ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸು ಚೈತ್ರಾಷಾಢ ವ್ಯಾಕರಣ ರಚನೆ. ಕ ಕ ಹರ್ಸಟಕ ಸ: % ಸುಂದರವೂ ಆದ ಪ್ರಯೋಗಗಳು ಇದ್ದರೆ ಅವುಗಳನ್ನು ಲಕ್ಷ್ಮವಾಗಿಟ್ಟು ಕೊಳ್ಳಲೇ ಬೇಕು. ಇಷ್ಟೇ ಅಲ್ಲ, ವ್ಯಾವಹಾರಿಕವಾಗಿ ಮಾತನಾಡುವುದರಲ್ಲಿ ಸಹ ಪ್ರಸಾದ ಯುಕ್ತವಾದ ಪ್ರಯೋಗವು ವ್ಯಕ್ತವಾದರೆ ಅದನ್ನು ಸ್ವೀಕರಿಸಲೇಬೇಕು. ವೈದ್ಯ ಶಾಸ್ತ್ರವನ್ನು ವಿವೇಚಿಸುವಾಗ, ಜನನೇಂದ್ರಿಯಗಳ ಗುಹ್ಯರೋಗಗಳನ್ನೂ ಮೂತ್ರಾ ಶಯದಲ್ಲಿರುವ ಹೊಲಸನ್ನೂ ನಾಚಿಕೆ ಓಕರಿಕೆಗಳಮೂಲಕ ಪ್ರತಿಪಾದಿಸದೆ ಬಿಟ್ಟರೆ, ಅದು ಶಾಸ್ತ್ರವಾಗಬಹುದೇ ? ಅಥವಾ ಅವನು ಶಾಸ್ತ್ರಕಾರನಾಗಬಹುದೇ ? ಇದೇಮೇರೆಗೆ, ವೈಯಾಕರಣರು ಅರ್ವಾಚೀನಗ್ರಾಂಥಿಕ ಪ್ರಯೋಗವಿದು, ವ್ಯಾವಹಾರಿಕ ಪ್ರಯೋಗ ವಿದು, ಎಂದು ಉಪೇಕ್ಷಿಸಿದರೆ--ಅವರು ಈ ಇಪ್ಪತ್ತನೆಯ ಶತಮಾನಕ್ಕನುರೂಪ ವಾದ ವ್ಯಾಕರಣವನ್ನು ರಚಿಸಲಾರರು. ನಂಗಸಾಹಿತ್ಯ ಪರಿಷತ್ತಿನವರೂ ಮಹಾ ರಾಷ್ಟ್ರ ಸಾಹಿತ್ಯ ಪರಿಷತ್ತಿನವರೂ ವ್ಯಾವಹಾರಿಕ ಭಾಷೆಯೊಳಗಿನ ಸುಂದರವಾದ ಪ್ರಯೋಗಗಳನ್ನು ಸಂಗ್ರಹಿಸುವುದಕ್ಕಾಗಿಯೇ ಆ ಶಿಶುಸಾಹಿತ್ಯ" CC ಗ್ರಾಮಸಾಹಿತ್ಯ” ಎಂಬ ಎರಡುಶಾಖೆಗಳನ್ನು ಏರ್ಪಡಿಸಿಕೊಂಡಿದ್ದಾರೆ. ಶಿಶುಸಾಹಿತ್ಯದಲ್ಲಿ - « ಕೂಸಾಡಿ ಬರಲೆನ್ನಾ ಕುಂಚಿಗಿ ಹೋಲಿಸೀನ : ಗೊಂಚಲಮುತ್ತ ಬಿಗಿಸೇನ ” ! ಎಂದು ಶಿಶುಗಳ ತೊಟ್ಟಿಲನ್ನು ತೂಗುವಾಗ ಒಲನೆಯರು ಹೇಳುವ ಜೋರು