ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಮಾನಗಳನ್ನು ಪದೇಪದೇ ಬೆರೆಯುತ್ತಾನೆಯೋ ? ಇದಕ್ಕೆಲ್ಲಾ ಉದಾಹರಣೆ ಯೊಡನೆ ಅಭಿಪ್ರಾಯವನ್ನು ಬರೆಯಬೇಕು. ೭. ಈ ಗ್ರಂಥದಲ್ಲಿರತಕ್ಕ ನಾಯಕನಾಯಿಕಾದಿಪಾತ್ರಗಳ ಉದಾಹರಣ ರೂಪವಾಗಿ ಗುಣದೋಷಗಳನ್ನು ತೋರಿಸುತ್ತಾ ಆಯಾ ಪಾತ್ರಾನುಗುಣವಾದಾ ತಾತ್ಸರ್ಯಗಳು ನಾಕ್ಯಗಳು ತಕ್ಕ ಹಾಗೆ ಇವೆಯೇ ? ಇಲ್ಲವೇ ಎಂಬುದನ್ನು ಉದ ಹರಿಸಿ ತೋರಿಸುತ್ತ ಬರಬೇಕು. ೮. ಯಾವುದಾದರೂ ದೋಷಗಳಿದ್ದರೆ ಅವುಗಳನ್ನು ಹೋಗಲಾಡಿಸುವುದಕ್ಕೆ ಯಾವ ಪ್ರತೀಕಾರವನ್ನು ಸೂಚಿಸುತ್ತೀರೋ ಅದನ್ನು ಬರೆಯುತ್ತಾ ಬರಬೇಕು, ೯ ಈ ಗ್ರಂಥದಲ್ಲಿ ಸಂಬಂಧವಿಲ್ಲದ ಕವಲೇನಾದರೂ ಹೋಗಿದ್ದರೆ ತೋರಿಸ ಬೇಕು, ಅಥವಾ ಇರುವುದನ್ನು ಸಾಧಿಸಬೇಕು. - ೧೦.' ಈ ಗ್ರಂಥದ ಉಪಕ್ರಮವೂ ಉಪಸಂಹಾರವೂ ಮತ್ತು ಮಧ್ಯೆ ಬರುವ ಸಂಗತಿಗಳೂ ಒಂದೇ ಸಮನಾಗಿದೆಯೇ ? ಭಿನ್ನಿಸಿದೆಯೇ? ಎಂಬುದನ್ನು ಉದಾ ಹರಣ ಮೂಲಕ ತೋರಿಸಬೇಕು. ೧೧, ಈ ಕಪಿಯು ಮೇಲೆ ಹೇಳಿದ ಸಂಗತಿಗಳಲ್ಲಿ ಇತರ ಕವಿಗಳ ಗ್ರಂಥ ಗಳಿ೦ದ ಅದೇ ಅರ್ಥವನ್ನು ಕೊಡುವ ಸದ್ಯಗಳನ್ನು ಅಥವಾ ಪ್ರಯೋಗಗಳನ್ನು ತೋರಿಸುತ್ತಾ ಈ ಕಪಿಗೂ ಇತರ ಕವಿಗಳಿಗೂ ಹೋಲಿಸುತ್ತಾ ಬರಬೇಕು. ೧೨. ಈ ಕವಿಯು ತನ್ನ ಕಾವ್ಯದಲ್ಲಿ ಇತರ ಯಾವುದಾದರೂ ಗ್ರಂಥಗಳಿ೦ದ ಏಷಯಗಳನ್ನು ಸಂಗ್ರಹಮಾಡಿ ಬರೆದಿದಾನೆಯೆ? ಎಂಬ ಸಂಗತಿಗಳನ್ನು ಸೂಚಿಸ ಬೇಕು. ೧೩. ಕರ್ನಾಟಕಕಾವ್ಯ ಕಲಾನಿಧಿಮುದ್ರಣಕ್ಕೂ ಮತ್ತು ಪುಸ್ತಕ ವ್ಯಾಪಾರಿ ಗಳಲ್ಲಿ ದೊರೆಯುವ ಮುದ್ರಣದ ಪ್ರತಿಗಳಿಗೂ ಯಿರುವ ವ್ಯತ್ಯಾಸಕ್ಕೆ ಕಾರಣ ವೇನೆಂಬುದನ್ನು ತಿಳಿಸಬೇಕು. ಲೇಖಕರು ಗುಣದೋಷಗಳನ್ನು ನಿಷ್ಪಕ್ಷಪಾತವಾಗಿ ತೋರಿಸದೆ ಇರಲಾರ ರೆಂದು ನಂಬಿದೆ. ಮಾರ್ಚಿ ಆಖೈರುವರೆಗೆ ಕೊಟ್ಟಿದ್ದ ಕಾಲವನ್ನು ರ್ಊ ಆಜ್ಞೆರುವರೆಗೆ ಹೆಚ್ಚು ಮಾಡಿದೆ. ( ಕರ್ಣಾಟಕ ಸಾಹಿತ್ಯ ಪರಿಷತ್ತು ಬೆಂಗಳೂರು | N. S, IPuttanna, ೧೬-೬-೧೯೧೯. ಕಾರ್ಯದರ್ಶಿ, >