ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯಕ್ತಿ ಸh ಪುಷ್ಯ, ಕನ್ನಡ ಶಬ್ದದ ವ್ಯುತ್ಪತ್ತಿ. | ಕಣಾಟಕಸಾಹಿತ್ಯ ಹೇಳಿದುದ ಹೇಳಿದರೆ ಕಥೆಯ ರಂಜನವೆಲ್ಲಿ? ಆನಸುಖ ವೃಷ್ಟಿಯಲಿ ಬುದ್ದು ಮದಪರಿಯಲ್ಲ? ಭಾವನೆಯ ಹಾರಗೊಡು, ವಿರತಿಯಲಿಸುಖವಿಲ್ಲ. ಹ, ನಾರಾಯಣರಾವ್. .... .. ಕನ್ನಡ ಶಬ್ದದ ವ್ಯುತ್ಪತ್ತಿ. ಪ್ರೊಫೆಸರ್ ಆ‌, ತಾತಾಚಾರ್ಯ, ಎಂ, ಎ., ಎಲ್‌, ಟಿ-ಅವರಿಂದ, . ಕನ್ನಡ ಕರ್ನಾಡು (← ಕರ್ + ನಾಡು) ಕರಿಯ ಮಣ್ಣುಳ್ಳ ದೇಶವೆಂಬ ಅರ್ಥದ ಕರ್ನ್ನಾಡು ಎಂಬ ಪದದಿಂದ ಕನ್ನಡ ಎಂಬ ಹೆಸರು ಬಂದಿದೆಯೆಂದು ಕಿತ್ತಲ್, ಗುಂಡರ್ಟ, ಕಾಲ್ಪ ವೆಲ್ ಮೊದ ಲಾದ ಯೂರೋಪಿಯನ್ ಪಂಡಿತರು ಹೇಳಿರುವರು. ಕನ್ನಡಿ ಕನ್ನಡು ಎಂದು ರೂಪಾಂತರಗಳೂ ಕೆಲವೆಡೆಗಳಲ್ಲಿ ಕಾಣಬರು ವುವ, 'ಈ ಮೂರು ರೂಪಗಳಲ್ಲಿಯೂ ರೇಫೆ ಕಾಣಿಸುವುದಿಲ್ಲ. ಈ ರೇಫೆಯ ಲೋಪಕ್ಕೆ ಕರ್ನೆಲ್‌ ಎಂಬುದರಿಂದ ಕನ್ನೆಯೀಲ್ ಎಂದಾದಂತೆ ದೃಷ್ಟಾಂತ ವನ್ನು ಕಿತ್ತಲರವರು ನಿಘಂಟುವಿನಲ್ಲಿ ಹೇಳಿರುವರು. 'ಕರ್ನ್ನೆಯ್ಲಿ ಲ್ ಕನ್ನೆ ಯ್ಲಿ ಲ್ ಎಂಬ ರೂಪಗಳೆರಡನ್ನೂ ಕನ್ನಡ ಕಾವ್ಯಗಳಲ್ಲಿ ಕಾಣಬಹುದಾದರೂ ಕರ್ನ್ನೆಯ್ಲಿ ಲ್ ಎಂಬ ಪ್ರಾಚೀನರೂಪನೇ ಪುರಾತನ ಕವಿಗಳ ಪ್ರಯೋಗವೆಂದು ಹೇಳಬಹುದು. ಇದರಂತೆ ಕನ್ನFಡ ಎಂಬ ರೂಪವನ್ನಾಗಲಿ ಕರ್ನಾಡಂಬ ರೂಪವನ್ನಾಗಲಿ ನಮ್ಮ ದೇಶಭಾಷೆಯೆಂಬ ಅರ್ಥದಲ್ಲಿ ಪ್ರಯೋಗಿಸಿರುವಂತೆ ತೋರ ಲಿಲ್ಲ. ಅಂತಹ ಪ್ರಯೋಗವನ್ನು ಹುಡುಕಿ ಸಾಕಾಯ್ತು, ವಾಸ್ತವವಾಗಿ ಕನ್ನಡ ದಲ್ಲಿ ಕಪ್ಪು (ಕರ್ಪು) ಇಲ್ಲದುದರಿಂದ ಇಂತಹ ವ್ಯುತ್ಪತ್ತಿಯನ್ನು ಬಿಟ್ಟು ಮತ್ತೊಂದು ವ್ಯುತ್ಪತ್ತಿಯನ್ನು ವಿಚಾರಿಸಿ ನೋಡುವ.