ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯಕ್ತಿ ಸಾಪುಷ್ಯ. ಮಹಮೂದ್ ಗವಾನನ ಚರಿತ್ರೆ. | ಕರ್ಣಾಟಕ ಸಾಹಿತ್ಯ ಗೋವಸೀಮೆ ತುರುಕರ ವಶವಾಯಿತೆಂಮ ಕೇ ಬಹಮನಿದೊರೆಯಾದ ಮೊಹಮ್ಮದಷಹನು ಅತ್ಯಂತ ಸಂತೋಷಭರಿತನಾಗಿ ಗವಾನನ ಮನೆಗೆ ಬಂದು ಅವನಿಗೆ ಅನೇಕ ಬಿರುದುಗಳನ್ನು ಕೊಟ್ಟು ಅಲ್ಲಿಯೇ ಕೆಲವ್ರದಿವಸ ವಾಸವಾಗಿರುತಾ ಆ ನಂತಿಯನ್ನು “ಅಣ್ಣ ಅಣ್ಣ,” ಎಂದು ಕರೆಯುತಾ ವಿಶೇಷವಾದ ಅಭಿಮಾನ ವನ್ನು ತೋರಿಸಿದನು. ಈ ರೀತಿಯಲ್ಲಿ ಅತ್ಯಂತ ಆಪ್ತರಾದವರನ್ನು ದೊರೆತನಮಾಡ ತಕ್ಕವರೂ ಮತ್ತು ಇತರರೂ “ಅಣ್ಣ, ಭಾವ, ಎಂದು ನಾವೆಯಿಂದ ಕರೆಯುವ ವಾಡಿಕೆಯು ಮುಸಲ್ಮಾನರಲ್ಲಿಯೂ ನಮ್ಮ ಜನರಲ್ಲಿಯೂ ಹೆಚ್ಚಾಗಿತ್ತು. ಶ್ರೀರಂಗ ಪಟ್ಟಣದ ಹೈದರಲ್ಲಿಗೆ ಪರಮಾಪ್ತನಾಗಿದ್ದ ದಿರ್ವಾ ಪೂರ್ಣಯ್ಯನನ್ನು ಹೈದರಲ್ಲಿಯ ಮಗನಾದ ಟೀಪುಸುಲ್ತಾನನು ಕೇವಲ ಸಲಿಗೆಯಾಗಿ ಚಿಕ್ಕಪ್ಪ ಎಂದು ಕರೆಯು ತಿದ್ದನು. ಈ ದಿವಾನಪೂರ್ಣಯ್ಯನ ಕೂಡ ತನಗೆ ಆಪ್ತರೆನಿಸಿಕೊಂಡಿದ್ದ ಫೌಜು ವಾರ ನಲ್ಲಪ್ಪನನ್ನೂ ಮತ್ತು ಅವರ ಮನೆಯ ಜನರನ್ನೂ ನಾವೆಯಿಂದ ಅಣ್ಣೆಯ್ಯ, ತಮ್ಮಯ್ಯ ' ಭಾವೈ ಯ, ಮಾವ, ಎಂದು ಕರೆಯುತ್ತಿದ್ದರೆಂದು ತಿಳಿದುಬಂದಿದೆ. ದೊರೆಗೆ ಗವಾನನಲ್ಲಿ ಇದ್ದ ಅಭಿಮಾನದ ರಾಖೆಯು ಗವಾನನ ಗುಲಾಮನಾಗಿದ್ದ ಖುಷ್‌ಖದಂ ಎಂಬುವನಿಗೂ ವ್ಯಾಪಿಸಿತು. ಈ ಗುಲಾಮನಿಗೆ ದೊರೆಯು ಒ೦ದು ಜಹಗೀರಿಯನ್ನು ಕೊಟ್ಟನು. ಹೀಗಿರುವಲ್ಲಿ ವಿಜಯನಗರದ ದೊರೆಯು ಗೋವವನ್ನು ತುರುಕರಿಂದ ಕಿತ್ತು ಕೊಳ್ಳುವುದಕ್ಕೆ ಇತರ ಮೊರೆಗಳನ್ನು