ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪಾದಕೀಯ

ಪ್ರೀತಿಯ ಓದುಗರೇ....
ಈ ಸಂಚಿಕೆಯಲ್ಲಿ ಹುಲಿಗಳ ಹಾದಿಯಲ್ಲಿ ಸೋಲಿಗ.” ಎಂಬ ಲೇಖನವನ್ನು ಪ್ರಕಟಿಸಲಾಗಿದೆ, ಸೋಲಿಗರ ಹಿತರಕ್ಷಣೆಯೇ ? ಹುಲಿಗಳ ಸಂರಕ್ಷಣೆಗೆ ? ಎಂಬ ವಿಷಯ ಇತ್ತೀಚಿನ ದಿ ನಗಳಲ್ಲಿ ಪರ-ವಿರೋಧಗಳ ಕುರಿತು ಚರ್ಚೆಗಳು ನಡೆಯುತ್ತಿವೆ, ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತಾರಣ್ಯವೆಂದು ಘೋಷಿತವಾದದ್ದು ತಮ್ಮಗೆಲ್ಲ ಗೊತ್ತಿರುವ ವಿಚಾರವೇ. . .ಆದರೆ ಇಲ್ಲಿ ಹುಲಿ ಸಂರಕ್ಷಣೆಗೆ ಅಗುವ ತೊಂದರೆಗಳು ಕಡಿಮೆಯೇನಲ್ಲ, ಹಲವಾರು ಬುಡಕಟ್ಟು ಜನಾಂಗಗಳು ಇಲ್ಲಿ ವಾಸವಾಗಿವೆ, ಅವು ನೇರವಾಗಿ ಅಲ್ಲದಿದ್ದರು ಪರೋಕ್ಷವಾಗಿ ಹುಲಿ ಸಾಮ್ರಾಜ್ಯದ ಮೇಲೆ ಪ್ರಭಾವ ಬೀರುತ್ತವೆ. ಮತ್ತೂಂದು, ಮನುಷ್ಯ ಭೂಮಿಂದ ಮೇಲೆ ನಾಗರೀಕತೆ ವಿಶ್ವವ್ಯಾಪಿಂವಾಗುತ್ತ ಬಂದಾಗ ನಿಸರ್ಗದ ಸಂಪನ್ಮೂಲಗಳ ಬಳಕೆಯ ಪ್ರಮಾಣ ಹೆಚ್ಚುತ್ತಾ ಬಂದ ಹಾಗೆಲ್ಲ, ಕಾಡು ಪ್ರಾಣಿಗಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮವಾಗತೊಡಗಿದೆ ಎಂಬುದು ತಮಗೆಲ್ಲ ಗೊತ್ತು. ಹುಲಿ ಸಂರಕ್ಷಣೆಯ ಬಗ್ಗೆ ಸೋಲಿಗ ಎಂಬ 'ಹಸಿದ ಹೊಟ್ಟೆ 'ಗಳಿಗೆ ಕಾಳಜಿ, ಕನಿಕರ ಎಲ್ಲಿಂದ ಬರಬೇಕು? ಎಂಬುದನ್ನು “ಹುಲಿಗಳ ಹಾ ದಿಂದಲ್ಲಿ ಸೋಲಿಗ.” ಎಂಬ ಲೇಖನದಲ್ಲಿ ಬಣ್ಣಿಸಲಾಗಿದೆ.
ಅದೇ ರೀತಿ ಈ ಸಂಚಿಕೆಯಲ್ಲಿ ಕೆ.ಪಿ.ಶಂಕರಪ್ಪರವರು ಬರೆದಿರುವ “ಕಾಡೆಮ್ಮೆ ಬೇಟೆ” ಸಣ್ಣಕತೆಯು ತುಂಬ ವೈವಿಧ್ಯತೆ ಯಿಂದ ಮೂಡಿಸಿದ್ದಾರೆ. ಹದಿನಾಲ್ಕು ಹಳ್ಳಿಜನಗಳು ಪಾರೆ ಸ್ಸುಗಳಿಗೆ ಹೆದರಿ ಬೇಟೆ ಯನ್ನು ನಿಲ್ಲಿಸಿ ಹಲವು ವರ್ಷಗಳೇ ಕಳೆದಿದ್ದರು ಸಹ, ಈ ಸೊಳ್ಳೆಪುರದ ಜನ ಮಾತ್ರ ಚಾಟರ ಬಿಲ್ಲು, ತಂತಿ ಹುರುಳು, ಕಲ್ಲು ಹುರುಳು, ಇಲಿಬೇಟೆ, ಉಡ ಬೇಟೆ, ಹೀಗೆ ಹಲವಾರು ಶಬ್ದರಹಿತ ಸಾಕ್ಷಿ-ಕುರುಹುರಹಿತವಾಗಿ ಕಾಡು ಸೋಸುವ ಕಾರ್ಯ ನಿರಾಳವಾಗಿ ನಡೆಸುತ್ತಿದ್ದವರಲ್ಲಿ ಸೊಳ್ಳೆಪುರದ “ಭೂಪ ಮಾದೇವ ಒಬ್ಬ, ಕಡವೆಂದೆ? ಕಾಡೆಮ್ಮೆಯೋ? ಇರಬೇಕು ಎಂಬ ಸಂಶಯದಿಂದ ಪೊದರಿನಿಂದ ತಲೆ ಕಾಣಿಸಿದ್ದೇ ತಡ ಇಕ್ಕಡಿಸಿ ಬಿಟ್ಟ! ಆದ ಅನಹುತ ನೆಡಿ. .! ಅದು ಕೊರವರದೊಡ್ಡಿ ಈರಿಂದ ಕಾಡುದನ, ಅದನ್ನು ನೋಡಿ ಮಾದೇವನಿಗೆ ಮೈಯೆಲ್ಲಾ ತಣ್ಣಗಾಗಿದ್ದು, ನ್ಯಾಯ , , ದಂಡ... ಎಲ್ಲಾವನ್ನು ಕಣದೆ ಚಿತ್ರ ಮೂಡಿಸುವಂತೆ ಚಿತ್ರಿಸಿದ್ದಾರೆ.
ಪ್ರಕೃತಿಂತು ಬಗ್ಗೆ ಅರಿವು ಮೂಡಿಸುವ ನಮ್ಮ ಪುಟ್ಟ ಪತ್ರಿಕೆಯನ್ನು ಓದಿ ಸಲಹೆ ಸೂಚನೆಯನ್ನು ನಿಮ್ಮಿಂದ ಆಶಿಸುತ್ತೇವೆ. ಮತ್ತು ಈ ಪತ್ರಿಕೆಯು ನಿಮಗಾಗಿಯೇ ಇದೆ, ವನ್ಯಲೋಕ, ಕಾಡು, ಪ್ರಾಣಿ ಪಕ್ಷಿಗಳು, ಮತ್ತು ಸಾಹಿತ್ಯ ವಿಚಾರಗಳು, ಕವನ, ಕಥೆಗಳು, ವಿಜ್ಞಾನ, ಪ್ರವಾಸ, ಛಾಯಾಚಿತ್ರಗಳು ಮುಂತಾದ ವಿಷಯಗಳನ್ನು ಲೇಖನಗಳ ಮೂಲಕ ಈ ಜಗತ್ತಿಗೆ ಸಾದರಪಡಿಸಬಹುದು. ಲೇಖನಗಳನ್ನು ಕಳುಹಿಸಬಹುದಾದ ಇ-ಮೇಲ್ ವಿಳಾಸ : kaanana.mag@gmail.com ಗೆ ಕಳುಹಿಸಿ.