ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xi ಅರಿಕೆ (ಪರಿಷ್ಕೃತ ಆವೃತ್ತಿ)

ಎಂ.ವಿ.ಸೀ. ಸಂಸ್ಮರಣ ಸಮಿತಿಯ ಪರವಾಗಿ ಪ್ರತಿಷ್ಠಾನ ಪ್ರಕಟಿಸಿದ 'ಕದಂಬ' - ಎಂ.ವಿ.ಸೀ. ಅವರ ಸಮಗ್ರ ಸಂಶೋಧನ ಲೇಖನಗಳ ಸಂಪುಟದ ಪ್ರಕಟನೆ ಒಳ್ಳೆಯ ಆರಂಭವೇ ಆಯಿತು. 'ಎಂ.ವಿ. ಸೀ, ಸಮಗ್ರ ಸಾಹಿತ್ಯ ಮಾಲೆಯ ಯೋಜನೆಗಾಗಿ ಪೂಜ್ಯ ಎಂ.ವಿ.ಸೀ. ಅವರ ಪುತ್ರರಾದ ಶ್ರೀಯುತರಾದ ಎಂ.ಎಸ್.ಬಾಸ್ಕರ್, ಎಂ.ಎಸ್.ರಾಮಪ್ರಸಾದ್, ಎಸ್.ಟಿ.ರಾಧಾಕೃಷ್ಣ, ಎಂ.ಎಸ್. ಶೇಷಾದ್ರಿನಾಥ್ ಮತ್ತು ಶ್ರೀಮತಿ ಶಾರದಾ ನಾಗರಾಜ್ ಅವರುಗಳು ಸೀತಾರಾಮಯ್ಯನವರ ಸ್ವಂತ ಪ್ರಕಾಶನ ಸಂಸ್ಥೆಯಾದ 'ರಾಘವ ಪ್ರಕಾಶನ'ದ ಹೆಸರಿನಲ್ಲಿ 'ರಾಘವ ಪ್ರಕಾಶನ ದತ್ತಿ ನಿಧಿ'ಯನ್ನು ಪ್ರತಿಷ್ಠಾನದಲ್ಲಿ ಸ್ಥಾಪಿಸಿದ್ದಾರೆ. ಇದರ ಉದ್ದೇಶ ಎಂ.ವಿ.ಸೀ. ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವುದು; ಈ ಸಂಪುಟಗಳ ಮತ್ತು ಎಂ.ವಿ.ಸೀ. ಅವರ ಬಿಡಿ ಕೃತಿಗಳ ಮಾರಾಟದಿಂದಲೇ ಮುಂದಿನ ಸಂಪುಟಗಳಿಗೆ ಸಂಪನ್ಮೂಲವನ್ನು ರೂಪಿಸಿಕೊಳ್ಳುವುದು ; ಎಂ.ವಿ.ಸೀ. ಅವರ ಸಾಹಿತ್ಯ ಎಲ್ಲ ಕಾಲದಲ್ಲೂ ಸಾಹಿತ್ಯಸಕ್ತರಿಗೆ ದೊರಕುವಂತೆ, ಮುದ್ರಿಸುತ್ತ - ಪುನರ್ಮುದ್ರಿಸುತ್ತ ಹೋಗುವುದು. ಪ್ರತಿಷ್ಠಾನದ ಸಂಸ್ಥಾಪಕರಾದ ಪೂಜ್ಯರನ್ನು ಪ್ರತಿಷ್ಠಾನ ಸದಾ ಸ್ಮರಿಸಿಕೊಳ್ಳಲು ಇದು ಸದವಕಾಶವಾಯಿತು. ಕವಿರಾಜಮಾರ್ಗ ಎಂ.ವಿ.ಸೀ. ಸಮಗ್ರ ಸಾಹಿತ್ಯ ಮಾಲೆಯ ಎರಡನೆ ಸಂಪುಟ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಕೃತಿಗೆ ವಿಶೇಷವಾದ ಸ್ಥಾನವಿದೆ. ಇದು ಸೀತಾರಾಮಯ್ಯನವರ ಪ್ರಸಿದ್ಧ ಸಂಪಾದಿತ ಕೃತಿ. ಅವರಿಗೆ ಸಂಶೋಧಕರೆಂದು ಹೆಸರು ತಂದುಕೊಟ್ಟ ಕೃತಿಯೂ ಹೌದು. ಅವರ ಪಾಂಡಿತ್ಯ ಬಹುಶ್ರುತತ್ವ, ಪ್ರತಿಭೆ, ವಿದ್ವತ್ತುಗಳಿಗೆ ಈ ಕೃತಿ ಸಾಕ್ಷಿಯಾಗಿದೆ. ಈ ಕೃತಿಯನ್ನು ಸೀತಾರಾಮಯ್ಯನವರು ಮೊದಲು ಪ್ರಕಟಿಸಿದ್ದು ೧೯೬೮ರಲ್ಲಿ, ಬೆಂಗಳೂರಿನ ಸರ್ಕಾರಿ ಕಾಲೇಜಿನ ಕರ್ನಾಟಕ ಸಂಘದ ಮೂಲಕ. ಅನಂತರ ಆರು ವರ್ಷಗಳ ಅಂತರದಲ್ಲಿ ೧೯೭೫ರಲ್ಲಿ ಮೈಸೂರಿನ ಡಿ.ವಿ.ಕೆ. ಮೂರ್ತಿ ಅವರ ಮೂಲಕ 'ಕಿರಿಯ ಆವೃತ್ತಿಯಾಗಿ ಪ್ರಕಟಿಸಿದರು. ಈ ಎರಡೂ ಆವೃತ್ತಿಗಳಿಗೆ ಸಾಕಷ್ಟು ವ್ಯತ್ಯಾಸಗಳಿವೆ. ಮೊದಲ