ಎತ್ತ ಕಟ್ಟಿ ದನು. ಆಗ ಬೆಳಗಾವಿಗೆ ಮುತ್ತಿಗೆ ಹಾಕಲು ಗವಾನನು ಏರ್ಪಾಡುಮಾಡಿದನು. ತುರುಕರು ಬೆಳ ಗಾವ್‌ ಕೋಟೆಗೆ ಸುರಂಗವನ್ನು ಹಾಕಿ ಕೋಟೆಗೋಡೆಯನ್ನು ಕೆಡವಿದರು. ಸುರಂಗ ಹಾಕುವುದನ್ನು ಈ ದೇಶದವರು ಅರಿಯರು ಎಂತಲೂ ಮದ್ದನ್ನು ಈ ದೇಶಕ್ಕೆ ಮೊದಲು ತಾವೇ ತಂದವರು ಎಂತಲೂ ಹೇಳಿಕೊಳ್ಳುವ ಇಂಗ್ಲಿಷರು ಆಗ ಈ ದೇಶಕ್ಕೆ ಬಂದೇ ಇರಲಿಲ್ಲ; ಮತ್ತು ಮದು ಮಾಡುವ ಕ್ರಮವನ್ನು ಇವರ ದೇಶೀಯರು ತಿಳಿದೂ ಇರಲಿಲ್ಲ. ಇದು ನಡೆಯುತ್ತಾ ಇರುವಾಗ ವಿಜಯನಗರದಲ್ಲಿ ಪೂರೈದ ವಂಶದ ಅರಸರು ಹೋಗಿ ಬೇರೇ ಹೊಸದೊರೆಗಳು ಪದವಿಗೆ ಬಂದರು. ಆಗ ವಿಜಯನಗರಕ್ಕೆ ಬಹಮನಿ ಯವರು ಮುತ್ತಿಗೆಹಾಕಿದರು. ದಾರಿಯಲ್ಲಿ ಒಂದು ಹಾಳುಕೋಟಿ ಸಿಕ್ಕಿತು. ಗವಾನನು ಆ ಕೋಟೆಯನ್ನು ಸರಿಮಾಡಿಸಿ ಜೀರ್ಣೋದ್ಧಾರಮಾಡಿ ದೊರೆಯ ಅಪ್ಪಣೇಪ್ರಕಾರ ಅಲ್ಲಿ ಒಂದು ಅರಮನೆಯನ್ನು ಕಟ್ಟಿಸಿದನು. ಗವಾನನ ಸಾಮರ್ಥ್ಯ ನನ್ನು ಕಂಡು ಮೊಹಮ್ಮದಷಹನು ಬಹಳ ಶ್ಲಾಘನೆಮಾಡಿ ತನ್ನ ಉಡುಪನ್ನು ಗವಾ ನನಿಗೆ ಕೊಟ್ಟು ಅವನ ಉಡುಪನ್ನು ತಾನು ತಾಕಿಕೊಂಡನು. ಹೀಗೆ ದೊಡ್ಡವರ ಬಟ್ಟೆಯನ್ನು ಸಾಧಾರಣರು ಹಾಕಿಕೊಳ್ಳುವುದರಿಂದ ಸಾಧಾರಣ ಜನರಿಗೇನೋ ಗೌರವಹೆಚ್ಚು. ಈ ಪದ್ದತಿ ನಮ್ಮಲ್ಲಿಯೂ ಇದೆ. ಮಠಪತಿಗಳ ಶೇಷವಸ್ತ್ರವನ್ನು ಸಾಧಾರಣ ಶಿಷ್ಯರಿಗೆ ಧರಿಸುವುದಕ್ಕೆ ಕೊಡತಕ್ಕದ್ದು ಅದನ್ನು ಅವರು ಧರಿಸತಕ್ಕದ್ದು ಸಹ ನಮ್ಮಲ್ಲಿ ವಾಡಿಕೆಯಾಗಿದೆ. ಆದರೆ ಅಂಥಾ ಸಾಧಾರಣರ ಬಟ್ಟೆಯನ್ನು ಪದವಿಯಲ್ಲಿರತಕ್ಕವರು ಪ್ರೇಮಸೂಚಕವಾಗಿ ಧರಿಸತಕ್ಕದ್ದೇನೋ ಮುಸಲ್ಮಾನರಲ್ಲಿ