ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ ಎಲ್ಲ ಪ್ರಾಣಿಗಳಲ್ಲಿ ಜೀವವಿರುವವರೆಗೆ ಹಸಿವು ಬಾಯಾರಿಕೆ ನಿದ್ರೆ ಮೊದಲಾದ ಸಂವೇದನೆಗಳು ಇರತಕ್ಕವುಗಳೇ, ಅವುಗಳ ಅಪೇಕ್ಷೆಯನ್ನು ತಿರಸ್ಕರಿಸಿ ಯಾರೂ ಸುಖವಾಗಿ ಇರಲಾರರು; ಅಲ್ಲದೆ ಅವುಗಳು ಸ್ವಾಭಾ ವಿಕವಾಗಿ ಹುಟ್ಟದಿದ್ದರೂ ಪ್ರಾಣಿಗಳಿಗೆ ಸುಖವಿಲ್ಲ. ಆಗ ಅದು ರೋಗವೆನಿ ಸುವದು. ಕಾಮವು ಕೂಡ ಸ್ವಾಭಾವಿಕವಾದ ಒಂದು ಸಂವೇದನೆಯೇ ಆಗಿದೆ. ಎಲ್ಲರಲ್ಲಿಯೂ ಕಾಲಕ್ಕೆ ಸರಿಯಾಗಿ ಹುಟ್ಟತಕ್ಕದ್ದೇ ಅದು. ಮತ್ತು ಹಸಿವೆ ಬಾಯಾರಿಕೆಗಳಂತೆ ಅದೂ ತೃಪ್ತಿಯನ್ನೇ ಹೊಂದಲೆತ್ನಿಸುತ್ತದೆ. ಆಗ ಅದಕ್ಕೆ ತಕ್ಕ ಸಾಧನ ಸನ್ನಿವೇಶಗಳು ಸಿಕ್ಕದಿದ್ದರೆ ಅದು ಅಡ ದಾರಿ ಹಿಡಿಯುತ್ತದೆ. ಮನುಷ್ಯನ ಜೀವನವು ಪ್ರಕೃತಿಯಿಂದ ಎಷ್ಟೆಷ್ಟು ದೂರ ಹೋಗು ವದೋ, ಅಮ್ಮ ಅವನ ಸಂವೇದನೆಗಳೂ ಅನೈಸರ್ಗಿಕವಾಗಿಯೂ, ಅಕಾಲದಲ್ಲಿಯೂ ಹುಟ್ಟಲಾರ೦ಭಿಸುವವು; ಕಾಮವು ಕೂಡ ಈ ನಿಯಮಕ್ಕೆ ಹೊರತಾಗಿಲ್ಲ. ಬೇಕಾಗಿಯೋ ಬೇಡವಾಗಿಯೋ ಜೀವನವಂತೂ ಅನ್ನಸ ರ್ಗಿಕವಾಗಿ ಬಿಟ್ಟಿದೆ. ಆದರೆ ಅದರೊಡನೆ ಅಡ್ಡದಾರಿ ಹಿಡಿದ ಸಂವೇದನೆ ಗಳು, ಅಪಾಯಕಾರಕವಾಗದಂತಿರಬೇಕಾದರೆ, ಅವಕ್ಕೆ ಕೆಲವು ನಿಬಂಧಗ ಳನ್ನು ಹಾಕಬೇಕಾಗುತ್ತದೆ. ಹಸಿವು ಬಾಯಾರಿಕೆಗಳ ಜ್ಞಾನ ಮತ್ತು ನಿಬಂಧ ನೆಗಾಗಿ ಶರೀರಸಂವಿಧಾನ ಮತ್ತು ಶರೀರಧರ್ಮ ಶಾಸ್ತ್ರ (Anatomy and Physiology) ಗಳು ಹುಟ್ಟಿದವು. ಹಾಗೆಯೇ ಕಾಮದ ಜ್ಞಾನ ಮತ್ತು ಯೋಗ್ಯ ನಿಬಂಧನೆಗಾಗಿ ಕಾಮಶಾಸ್ತ್ರವು (Sexuology) ಹುಟ್ಟದೆ. ಮನುಷ್ಯನ ಪೂರ್ಣಾರೋಗಕ್ಕೆ ಶಾರೀರ ಶಾಸ್ತ್ರಗಳು ಎಷ್ಟು ಅವಶ್ಯವೋ, ಕಾಮಶಾಸ್ತ್ರವೂ ಅಷ್ಟೇ ಅವಶ್ಯವಾಗಿದೆ. ಆದ್ದರಿಂದ ಕಾಮಶಾಸ್ತ್ರದ ವಿಷ ಯದಲ್ಲಿ ಸಾಮಾನ್ಯವಾಗಿ ಜನರಲ್ಲಿರುವ ಕುತ ಭಾವನೆಯು ವಿವೇಕ ಸಮ್ಮತವಾದುದಲ್ಲ.