ಘದ ಅಥವಾ ಲಾಲಿಯ ಹಾಡುಗಳನ್ನೂ, ಮನೆಯ ಅಂಗಳದಲ್ಲಿ ಹುಡುಗರನ್ನು ಎತ್ತಿಕೊಂಡು, ಮಮತೆಯಿಂದ ಆಡಿಸುವಾಗ “ ತಾರಮ್ಮಯ್ಯ ತ೦ದುತೋರಮ್ಮಯ್ಯ, ರಘುಕುಲ ರಾಮಚ೦ದ್ರನ್ನ ? ಮುಂತಾಗಿ ಹೇಳುವ ಚಿಕ್ಕ ಚಿಕ್ಕ ಚಿಟಿಕೆಗಳನ್ನೂ ಸಂಗ್ರಹಿಸಿದ್ದಾರೆ. ಗ್ರಾಮ ಸಾಹಿತ್ಯದಲ್ಲಿ ಲಾವಣಿ, ಗಾದೆ, ಉಪಕಥೆ, ಹೆಂಗಸರು ಹೇಳುವ ಮಾಡು ಮುಂತಾ ದುವುಗಳನ್ನು ಶೇಖರಿಸಿದ್ದಾರೆ. ಇಂತಹ ಕೇವಲ ವ್ಯಾವಹಾರಿಕ-ಶಿಶು-ಗ್ರಾಮ-ಸಾಹಿತ್ಯಗಳಲ್ಲಿ ಸುಂದರವಾದ ವಾಕ್ಷ'ಚಾರಗಳೂ ಪ್ರಯೋಗಗಳೂ ತುಂಬಿ ತುಳುಕುತ್ತಿರುತ್ತಿವೆ. ಅವುಗಳನ್ನು ಅಲ್ಲಿಂದ ಕಿತ್ತು ಕೊಂಡು ಶುದ್ದವಾದ ಬರೆವಣಿಗೆಯಿಂದ ಗ್ರಂಥಗಳಲ್ಲಿ ಉಪಯೋಗಿ ಸಿದರೆ, ಆಗ್ರಾಂಥಿಕ ಭಾಷೆಯು ವಾಚಕರ ಮನಸ್ಸನ್ನು ಆಕರ್ಷಿಸಿ ಬಿಡುವುದು! ಆದುದ ರಿಂದ ವೈಯಾಕರಣರು ವ್ಯಾವಹಾರಿಕ ಪ್ರಯೋಗಗಳನ್ನು ಕ್ಷುದ್ರವೆಂದು ಲಕ್ಷ ಮಾಡಕೂಡದು. ಈ ವ್ಯಾಕರಣದಲ್ಲಿ ಐತಿಹಾಸಿಕ ದೃಷ್ಟಿಯಿಂದ ಕನ್ನಡಭಾಷೆಯನ್ನು ವಿಮರ್ಶಿ ಸುವುದು ಅತ್ಯಾವಶ್ಯಕವಾಗಿದೆ. ಕನ್ನಡಭಾಷೆಯ ಪೂರ್ವಸ್ಥಿತಿ ಹೇಗೆ ಇತು, ಅದರಲ್ಲಿ ಉತ್ತರೋತ್ತರ ಹೇಗೆಹೇಗೆ ಬದಲಾವಣೆಯಾಗುತ್ತ ಬಂದಿತು, ಎಂಬುದನ್ನು ವಿವರಿಸಿದರೆ, ವ್ಯಾಕರಣದೊಳಗಿನ ಸಂದಿಗ್ಧವಾದ ಎಷ್ಟೋ ಸ್ಥಳಗಳ ಮೇಲೆ ಸ್ವಚ್ಛ ನಾದ ಪ್ರಕಾಶವು ಬೀಳುವುದು : ಎಂದರೆ ಆ ಸಂಶಯಗಳು ನಿವಾರಣೆಯಾಗುವುವು. ಆದುದರಿಂದ ಈ ಐತಿಹಾಸಿಕತಿಯನ್ನು ವೈಯಾಕರಣರು ಸ್ವೀಕರಿಸಬೇಕು.