ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕ.: ಕನ್ನಡ ಕವಿತೆಯ ಭವಿತವ್ಯ, 1 -ಪ್ರಿಲ್-ಜೂಲೈ ೧೯ ೧೮ ೧೯೮ ಧ್ಯಾನಸರನೇತ್ರಗಳಲಾತ್ಮವಡಗಿರುವಂತೆ ; ತಾನೆನುವ ಬೇಧವಿಲ್ಲದ ಶಿಲಾಕೃತಿಯಂತೆ || ತಿರೆಯಲವತರಿಸಿ ತಣ್ಣಗೆ ನೋಡಿ ನಡೆದು ಬಾ | ಬರುತ ಜೊತೆಯಲಿ ಶಾಂತಿವಿಶ್ರಾಂತಿಗಳನು ತಾ || ಜಸದ ತುಷ್ಟಯನುಂಬ ಕೃತತನುವಿನುಪವಾಸ ! ಉಪವನಗಳಲಿ ತಿರುಗಿ ಸುಖಿಸುವ ನಿರಾಯಾಸ ! ಏ3 ವೀಯ ಲೋಕದಲಿ ಚರಿಸುವ ಧ್ಯಾನ | ಊರಿನಲಿ ಧರ್ಮವರ್ಧಕ ಭಿಕ್ಷುಗಳ ಗಾನ || ದುಡಿದು ಹಗಲೆಲ್ಲ ಬಯ್ಕೆ ನಲಿ ಬಡವರು ಸೋತು | ಗುಡಿಸಲನು ಸೇರಿ ಮಕ್ಕಳನಾಡಿಸುವ ಮಾತು ! ಕೆರೆಯ ತಡಿಯಲಿ ದೇವಕುಲವ ಘಂಜಾಗ್ರಸಿತ | ಇರುಳಿನಲಿ ಕೋಗಿಲೆಯ ವಿಲಸನದ ಮಧುರರುತ !! ಚಿಂತನೆಗೆ ವಿಹಿತವಿದು ನಿ:ಶಬ್ದ ರಜನಿಯಲಿ | ಇ೦ತಿರುವ ಸಹಕಾರಿಗಳು ನಿನಗೆ ಜೊತೆಯಿರಲಿ : ವೋಮದ ಅರಣ್ಯದಲ್ಲಿ ದಾರಿಮರೆತವನಂತೆ ! ರೋಮಪಟದಿಂದ ತಲೆಬಗ್ಗಿಸಿಣಿಕುವನಂತೆ ! ಮೋಡಗಳ ಹಿಂದೆಸೆವ ನಡುಸಿರು... ಚಂದಿರನ | ನೋಡುತ್ತ ನುಣ್ಣ ಯಲಿನಲಿ ಮುಂದಪರ್ಯಟನ ! ಉಡುಗತಿಯನಟ್ಟದಿ೦ದೀಕ್ಷಿಸುತ ಜಾಗರಣ ! ಸೊಡರನುರಿಸುತ ಪತನದೊಳಗಾತ್ಮವಿಸ್ಮರಣ ! ಪ್ರತಿಯಲುಪದಿಷ್ಟ ಸರವಾರ್ಥದ ರಹಸ್ಯಗಳ | ಸ್ಕೃತಿ ಪುರಾಣೋಕ್ಕಸುಂದರಬೋಧಚರಿತಗಳ | ಇತಿಹಾಸದಲಿ ಧರ್ಮರಕ್ಷಣದ ಮರ್ಮವನು ! ಅತಿಗಳೆದು ನಡೆಯುವರ ದಂಡಿಸುವ ರೀತಿಯನು || ಕರುಣಪ್ರಧಾನನಾಟಕಕಥಾಯೋಜನವ | ಗುರುಭಾವಗಳ ಮನದಲೆಬ್ಬಿಸುವ ಗಾಯನವ || ಚಿ೦ತಿಸುತ ನುತ್ತೆ ಭಾವಿಸುತ ಗುಸ್ವಾರ್ಥವನು ! ಇಂತು ನಾನಾಸರಿಯಲಿರುಳೆಲ್ಲ ಕಳೆಯುವೆನು || ಬೆಳಗು ಮುಗಿಲನು ತಳೆದು ಬರಲು ಮರುತನು ಬೀಸಿ ಗಳಗಳನೆ ಮಳೆಹನಿದು ಹೊಗಲೆಲೆಗಳ ನನಸಿ || ೬೬