಮೇಳನದ ಅಭ್ಯುದಯವನ್ನು ಬಯಸಿ, ಶ್ರೀಶ್ರೀ ಕರವೀರಮಠಾಧಿಸತಿಗಳೂ, ಮೈಸೂರು ಶ್ರೀಮದ್ ಯುವರಾಜ ರವರೂ, ಮತ್ತು ಶ್ರೀಯುತ ಸಿ. ಆರ್. ರೆಡ್ಡಿಯವರೇ ಮೊದಲಾದ ದೊಡ್ಡ ಮನುಷ್ಯರು ಕಳುಹಿದ ಸಂದೇಶಗಳನ್ನು ಓದಿ, ಸಭಾಕಾರ್ಯವನ್ನು ಆರಂಭಿಸಲು, ಸಾಮಾಜಿಕರ ಅನುಮತಿಯನ್ನು ಪ್ರಾರ್ಥಿಸಿದರು. ಅನಂತರ ಶ್ರೀಯುತ ಆರ್. ರಘುನಾಥರಾಯರು ೧೯೧೬ ನೆಯ ಸಂವತ್ಸರದ ಕರ್ಣಾಟಕ ಸಾಹಿತ್ಯ ಸಮ್ಮೇಳನದ ವರದಿಯನ್ನು ಕೆಳಗೆ ಕಂಡಂತೆ ಓದಿದರು. .. . . Sಂಗಳಸಂವತ್ಸರದ ವರ (೧೮೧೭-೧೮) ಕಳೆದವರ್ಷದಲ್ಲಿ “ ಈ ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತು ೧೯೧೫ ನೆಯ ಇಸವಿ ಮೇ ತಿಂಗಳಲ್ಲಿ ಹುಟ್ಟಿದುದರಿಂದ ಇನ್ನೂ ಶೈಶವಾವಸ್ಥೆಯಲ್ಲಿಯೇ ಇರುತ್ತದೆ; ಆದರೂ ಈ ದ್ವಿತೀಯ ವರ್ಷದಲ್ಲಿ ನಡೆದಿರುವ ಕೆಲಸದ ಮೊತ್ತವನ್ನೂ ರೀತಿಯನ್ನೂ ಗುಣವನ್ನೂ ಪರಿಶೀಲಿಸುವಲ್ಲಿ ಧೈರ್ಯಸೈರ್ಯಾರೋಗ್ಯಾದಿ ಗುಣಗಳಿಂದ ಶೋಭಿ ಸುವ ಶಿಶುವಂತೆ ನಮ್ಮ ಪರಿಷತ್ತು ಇರುವುದಕ್ಕಾಗಿ ಸಂತೋಷಪಡಬೇಕಾಗಿದೆ” ಎಂದು ೧೪